ಎಪ್ರಿಲ್‌-ಮೇ ತಿಂಗಳಿಗೆ ಬುಕ್ಕಿಂಗ್  ಪ್ರಕ್ರಿಯೆ ಇಳಿಮುಖ


Team Udayavani, Apr 12, 2018, 12:05 PM IST

12-April-7.jpg

ಮಹಾನಗರ: ಚುನಾವಣೆಯ ಮಾದರಿ ನೀತಿ ಸಂಹಿತೆಯ ಬಿಸಿ ಸಮಾರಂಭಗಳನ್ನು ಆಯೋಜಿಸುವ ಸಭಾಂಗಣಗಳಿಗೂ ತಟ್ಟಿದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನಗರದ ಹಲವು ಸಭಾಂಗಣದಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳ ಕಾರ್ಯಕ್ರಮಕ್ಕೆ ಮುಂಗಡ ಸಭಾಂಗಣ ಕಾಯ್ದಿರಿಸುವಿಕೆ ಕಡಿಮೆಯಾಗಿದೆ. ಆದರೆ ಕೆಲವು ಸಭಾಂಗಣಗಳಲ್ಲಿ ಮಾತ್ರ ಯಥಾ ಪ್ರಕಾರ ಬುಕ್ಕಿಂಗ್‌ ಪ್ರಕ್ರಿಯೆ ನಡೆಯುತ್ತಿದೆ.

ನಗರದಲ್ಲಿ ಪ್ರತಿ ದಿನ ಹಲವಾರು ಕಾರ್ಯಕ್ರಮಗಳು ಆಯೋಜನೆಯಾಗುತ್ತಲೇ ಇರುತ್ತವೆ. ಇದರಿಂದ ಎಲ್ಲ ಸಭಾಂಗಣಗಳು ಪ್ರತಿದಿನ ಗಿಜಿ ಗುಡುತ್ತಲೇ ಇರುತ್ತದೆ. ಎಷ್ಟೆಂದರೆ ಪ್ರಮುಖ ಸಭಾಂಗಣಗಳಲ್ಲಿ ಕೆಲವೊಮ್ಮೆ ಐದಾರು ತಿಂಗಳುಗಳ ಹಿಂದೆಯೇ ಬುಕ್‌ ಮಾಡಲು ಪ್ರಯತ್ನಿಸಿದರೂ ಸಭಾಂಗಣ ಸಿಗದಂತಹ ಪರಿಸ್ಥಿತಿ ಇರುತ್ತದೆ. ಆದರೆ ಈಗ ನಗರದ ಹಲವು ಸಭಾಂಗಣಗಳಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಸಂಖ್ಯೆ ಇಳಿಮುಖವಾಗಿದೆ. 

ಅಲ್ಲದೆ ಕೆಲವರು ಸಭೆ ಸಮಾರಂಭಗಳಿಗಾಗಿ ಚುನಾವಣೆ ಘೋಷಣೆಗೆ ಮುನ್ನವೇ ಕಾಯ್ದಿರಿಸಿದ್ದು, ಅದರಂತೆ ಆಯಾ ದಿನಾಂಕದಂದು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೆ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಹೊಸದಾಗಿ ಯಾವುದೇ ಸಂಘ- ಸಂಸ್ಥೆಗಳ ಕಾರ್ಯಕ್ರಮ, ಇತರ ಸಭೆ- ಸಮಾರಂಭ ಗಳನ್ನು ಆಯೋಜಿಸಲು ಸಭಾಂಗಣಗಳನ್ನು ಕಾಯ್ದಿರಿಸುತ್ತಿರುವುದು ನಡೆಯುತ್ತಿಲ್ಲ. ತೀರಾ ಅವಶ್ಯವಾಗಿ ಸಮಾರಂಭ ಹಮ್ಮಿ ಕೊಳ್ಳಬೇಕಾದವರು ಮಾತ್ರ ಹಾಲ್‌ಗ‌ಳನ್ನು ಕಾಯ್ದಿರಿಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆಯೇ ಬುಕ್‌
ಈಗಾಗಲೇ ಎಪ್ರಿಲ್‌ ತಿಂಗಳ 11,29, ಮತ್ತು ಮೇ ತಿಂಗಳ 2, 6, 12, 13 ಮುಂತಾದ ದಿನಾಂಕಗಳು ಶುಭ ಕಾರ್ಯಗಳಿಗೆ ಪ್ರಶಸ್ತವಾಗಿವೆ. ಮದುವೆ ಸಮಾರಂಭಗಳಿಗಾಗಿ ಈ ದಿನಾಂಕಗಳಿಗೆ ಹಾಲ್‌ ಗಳನ್ನು ಕೆಲವು ತಿಂಗಳುಗಳ ಹಿಂದೆಯೇ ಕಾಯ್ದಿರಿಸಲಾಗಿದೆ. ಅದು ಬಿಟ್ಟು ಅನೇಕ ಸಂದರ್ಭಗಳಲ್ಲಿ ಎಲ್ಲ ಹಾಲ್‌ ಗಳಲ್ಲಿಯೂ ನಿರಂತರ ಸಭೆ- ಸಮಾರಂಭಗಳು ನಡೆಯುತ್ತಿದ್ದರೂ ಚುನಾವಣೆ ಘೋಷಣೆಯಾದ ಬಳಿಕ ಹಾಲ್‌ ಬುಕ್‌ ಮಾಡುವುದು ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಪ್ರಮುಖ ಹಾಲ್‌ಗ‌ಳ ಸಿಬಂದಿ. ಹಾಲ್‌ಗ‌ಳಲ್ಲಿ ನಗದನ್ನು ನೇರವಾಗಿ ತೆಗೆದುಕೊಳ್ಳದೆ ನೆಫ್ಟ್‌, ಡಿಡಿಗಳ ಮುಖಾಂ ತರವೇ ತೆಗೆದುಕೊಳ್ಳುವುದರಿಂದ ಆಯೋಜಕರಿಗೆ ಬಿಲ್‌ ಪಾವತಿಸಲು ಸಮಸ್ಯೆಯಾಗುವುದಿಲ್ಲ.

ಚುನಾವಣೆಯಂದೇ ಮದುವೆ
ನಗರದ ಪ್ರಮುಖ ಸಭಾಂಗಣವಾದ ಪುರಭವನದಲ್ಲಿ ಬುಕ್ಕಿಂಗ್‌ ಯಥಾಪ್ರಕಾರವಿದೆ. ಕೆಲವು ಹಾಲ್‌ಗ‌ಳಲ್ಲಿ ಮೇ 12ರಂದು ವಿವಾಹ, ಮೆಹಂದಿ ಕಾರ್ಯಕ್ರಮವಿದೆ. ಅಲ್ಲದೆ ಚುನಾವಣೆ ಪೂರ್ವದಲ್ಲಿ ನಿಗದಿ ಪಡಿಸಿದಂತೆ ನಗರದ ಇತರ ಕೆಲವು ಹಾಲ್‌ಗ‌ಳಲ್ಲಿಯೂ ಚುನಾವಣೆಯಂದು ಸಮಾರಂಭಗಳು ಜರಗುತ್ತಿವೆ.

ನೀತಿ ಸಂಹಿತೆ ಬಗ್ಗೆಯೂ ವಿಚಾರಣೆ
ಮಾದರಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಸಭೆ ಸಮಾರಂಭ ಆಯೋಜನೆ, ವಸ್ತುಗಳ ಸಾಗಾಟಕ್ಕೆ ಅನುಮತಿ ಅಗತ್ಯದ ಬಗ್ಗೆ ಸುದ್ದಿಗಳು ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಮೊದಲೇ ಸಭಾಂಗಣ ಕಾಯ್ದಿರಿಸಿದವರು ಕೂಡ ಕೆಲವು ಹಾಲ್‌ ಗಳಲ್ಲಿ ವಿಚಾರಿಸುತ್ತಾರೆ. ಆದರೆ ಪೂರಕ ದಾಖಲೆಯಿದ್ದಲ್ಲಿ ಕಾರ್ಯಕ್ರಮ ಆಯೋಜನೆಗೆ ವಸ್ತುಗಳ ಸಾಗಾಟಕ್ಕೆ ಸಮಸ್ಯೆಯಾಗುವುದಿಲ್ಲ. ಹಾಲ್‌ ಬುಕ್ಕಿಂಗ್‌ ಪ್ರಕ್ರಿಯೆ ಕಡಿಮೆಯಾಗಿದ್ದರೂ, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳ್ಯಾವುವೂ ಮಾದರಿ ಚುನಾವಣೆ ನೀತಿ ಸಂಹಿತೆ ಯಿಂದಾಗಿ ರದ್ದುಗೊಂಡಿಲ್ಲ ಎನ್ನುತ್ತಾರೆ ನಗರದ ವಿವಿಧ ಸಭಾಂಗಣಗಳ ಸಿಬಂದಿ.

ಏರೆಗಾವುಯೇ ಕಿರಿಕಿರಿ…
ಸಭೆ ಸಮಾರಂಭಗಳ ಆಯೋಜನೆಗೆ ಅನುಮತಿ ಬೇಕೇ ಬೇಡವೇ ಎಂಬ ಗೊಂದಲದಲ್ಲಿ ಈಗಲೂ ಸಾರ್ವಜನಿಕರು ಇದ್ದಾರೆ. ಅನುಮತಿ ಪತ್ರ (ಎನ್‌ಒಸಿ) ತೆಗೆದುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದಾಗಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮ ಆಯೋಜನೆ ಸಂದರ್ಭ ಖರೀದಿಸಿದ-ಸಾಗಿಸಿದ ಎಲ್ಲ ವಸ್ತುಗಳಿಗೂ ಪೂರಕ ದಾಖಲೆಗಳಿದ್ದರೆ ಏನೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಅನುಮತಿ ಪತ್ರಕ್ಕಾಗಿ ವೃಥಾ ಅಲೆದಾಟ, ಸಮಾರಂಭಗಳಿಗೆ ನೀತಿ ಸಂಹಿತೆಯಿಂದಾಗಿ ಏನಾದರೂ ಸಮಸ್ಯೆಯಾದರೆ
ಕಷ್ಟ ಎಂಬ ಲೆಕ್ಕಾಚಾರದಲ್ಲಿ ಕಾರ್ಯಕ್ರಮ ಆಯೋಜಕರಿದ್ದಾರೆ. ಇದಕ್ಕಾಗಿಯೇ ಸ್ವಲ್ಪ ತಡವಾದರೂ ಅಡ್ಡಿ ಇಲ್ಲ ಚುನಾವಣೆ ಬಳಿಕವೇ ಕಾರ್ಯಕ್ರಮ ಆಯೋಜಿಸುವುದು ಒಳಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಯಥಾ ಪ್ರಕಾರವಿದೆ
ಪುರಭವನದಲ್ಲಿ ಕಾರ್ಯ ಕ್ರಮಗಳು ನಡೆಯುತ್ತಲೇ ಇವೆ. ಬುಕ್ಕಿಂಗ್‌ ಕೂಡ ನಡೆಯುತ್ತಿದೆ. ಚುನಾವಣಾ ನೀತಿಸಂಹಿತೆ ಇಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳುವುದಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಅಲ್ಲದೆ ಇಂಡೋರ್‌ ಕಾರ್ಯಕ್ರಮಗಳಿಗೆ ಅನುಮತಿ ಬೇಡ ಎಂದೂ ಸಂಬಂಧ ಪಟ್ಟವರು ಹೇಳಿದ್ದಾರೆ.
-ಹರೀಶ್‌, ಮ್ಯಾನೇಜರ್‌,
ಪುರಭವನ ಮಂಗಳೂರು.

‡ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.