ರಾಹುಲ್ ಟ್ವೀಟ್‌ಗೆ ಶಿರ್ಡಿ ಟ್ರಸ್ಟ್ ಖಂಡನೆ,ಕ್ಷಮೆಯಾಚನೆಗೆ ಆಗ್ರಹ
Team Udayavani, Apr 12, 2018, 12:14 PM IST
ಹೊಸದಿಲ್ಲಿ : ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪಿಯೂಶ್ ಚಾವ್ಲಾ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಶಿರ್ಡಿ ಪವಾಡಗಳಿಗೆ ಮಿತಿಯೇ ಇಲ್ಲ” ಎಂಬುದಾಗಿ ಹೇಳಿರುವುದನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಶಿರ್ಡಿ ತೀವ್ರವಾಗಿ ಆಕ್ಷೇಪಿಸಿದೆ.
“ರಾಜಕೀಯ ಆರೋಪ – ಪ್ರತ್ಯಾರೋಪಗಳಿಗಾಗಿ ಶಿರ್ಡಿ ಹೆಸರನ್ನು ಎಳೆದು ತರುವ ಮೂಲಕ ನೀವು ದೇಶ-ವಿದೇಶದಲ್ಲಿನ ಶಿರ್ಡಿ ಸಾಯಿಬಾಬಾ ಭಕ್ತರ ಮನಸ್ಸಿಗೆ ನೋವುಂಟುಮಾಡಿದ್ದೀರಿ; ನಾವಿದನ್ನು ಖಂಡಿಸುತ್ತೇವೆ; ಆದುದರಿಂದ ಸಾಯಿಬಾಬಾ ಭಕ್ತರನ್ನು ಅವಮಾನಿಸಿರುವುದಕ್ಕಾಗಿ ನೀವು ಕ್ಷಮೆ ಯಾಚಿಸಬೇಕು ಎಂದು ಸಮಸ್ತ ಭಕ್ತಾಭಿಮಾನಗಳ ಪರವಾಗಿ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಶಿರ್ಡಿ ಇದರ ಅಧ್ಯಕ್ಷರಾಗಿರುವ ಡಾ. ಸುರೇಶ್ ಹವಾರೆ ಟ್ವೀಟ್ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್‌ಜೇವಾಲಾ ಅವರು ತಮ್ಮ ಪಕ್ಷದ ಅಧ್ಯಕ್ಷರನ್ನು ಸಮರ್ಥಿಸಿಕೊಂಡು, ಗೋಯಲ್ ಮತ್ತು ಅವರ ಕಂಪೆನಿ ಪವಿತ್ರ ಶಿರ್ಡಿ ಹೆಸರನ್ನು ದುರುಪಯೋಗಿಸಿಕೊಂಡು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿರುವುದರಿಂದ ಶಿರ್ಡಿ ಟ್ರಸ್ಟ್‌ನವು ಸೆಬಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ದೂರು ಕೊಟ್ಟು ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಾರ್ವಜನಿಕ ಕಂಪೆನಿ ಶಿರ್ಡಿ ಹೆಸರು ಬಳಸುವುದನ್ನು ನಿಷೇಧಿಸುವಂತೆ ಆಗ್ರಹಿಸಬೇಕು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.