ಸೌರವಿದ್ಯುತ್ ಗುರಿ 1,870 ಮೆ.ವ್ಯಾ. ಉತ್ಪಾದನೆ ಕೇವಲ 12.54ಮೆ.ವ್ಯಾ.
Team Udayavani, Apr 12, 2018, 10:50 AM IST
ಕಾಸರಗೋಡು: 2022ರ ವೇಳೆಗೆ ಕೇರಳದಲ್ಲಿ 1,870 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಮಹತ್ತರವಾದ ಗುರಿಯನ್ನು ರಾಜ್ಯ ವಿದ್ಯುತ್ ಮಂಡಳಿ ಹೊಂದಿದ್ದರೂ ಇದೀಗ ಉತ್ಪಾದಿಸಲಾಗುವ ವಿದ್ಯುತ್ ಪ್ರಮಾಣ ಕೇವಲ 12.54 ಮೆಗಾವ್ಯಾಟ್ ಮಾತ್ರವೇ ಆಗಿದೆ. ಅಂಬಲತ್ತರದಲ್ಲಿ ಸೌರ ವಿದ್ಯುತ್ ಕೇಂದ್ರವನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ ಈಗ ಕನಿಷ್ಠ ಮಟ್ಟದ ವಿದ್ಯುತ್ ಮಾತ್ರವೇ ಉತ್ಪಾದಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 1,200 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ವಿದ್ಯುತ್ ಮಂಡಳಿ ಹಾಕಿಕೊಂಡಿದೆ.
ಇದರ ಹೊರತಾಗಿ ಮನೆಗಳ ಮೇಲ್ಛಾವಣಿಗಳಲ್ಲಿ ಸೌರ ಪ್ಯಾನಲ್ಗಳನ್ನು ಅಳವಡಿಸಿ 970 ಮೆಗಾವ್ಯಾಟ್, ಅಣೆಕಟ್ಟುಗಳ ಮೇಲೆ ಪ್ಯಾನಲ್ಗಳನ್ನು ಸ್ಥಾಪಿಸಿ 600 ಮೆಗಾವ್ಯಾಟ್ ಮತ್ತು ಬಂಜರು ಭೂಮಿಗಳಲ್ಲಿ ಪ್ಯಾನಲ್ಗಳನ್ನು ನಿರ್ಮಿಸಿ 300 ಮೆಗಾವ್ಯಾಟ್ಸೌರ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ವಿದ್ಯುತ್ ಮಂಡಳಿ ಹಾಕಿಕೊಂಡಿದೆ. ಆದರೆ ಈ ಎಲ್ಲಾ ಯೋಜನೆಗಳನ್ನು ಸೇರಿಸುವಾಗ 103.92 ಮೆಗಾವ್ಯಾಟ್ ಮಾತ್ರವೇ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಮಂಡಳಿಯು ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂದಿನ ವರ್ಷ ಹೊಸದಾಗಿ 17 ಸೌರ ವಿದ್ಯುತ್ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದಿಸುವ ಉದ್ದೇಶವಿದ್ದು, ಆದರೆ ಇದುವರೆಗೆ ಕೇವಲ 12.54 ಮೆಗಾವ್ಯಾಟ್ ವಿದ್ಯುತ್ ಮಾತ್ರವೇ ಉತ್ಪಾದಿಸಲು ಸಾಧ್ಯವಾಗಿರುವುದು ಅಚ್ಚರಿಗೂ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಸೌರ ವಿದ್ಯುತ್ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದರೂ ಅದಕ್ಕೆ ಅಗತ್ಯದ ಭೂಸ್ವಾಧೀನ ಕ್ರಮ ಇನ್ನೂ ಆರಂಭಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.