ಹೇರೂರು ಜನತೆಯ ಪಾಲಿಗೆ ಉಪ್ಪು ನೀರೇ ಗತಿ…!​​​​​​​

Team Udayavani, Apr 12, 2018, 6:00 AM IST

0904bvre3.jpg

ಬ್ರಹ್ಮಾವರ: ಉಪ್ಪು ತಿಂದವ ನೀರು ಕುಡಿಯಬೇಕು ಎನ್ನುವ ಮಾತಿದೆ. ಆದರೆ ಚಾಂತಾರು ಗ್ರಾ.ಪಂ. ವ್ಯಾಪ್ತಿಯ ಹೇರೂರು ಜನರು ಉಪ್ಪು ಮತ್ತು ನೀರು ಒಟ್ಟಿಗೆ ಕುಡಿಯುವ ದುಃಸ್ಥಿತಿ ಇದೆ!

ಹೇರೂರು ಮಡಿಸಾಲು ಹೊಳೆಬದಿ, ನಾಯಕರತೋಟ, ಕಳುವಿನ ಬಾಗಿಲು, ಭಜನಾ ಮಂದಿರ ವಠಾರದಲ್ಲಿ ಉಪ್ಪು ನೀರಿನ ತೀವ್ರ ಸಮಸ್ಯೆ ಇದೆ. 

ಹೆರಂಜೆ ಕಿಂಡಿ ಅಣೆಕಟ್ಟು ಸಮೀಪದ ಪಂಚಾಯತ್‌ ಬಾವಿಯಿಂದ ಮಾರಿಕಟ್ಟೆ, ರಾಜೀವನಗರ ಮೊದಲಾದ ಪ್ರದೇಶಗಳಿಗೆ ನೀರಿನ ಪೂರೈಕೆಯಾಗುತ್ತಿದೆ.
 
ಬೇಸಗೆಯಲ್ಲಿ ಈ ನೀರು ಉಪ್ಪು ನೀರಾಗಿ ಬದಲಾಗುತ್ತದೆ. ಇಲ್ಲಿ ಶುದ್ಧೀಕರಣ ಘಟಕವಿದ್ದರೂ ಉಪ್ಪುನೀರನ್ನು ಸಿಹಿ ನೀರಾ ಗಿಸುವ ಯಾವುದೇ ಯೋಜನೆ ಇಲ್ಲ.

ಬ್ರಹ್ಮಾವರ ಸುತ್ತಮುತ್ತ ನೀರಿಗೆ ಬರ!
ಹೇರೂರಿನಲ್ಲಿ ಉಪ್ಪು ನೀರಿನ ಸಮಸ್ಯೆಯಾದರೇ ಬ್ರಹ್ಮಾವರ ಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೇ ತತ್ವಾರ. 
ಚಾಂತಾರು ಗ್ರಾಮದಲ್ಲಿ ಸುಮತಿ ಫಾರ್ಮ್ ವಠಾರ, ಬಾಕೂìರು ಗ್ರಾ.ಪಂ. ವ್ಯಾಪ್ತಿಯ ಜೆಕೆ ಕುದ್ರು, ಕಳುವಿನ ಬಾಗಿಲು, ಕಚ್ಚಾರು ಹೊಳೆಬದಿಗಳಲ್ಲಿ ನೀರಿನ ಅಭಾವ ಎದುರಾಗಿದೆ. 

ಹಂದಾಡಿ ಗ್ರಾ.ಪಂ. ವ್ಯಾಪ್ತಿಯ  ಮಟಪಾಡಿ ಎಸ್‌ಟಿ ಕಾಲನಿ, ಬೆಣ್ಣೆಕುದ್ರು, ರಾಗಿಬೆಟ್ಟು ಪರಿಸರಕ್ಕೆ ಈಗಾಗಲೇ ಟ್ಯಾಂಕರ್‌ ನೀರು ಪೂರೈಕೆ ಪ್ರಾರಂಭಗೊಂಡಿದೆ. 

ಮಟಪಾಡಿ ಅಂಜಾಲು, ಬೋಳುಗುಡ್ಡೆ, ಅಂಬಾಗಿಲು, ಮಸೀದಿ ರಸ್ತೆ, ಶಾಲೆ ಬಳಿ, ಬಲ್ಜಿ 5 ಸೆಂಟ್ಸ್‌, ಪರಿಸರದಲ್ಲಿ ಪ್ರತಿ ವರ್ಷ ತೀವ್ರ ಸಮಸ್ಯೆ ತಲೆದೋರುತ್ತದೆ. ವಾರಂಬಳ್ಳಿ ಗ್ರಾ.ಪಂ.  ವ್ಯಾಪ್ತಿಯ ಬ್ಯಾಂಕರ್ ಕಾಲನಿ, ಬಾಳ್ತಾರು, ಸಾಲಿಕೇರಿ, ಇಂದಿರಾನಗರ, ಗುಡೆಬೆಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. 

ನೀಲಾವರ ಗ್ರಾ.ಪಂ. ವ್ಯಾಪ್ತಿಯ  ಎಳ್ಳಂಪಳ್ಳಿ, ದೀಪಾನಗುಡ್ಡೆ, ಮರ್ಕೊಡಿ, ನೀಲಾವರಗುಡ್ಡೆ, ಮಧ್ಯಸ್ಥರಬೆಟ್ಟಿನಲ್ಲಿ ಸಮಸ್ಯೆ ಪ್ರಾರಂಭಿಕ ಹಂತದಲ್ಲಿದೆ. ಇನ್ನೊಂದು ತಿಂಗಳಲ್ಲಿ ಜಲಮೂಲವೇ ಬರಿದಾಗುವುದರಿಂದ ಟ್ಯಾಂಕರ್‌ ನೀರು ಅನಿವಾರ್ಯವಾಗಿದೆ.
 
ಖಾಸಗಿ ನೀರು ಬಳಕೆ
ಹಾರಾಡಿ ಗ್ರಾ.ಪಂ. ವ್ಯಾಪ್ತಿಯ ಕೀರ್ತಿನಗರ, ಕುಕ್ಕುಡೆ, ಗಾಂಧಿನಗರ 5 ಸೆಂಟ್ಸ್‌ ವಠಾರದಲ್ಲಿ ಪಂಚಾಯತ್‌ ಬಾವಿ ಬರಿದಾಗಿದ್ದು, ಗಾಂಧಿನಗರದಲ್ಲಿ ಖಾಸಗಿ ನೀರನ್ನು ಖರೀದಿಸಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.

ಅಣೆಕಟ್ಟು ಹಲಗೆ ವೈಫಲ್ಯ
ಮಳೆಗಾಲ ಕಳೆದ ಅನಂತರ ಅಣೆಕಟ್ಟಿಗೆ ಹಾಕುವ ಹಲಗೆ ಒಂದೇ ಅಂತರದಲ್ಲಿಲ್ಲ. ಪರಿಣಾಮ ಫೆಬ್ರವರಿ, ಮಾರ್ಚ್‌ನಲ್ಲಿ ಸಂಗ್ರಹಗೊಂಡ ಸಿಹಿ ನೀರು ಸೋರಿಕೆಯಾಗಿ ಬಹುಬೇಗನೆ ಖಾಲಿಯಾಗುವುದು ಒಂದು ಸಮಸ್ಯೆಯಾದರೆ, ಎಪ್ರಿಲ್‌ನಲ್ಲಿ ಅಣೆಕಟ್ಟಿನ ನೀರಿನ ಸಂಗ್ರಹ ಕುಸಿತಗೊಂಡು ಉಬ್ಬರ ಸಂದರ್ಭ ಉಪ್ಪು ನೀರು ಬಂದು ಸಿಹಿ ನೀರಿಗೆ ಸೇರುವುದು ಇನ್ನೊಂದು ಸಮಸ್ಯೆ.ಇದರ ಪರಿಣಾಮ ಅಣೆಕಟ್ಟಿನ ಸಮೀಪದ ಸರಕಾರಿ ಬಾವಿ ನೀರೂ ಉಪ್ಪಾಗುತ್ತದೆ.

ರಸ್ತೆ ವಿಸ್ತರಣೆ: ಅವಾಂತರ
ಕುಂಜಾಲಿನಿಂದ ಆರೂರು ತೆಂಕ ಬೆಟ್ಟು ರಸ್ತೆ ವಿಸ್ತರಣೆ ನಡೆದಿದ್ದು, ಕಾಮಗಾರಿ ಪೂರ್ವದಲ್ಲಿ ರಸ್ತೆ ಬದಿಯ ನೀರಿನ ಪೈಪ್‌ ಸ್ಥಳಾಂತರ ಗೊಳಿಸದ್ದರಿಂದ ಕಳೆದೆರಡು ತಿಂಗಳುಗಳಿಂದ ಪೈಪ್‌ ಅಲ್ಲಲ್ಲಿ  ಒಡೆದು ನೀರು ಪೋಲಾಗುತ್ತಿದೆ. ಹಲವೆಡೆ ಪೈಪ್‌ಲೈನ್‌ ಮೇಲೆಯೇ ಡಾಮರೀಕರಣ ನಡೆಸಲಾಗಿದೆ. ಸುಮಾರು 3 ಕಿ.ಮೀ.ವರೆಗೆ ಇದೇ ಪರಿಸ್ಥಿತಿ ಇದೆ.  

ಮನವಿ ಮಾಡಿದ್ದೆವು
ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭದಲ್ಲೇ ಪಿಡಬ್ಲೂéಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದೆವು. ಆದರೂ ಪೈಪ್‌ಲೈನ್‌ ಸ್ಥಳಾಂತರಗೊಳಿಸದೆ ಕಾಮಗಾರಿ ನಡೆಸಿದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗುವ ಆತಂಕವಿದೆ. ಜತೆಗೆ ಪಂಚಾಯತ್‌ಗೆ ಹೊಸ ಟ್ಯಾಂಕ್‌ನ ಅಗತ್ಯವಿದೆ.
– ಗೀತಾ ಬಾಳಿಗಾ, ಪಿಡಿಒ ಆರೂರು

ಹೊಸ ಸಂಪರ್ಕ
ಬೇಸಗೆಯಲ್ಲಿ ಹೆರಂಜೆ ಬಾವಿಯ ನೀರು ಉಪ್ಪಾಗುವುದರಿಂದ ಈ ಬಾರಿ ತುಂಬೆಟ್ಟು ಕೆರೆಯ ಪಕ್ಕ ಹೊಸ ಬೋರ್‌ವೆಲ್‌ ತೋಡಲಾಗಿದೆ. ಶೀಘ್ರದಲ್ಲಿ ಇಲ್ಲಿಂದ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಲಾಗುವುದು. ತೀವ್ರ ಕೊರತೆ ಇರುವಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು.
-ಶ್ರುತಿ ಕಾಂಚನ್‌, ಪಿಡಿಒ ಚಾಂತಾರು

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.