ಸ್ಥಳೀಯಾಡಳಿತ ಸದಸ್ಯರ ಆಸ್ತಿ ವಿವರ ಆನ್‌ಲೈನ್‌ನಲ್ಲಿ


Team Udayavani, Apr 12, 2018, 9:15 AM IST

Karnataka-State-Election-Commission-600.jpg

ಮಂಗಳೂರು: ಒಂದೆಡೆ, ರಾಜ್ಯ ವಿಧಾನಸಭಾ ಚುನಾವಣೆಗೆ ನಾನಾ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿರಬೇಕಾದರೆ, ಇನ್ನೊಂದೆಡೆ ಜಿ.ಪಂ., ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಸದಸ್ಯರು ತಮ್ಮ ಹಾಗೂ ಕುಟುಂಬದ ಆಸ್ತಿ, ಹೊಣೆಗಾರಿಕೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ಇದರಿಂದ ಇನ್ನುಮುಂದೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಆಸ್ತಿ ವಿವರಗಳು ಕೂಡ ಸಾರ್ವಜನಿಕರಿಗೆ ಲಭ್ಯವಾಗುವ ಮೂಲಕ ಹೆಚ್ಚು ಪಾರದರ್ಶಕವೆನಿಸಿಕೊಳ್ಳಲಿದೆ. ಇಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ಆಸ್ತಿ ಹಾಗೂ ಹೊಣೆಗಾರಿಕೆ ವಿವರದ ಪ್ರತಿಯನ್ನು ಕೈಬರಹದ ಮೂಲಕ ಆಯೋಗಕ್ಕೆ ಸಲ್ಲಿಸಬೇಕಿತ್ತು. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಆಸ್ತಿ ಹಾಗೂ ಹಾಗೂ ಹೊಣೆಗಾರಿಕೆ ವಿವರ ಸಾರ್ವಜನಿಕರಿಗೆ ಮುಕ್ತವಾಗಿ ದೊರಕಬೇಕು ಹಾಗೂ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕೈಬರಹದ ಮೂಲಕ ಸಲ್ಲಿಸುವುದರ ಬದಲಿಗೆ ಆನ್‌ಲೈನ್‌ ಮೂಲಕವೇ ನೀಡಬೇಕೆಂದು ಸಾರ್ವಜನಿಕರಿಗೂ ನೋಡಲು ಸಿಗಲಿದೆ.

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ನಿಯಮಾನುಸಾರ ಪ್ರತಿ ವರ್ಷ ಸಲ್ಲಿಸಬೇಕಾಗಿರುವ ಅವರ ಹಾಗೂ ಅವರ ಕುಟುಂಬದ ಆಸ್ತಿ ಘೋಷಣೆ ನಮೂನೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಎನ್‌ಐಸಿ ಮುಖೇನ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಬಹುತೇಕ ಜಿ.ಪಂ, ತಾ.ಪಂ ಹಾಗೂ ಗ್ರಾಮ ಪಂಚಾಯತ್‌ ಚುನಾಯಿತ ಜನಪ್ರತಿನಿಧಿಗಳು ತಮ್ಮ ಆಸ್ತಿ, ಹೊಣೆಗಾರಿಕೆಯನ್ನು ಆನ್‌ಲೈನ್‌ ಮೂಲಕ ನಮೂದು ಮಾಡುತ್ತಿದ್ದಾರೆ. ಪ್ರಾಥಮಿಕವಾಗಿ ಸದಸ್ಯರ ಹೆಸರುಗಳನ್ನು ಸಂಬಂಧಪಟ್ಟ ಕ್ಷೇತ್ರಗಳಿಗೆ ಮ್ಯಾಪ್‌ ಮಾಡಬೇಕಿದೆ. ಮ್ಯಾಪಿಂಗ್‌ ತಂತ್ರಾಂಶ ಬಳಸಲು ಆಯೋಗದ ವೆಬ್‌ಸೈಟ್‌ www.karsec.gov.inಗೆ ಲಾಗಿನ್‌ ಆಗಬೇಕಿದೆ. ಅದರಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಅಥವಾ ಗ್ರಾಮ ಪಂಚಾಯತ್‌ ಆಯ್ಕೆ ಮಾಡಿ ಸಂಬಂಧಪಟ್ಟ ಕ್ಷೇತ್ರವನ್ನು ಆರಿಸಬೇಕು. ಆಯಾಯಾ ಸ್ಥಳೀಯ ಸಂಸ್ಥೆಗಳಲ್ಲಿ ಆನ್‌ಲೈನ್‌ ನೋಂದಣಿ ಮಾಡಿಸಬೇಕಿದೆ. ಗ್ರಾ.ಪಂ. ಸದಸ್ಯರು ಆನ್‌ಲೈನ್‌ ಮೂಲಕ ನೋಂದಣಿ ಮಾಡುವಾಗ ಪಿಡಿಓ ಅವರ ಮೊಬೈಲ್‌ ಸಂಖ್ಯೆಗೆ ಆರು ಸಂಖ್ಯೆಯ ಓಟಿಪಿ ಬರುತ್ತದೆ. ಈ ಓಟಿಪಿಯನ್ನು ತಂತ್ರಾಂಶದಲ್ಲಿ ದಾಖಲಿಸಬೇಕು. ಅದರ ಮುಖೇನ ಆಸ್ತಿ ಕುರಿತ ಫಾರಂನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು. ಸದಸ್ಯರ ಕುಟುಂಬದವರ ವಿವರಗಳನ್ನು ಕೂಡ ನಮೂದಿಸಬೇಕಿದೆ. ಒಂದು ವೇಳೆ ಸದಸ್ಯರ ಹೆಸರು ಆನ್‌ಲೈನ್‌ ಮೂಲಕ ನೋಂದಣಿ ಮಾಡುವ ವೇಳೆ ಅವರ ಕ್ಷೇತ್ರಗಳ ಎದುರು ಬಾರದೇ ಇದ್ದರೆ ಅಂತಹ ಸದಸ್ಯರುಗಳನ್ನು ತಮಗೆ ಮುಂದೆ ನೀಡಲಾಗುವ ‘ಸೂಪರ್‌ ಯೂಸರ್‌ ಅಡ್ಮಿನ್‌’ ಲಾಗಿನ್‌ ಮೂಲಕ ಹೊಸ ಸದಸ್ಯರನ್ನು ಸೇರಿಸಲು ಅವಕಾಶವಿದೆ.

ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ ಸದಸ್ಯರು ಅವರ ವಾರ್ಷಿಕ ಆಸ್ತಿ ಹಾಗೂ ಹೊಣೆಗಾರಿಕೆ ವಿವರಗಳನ್ನು ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ವಿವರಗಳನ್ನು ಸಲ್ಲಿಸಿದ್ದಲ್ಲಿ ಅವರನ್ನು ಅನರ್ಹಗೊಳಿಸುವ ಅಧಿಕಾರ ರಾಜ್ಯ ಚು.ಆಯೋಗಕ್ಕೆ ನೀಡಲಾಗಿದೆ. ಆನ್‌ಲೈನ್‌ ಮೂಲಕ ಆಸ್ತಿ ಹಾಗೂ ಹೊಣೆಗಾರಿಕೆ ವಿವರಗಳನ್ನು ಘೋಷಣೆ ಮಾಡಿದ ನಂತರ ಪುನಃ ಅದರ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸುವ ಆವಶ್ಯಕತೆ ಇಲ್ಲ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಿದೆ. 

ಹಣ, ಆಸ್ತಿ, ಒಡವೆ, ಮಾಹಿತಿ
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಿದಂತೆ, ನಮೂನೆ 1ರ ಕ್ರಮ ಸಂಖ್ಯೆ 1ರಲ್ಲಿ ಸದಸ್ಯರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಕ್ರ.ಸಂಖ್ಯೆ 2ರಲ್ಲಿ ಕುಟುಂಬದ ಸದಸ್ಯರ ಹೆಸರು ಸಂಬಂಧದ ದಾಖಲು ಮಾಡಬೇಕು. 3ರಲ್ಲಿ ಸದಸ್ಯರ ಒಟ್ಟು ವಾರ್ಷಿಕ ಆದಾಯ ನಮೂದಿಸಬೇಕು. ಬ್ಯಾಂಕ್‌, ನಿಗಮ, ಮಂಡಳಿಗಳಲ್ಲಿ ತೊಡಗಿಸಿರುವ ಹಣದ ವಿವರ, ಆಭರಣಗಳು, ಜಾನುವಾರುಗಳ ವಿವರ, 5000ರೂ.ಗಳಿಗಿಂತ ಅಧಿಕ ಬೆಲೆ ಬಾಳುವ ಟಿ.ವಿ. ರೆಫ್ರಿಜರೇಟರ್‌ ಸೇರಿದಂತೆ ಜನಪ್ರತಿನಿಧಿಯ ಮನೆಯಲ್ಲಿ ಬಳಕೆಯಲ್ಲಿರುವ ವಸ್ತುಗಳು, ವಾಹನಗಳ ಬಗ್ಗೆ ದಾಖಲಾತಿ ಮಾಡಬೇಕಿದೆ. ಜತೆಗೆ ಕೃಷಿ ಜಮೀನಿನ ವಿವರ, ಕಟ್ಟಡ ನಿರ್ಮಿಸಿದ ಕೃಷಿಯೇತರ ಜಮೀನಿನ ವಿವರ, ಕಟ್ಟಡಗಳ ವಿವರ ಹಾಗೂ ಇತರ ಸ್ಥಿರಾಸ್ತಿಗಳ ವಿವರವನ್ನೂ ನಮೂದಿಸಬೇಕಿದೆ.

— ದಿನೇಶ್‌ ಇರಾ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.