ಮಜಿ ಸ.ಹಿ.ಪ್ರಾ. ಶಾಲೆಯಲ್ಲಿ  ಸೋಲಾರ್‌ ಉಪಕರಣ ಅಳವಡಿಕೆ


Team Udayavani, Apr 12, 2018, 11:44 AM IST

12-April-6.jpg

ಬಂಟ್ವಾಳ: ಸರಕಾರಿ ಶಾಲೆಯೊಂದು ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್‌ ಸಂಪರ್ಕ ಅಳವಡಿಸಿಕೊಳ್ಳುವ ಸಾಧನೆ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ವೀರಕಂಭದ ಮಜಿ ಸರಕಾರಿ ಹಿ.ಪ್ರಾ. ಶಾಲೆ ಸೌರ ವಿದ್ಯುತ್‌ ಅಳ ವಡಿಸುವ ಮೂಲಕ ಸೋಲಾರ್‌ ಅನುಷ್ಠಾನಗೊಳಿಸಿದ ತಾಲೂಕಿನ ಪ್ರಪ್ರಥಮ ಸರಕಾರಿ ಶಾಲೆ ಎನ್ನುವ ಗೌರವವನ್ನು ಪಡೆದಿದೆ. ಶಾಲಾ ಆಡಳಿತ ಮಂಡಳಿಯ ಸಾಧನೆಗೆ ಹೆಗ್ಗುರುತಾಗಿ ಇದು ದಾಖಲಾಗಿದೆ.

ಸೂರ್ಯನ ಬೆಳಕಿನಿಂದ ನಿಸರ್ಗ ದತ್ತ ವಿದ್ಯುತ್‌ ಪಡೆಯುವ ಸೌರ ವಿದ್ಯುತ್‌ ಉಪಕರಣಗಳನ್ನು ದಾನಿಗಳ ನೆರವು ಪಡೆದುಕೊಂಡು ಶಾಲೆಯ ಛಾವಣಿಯಲ್ಲಿ ಅಳವಡಿಸಲಾಗಿದೆ. ಆಗಾಗ ಕೈಕೊಡುವ ವಿದ್ಯುತ್‌, ತಿಂಗಳಾಂತ್ಯದ ದುಬಾರಿ ಬಿಲ್‌ ಪಾವತಿಸುವ ಜಂಜಾಟದಿಂದ ಶಾಲೆಗೆ ಮುಕ್ತಿ ಸಿಕ್ಕಿದೆ.

ಸಹಭಾಗಿತ್ವ
ಎಲ್‌ಎನ್‌ಟಿ ಸಂಸ್ಥೆಯು ಶಾಲೆಯ ಬೇಡಿಕೆಗೆ ಸ್ಪಂದಿಸಿ ಸೌರ ವಿದ್ಯುತ್‌ ಕೊಡುಗೆ ನೀಡಿದೆ. 750 ವಾಟ್‌ನ ಪ್ಯಾನಲ್‌, 2 ಕೆವಿ ಯುಪಿಎಸ್‌, 150 ಎಎಚ್‌ ಸಾಮರ್ಥ್ಯದ ಬ್ಯಾಟರಿ ಒಳಗೊಂಡ 1.10 ಲಕ್ಷ ರೂ. ವೆಚ್ಚದ ಸೋಲಾರ್‌ ಸಿಸ್ಟಮ್‌ ಆಳವಡಿಸಲಾಗಿದೆ.

ನೀರಿನ ಪಂಪ್‌ ಒಂದನ್ನು ಹೊರತು ಪಡಿಸಿದರೆ ಶಾಲೆಯ ತರಗತಿ ಕೋಣೆಯಲ್ಲಿರುವ 12 ಫ್ಯಾನ್‌, 12 ಬಲ್ಬ್, ಮಿಕ್ಸಿ,  ಗ್ರೈಂಡರ್  ಹಾಗೂ ಕಂಪ್ಯೂಟರ್‌ ಸೋಲಾರ್‌ ವಿದ್ಯುತ್‌ ಮೂಲಕ ಚಾಲನೆಗೊಳ್ಳುತ್ತವೆ. ಇದರಿಂದಾಗಿ ವಿದ್ಯುತ್‌ ಉಳಿತಾಯವಾಗುತ್ತಿದ್ದು, ಶಾಲೆಗೆ ಪ್ರಯೋಜನಕಾರಿಯಾಗಿದೆ.

ಪ್ರಯತ್ನಕ್ಕೆ ಫಲ
ಒಂದು ಹಂತದಲ್ಲಿ ಬಾಗಿಲು ಹಾಕ ಬಹುದಾದ ಶಾಲೆಗಳ ಪಟ್ಟಿಗೆ ಸೇರ್ಪಡೆಯಾಗುವ ಹಂತದಲ್ಲಿದ್ದ ಈ ಶಾಲೆಯು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ನಿರಂತರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು.

ಪ್ರಸ್ತುತ ಪೂರ್ವ ಪ್ರಾಥಮಿಕ ಒಟ್ಟಾಗಿ 108 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಪಠ್ಯೇತರ ಚಟುವಟಿಕೆಗೂ ಈ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ದಾನಿಗಳು ಸಂಘ- ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಕೊಡುಗೆಯೂ ಶಾಲೆಯ ಅಭಿವೃದ್ಧಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಪರಿಸರ ಮಿತ್ರ ಶಾಲೆ ಪ್ರಶಸ್ತಿ
ಶಾಲೆಯ ಆವರಣದಲ್ಲಿ ಅಡಿಕೆ, ತೆಂಗು ಕೃಷಿ, ತರಕಾರಿ ಕೈ ತೋಟ, ಭತ್ತದ ಕೃಷಿ, ತರಕಾರಿ ಬೆಳೆಯುವ ಮೂಲಕ ಈ ಶಾಲೆ ಮೂರು ವರ್ಷಗಳಿಂದ ಗಮನ ಸೆಳೆದಿದೆ. ಶಾಲೆ ಹಿಂಭಾಗದಲ್ಲಿ ಕೈ ತೋಟವಿದ್ದು ತೊಂಡೆ, ಬೆಂಡೆ, ಬದನೆ ಮೊದಲಾದ ತರಕಾರಿ ಬೆಳೆಸಲಾಗಿದೆ. ಜತೆಗೆ 50 ತೆಂಗಿನ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳ ಹೆಸರಿನಲ್ಲಿ ಬೆಳೆಸಲಾಗುತ್ತಿದೆ. ಅಡಿಕೆ ಮರಗಳಲ್ಲೂ ವಿದ್ಯಾರ್ಥಿಗಳ ಹೆಸರಿನ ಫ‌ಲಕ ಅಳವಡಿಸಿ, ಅವರೇ ಅದರ ನಿರ್ವಹಣೆ ಮಾಡುವಂತೆ ಜವಾಬ್ದಾರಿ ವಹಿಸಲಾಗಿದೆ. ಅಡಿಕೆ ಗಿಡಗಳೀಗ ಫಲ ನೀಡುವ ಹಂತಕ್ಕೆ ಬೆಳೆದಿವೆ. ವಿದ್ಯಾರ್ಥಿಗಳಿಗೆ ತಾವು ಬೆಳೆಸಿದ ಗಿಡ ಎನ್ನುವ ಹೆಮ್ಮೆ ಮೂಡಿಸಿದೆ. ಶಾಲೆಯ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು, 2 ವರ್ಷಗಳಿಂದ ಜಿಲ್ಲಾ ಮಟ್ಟದ ಪರಿಸರಮಿತ್ರ ಪ್ರಶಸ್ತಿ ಗಳಿಸುತ್ತಿದೆ. ಶಾಲೆ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಂಡು ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಪರಿಸರ ಮಿತ್ರಶಾಲೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ನೈಸರ್ಗಿಕ ವ್ಯವಸ್ಥೆ 
ಊರಿನ ಗಣ್ಯರು, ದಾನಿಗಳು, ಸಾಮಾಜಿಕ ಸೇವಾಕರ್ತರ ಪ್ರಯತ್ನದಿಂದ ಖಾಸಗಿ ಕಂಪೆನಿಯ ಸೋಲಾರ್‌ ಸಿಸ್ಟಂ ಶಾಲೆಗೆ ದೊರೆತಿದೆ. ವಿದ್ಯುತ್‌ ಬಳಕೆಯಲ್ಲಿ ಉಳಿತಾಯವಾಗುತ್ತಿದೆ. ವಿದ್ಯುತ್‌ ನಿಲುಗಡೆಯ ಭಯವಿಲ್ಲ. ಬೇಕೆಂದಾಗ ಬಳಸಲು ಅನುಕೂಲವಿದೆ. ನೈಸರ್ಗಿಕ ವ್ಯವಸ್ಥೆಯನ್ನು ಬಳಸಿಕೊಳ್ಳಲು ಜನರಲ್ಲಿ ಜಾಗೃತಿ ಹುಟ್ಟಲು ಕಾರಣವಾಗಿದೆ.
– ನಾರಾಯಣ ಪೂಜಾರಿ ಎಸ್‌.ಕೆ.
ಮುಖ್ಯ ಶಿಕ್ಷಕರು, 
ಸ.ಹಿ.ಪ್ರಾ. ಶಾಲೆ ಮಜಿ – ವೀರಕಂಭ

ರಾಜಾ ಬಂಟ್ವಾಳ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.