ನಿಧಿ ಆಸೆಗೆ ವಿಗ್ರಹ ಕಿತ್ತರು
Team Udayavani, Apr 12, 2018, 4:36 PM IST
ಆನಂದಪುರ: ಸಮೀಪದ ಮಲಂದೂರಿನಲ್ಲಿ ಚಂಪಕ ಸರಸ್ಸು ಎಂಬ ಐತಿಹಾಸಿಕ ಕೊಳದ ಮಧ್ಯದಲ್ಲಿ ನಂದಿ ವಿಗ್ರಹವನ್ನು ಒಳಗೊಂಡ ದೇವರ ಗುಡಿಯಿದೆ. 3-4 ದಿನಗಳ ಹಿಂದೆ ನಿಧಿಯಾಸೆಗೆ ವಾಮಾಚಾರ ನಡೆಸಿ ದೇವರ ಪಾಣಿಪೀಠ ಮತ್ತು ವಿಗ್ರಹ ಕಿತ್ತು ಭಗ್ನಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುಡಿಯ ಸುತ್ತ ಬಿಳಿಯ ದಾರ ಬಳಸಿ ದಿಗ್ಬಂಧನ ಮಾಡಿದ, ಅರಿಶಿನ, ಕುಂಕುಮ, ನಿಂಬು, ಕಲಶ, ಹರಿವಾಣ, ಹೂವು ಇತ್ಯಾದಿ ಬಳಸಿ ವಾಮಾಚಾರ ಮಾಡಿದ ಕುರುಹು ಕಂಡು ಬರುತ್ತಿದೆ. ದೇವರ ಗುಡಿಯ ಒಳಭಾಗದಲ್ಲಿ ವಿಗ್ರಹ ಕಿತ್ತು, ಚಪ್ಪಡಿ ಹಾಸಿನ ಕಲ್ಲು ಅಗೆದು ತೆಗೆದು ಗುಂಡಿ ಮಾಡಿದ ನಿಧಿಗಾಗಿ ಶೋಧ ನಡೆಸಿದ ಕುರುಹುಗಳು ಕಂಡು ಬರುತ್ತಿವೆ. ಈ ದೇವರ ಗುಡಿಯಿಂದ ಹೊರಗೆ ಅಂದರೆ ಕೊಳದ ಮುಂಭಾಗದಲ್ಲಿ ಶಿವ ದೇವಾಲಯವಿದ್ದು 15-20 ವರ್ಷಗಳ ಹಿಂದೆ ಅಲ್ಲಿಯೂ ಸಹ ವಿಗ್ರಹ ಕಿತ್ತು ದೂರಕ್ಕೆ ಎಸೆದು ಪಾಣಿಪೀಠ ಕಿತ್ತ ಘಟನೆ ನಡೆದಿತ್ತು.
ಅಲ್ಲದೆ ಈ ಚಂಪಕ ಸರಸ್ಸಿನ ದಡದ ಸುತ್ತ ಆಗಾಗ ವಾಮಾಚಾರದ ಪೂಜೆ ನಡೆಸಿ ನೆಲ ಅಗೆದು ನಿಧಿಗಾಗಿ ತಡಕಾಡಿದ ಘಟನೆ ನಡೆದಿತ್ತು. ಆದರೆ ಈ ವರೆಗೂ ಸಹ ಕೊಳದ ಮಧ್ಯದ ಗುಡಿಯಲ್ಲಿ ನಿಧಿಚೋರರ ಕರಾಮತ್ತು ನಡೆದಿರಲಿಲ್ಲ. ಕಳೆದ ಗುರುವಾರ ಅಥವಾ ಶುಕ್ರವಾರ ರಾತ್ರಿ ಈ ಕಾರ್ಯ ನಡೆದಿರಬಹುದೆಂದು ಸ್ಥಳೀಯರ ಅನಿಸಿಕೆಯಾಗಿದೆ.
ಕೆಳದಿ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ (ಕ್ರಿ.ಶ.ಸುಮಾರು 1750)ಆನಂದಪುರದಲ್ಲಿ ಕೋಟೆ ಪುನರುಜ್ಜೀವನ ಗೊಂಡಿತ್ತು. ಇಕ್ಕೇರಿ ರಾಜಧಾನಿಯಿಂದ ನಗರ ಸಂಸ್ಥಾನದ ಬಿದನೂರು ಕೋಟೆಗೆ ಹೋಗುವ ಮಾರ್ಗದಲ್ಲಿ ರಾಜ ವೆಂಕಟಪ್ಪ ನಾಯಕ ಈ ಕೋಟೆಗೆ ಬಂದು ತಂಗುತ್ತಿದ್ದನಂತೆ. ರಾಜನಿಗೆ ಚಂಪಕ ಎಂಬ ಹೆಸರಿನ ವೇಶ್ಯೆ ಆಪ್ತಳಾಗಿದ್ದು ಅವಳ ಜೊತೆ ವಿಹರಿಸಲು ಈ ಕೊಳ ವಿಸ್ತಾರಗೊಳಿಸಿ ಅಭಿವೃದ್ಧಿಪಡಿಸಿ ಪುನರ್ ನಿರ್ಮಿಸಿದ್ದ. ಅದಕ್ಕಾಗಿ ಈ ಕೊಳಕ್ಕೆ ಚಂಪಕ ಸರಸ್ಸು ಎಂಬ ಹೆಸರು ಬಂದಿದೆ ಎಂಬ ದಂತಕಥೆಯಿದೆ. ಇದೊಂದು ಐತಿಹಾಸಿಕ ಸ್ಮಾರಕವಾಗಿದ್ದು ನಿಧಿ ಚೋರರಿಂದ ಆಗಾಗ ಭಗ್ನಗೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಈ ಸ್ಮಾರಕದ ರಕ್ಷಣೆಗೆ ಸರ್ಕಾರ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.