ಶ್ಮಶಾನದ ಒಡೆದ ಮಡಕೆಗಳೇ ಪಕ್ಷಿಗಳ ನೀರಿನ ಪಾತ್ರೆ
Team Udayavani, Apr 13, 2018, 6:10 AM IST
ಕಟಪಾಡಿ: ಬೇಸಗೆ ಬಂತೆಂದರೆ ಮನುಷ್ಯನಿಗೆ ಕುಡಿಯುವ ನೀರು ಸಿಗದೇ ಇರುವ ಪರಿಸ್ಥಿತಿ ಇರುವಾಗ, ಪಕ್ಷಿಗಳ ಪಾಡು ಹೇಳುವಂತಿಲ್ಲ. ಬಿಸಿಲಿಲಿಂದ ಕಂಗೆಟ್ಟ ಬಾನಾಡಿಗಳಿಗೆ ಶ್ಮಶಾನದಲ್ಲಿ ಬಳಸಿ ಎಸೆದ ಮಡಕೆಯಲ್ಲೇ ನೀರುಣಿಸುವ ಮೂಲಕ ಕಟಪಾಡಿ ಕೋಟೆಯ ವಿನೋಭನಗರದ ಶ್ಮಶಾನ ಮೇಲ್ವಿಚಾರಕ ರತ್ನಾಕರ ಕೋಟ್ಯಾನ್ ಜೀವಪ್ರೇಮ ಮೆರೆಯುತ್ತಿದ್ದಾರೆ.
ಅಂತ್ಯಕ್ರಿಯೆಗೆ ಬಳಕೆಯಾದ ಮಡಕೆಗಳನ್ನು ಯಾರೂ ಪುನಃ ಬಳಕೆ ಮಾಡುವುದಿಲ್ಲ. ಈ ಮಡಕೆಗಳನ್ನು ಕೋಟ್ಯಾನ್ ಅವರು ಸಂಗ್ರಹಿಸಿ, ನೀರು ತುಂಬಿಸಿ ಶ್ಮಶಾನದ ಆವರಣ ಗೋಡೆಯಲ್ಲಿ, ಹೂದೋಟದಲ್ಲಿ, ಎತ್ತರದ ಸ್ಥಳಗಳಲ್ಲಿ, ಗಿಡ-ಮರಗಳ ಬುಡದಲ್ಲಿ ಇರಿಸಿ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಇಲ್ಲಿ ಬಾಯಾರಿದ ಬೆಕ್ಕು, ಮುಂಗುಸಿ ಮೊದಲಾದ ಪ್ರಾಣಿಗಳು ಕೂಡಾ ನೀರು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತವೆ.
ಉಳಿದ ಆಹಾರವೂ ಪ್ರಾಣಿ-ಪಕ್ಷಿಗಳಿಗೆ
ಶ್ಮಶಾನ ಅಂದರೆ ನಿರ್ಜನ ಪ್ರದೇಶ. ಯಾರಾದರೂ ಮೃತರಾದರೆ ಮಾತ್ರ ಇಲ್ಲಿ ಜನಸಂದಣಿ ಇರುತ್ತದೆ. ಹಾಗಾಗಿ ಎಲ್ಲ ಪ್ರಾಣಿ ಪಕ್ಷಿಗಳು ನಿರ್ಭೀತವಾಗಿ ಬಂದು ನೀರು ಕುಡಿಯುವುದಲ್ಲದೇ, ಶ್ಮಶಾನದ ಗಿಡಗಳ ಹಣ್ಣನ್ನೂ ತಿನ್ನುತ್ತವೆ. ರತ್ನಾಕರ ಕೋಟ್ಯಾನ್ ಅಂತ್ಯ ಸಂಸ್ಕಾರದ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟು, ಅದನ್ನು ವ್ಯರ್ಥಗೊಳಿಸದೆ ಪ್ರಾಣಿ ಪಕ್ಷಿಗಳಿಗೆ ಉಣಬಡಿಸುತ್ತಾರೆ.
ಎಲ್ಲರೂ ಕೈ ಜೋಡಿಸಿ
ನೀರಿನ ಮೂಲಗಳು ಬತ್ತಿರುವಾಗ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದು ಕಷ್ಟಕರ. ಕೋಟ್ಯಾನರಂತೆ ಎಲ್ಲರೂ ತಮ್ಮ ಮನೆಗಳಲ್ಲಿ ನೀರು ಇರಿಸಿದರೆ ಉತ್ತಮ ಕಾರ್ಯವಾಗುತ್ತದೆ
– ಡಾ| ದಯಾನಂದ ಪೈ, ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ ಆಸ್ಪತ್ರೆ, ಕಾಪು
ಎಲ್ಲರಿಗೂ ಮಾದರಿ
ಬೇಸಗೆಯಲ್ಲಿ ಬಸವಳಿದ ಪಕ್ಷಿಗಳಿಗೆ ನೀರುಣಿಸುತ್ತಿರುವುದು ರತ್ನಾಕರ ಕೋಟ್ಯಾನ್ ಮಾಡುತ್ತಿರುವ ಪುಣ್ಯದ ಕೆಲಸ. ಇವರ ಪಕ್ಷಿ-ಪ್ರಾಣಿ ಪ್ರೇಮ ಎಲ್ಲರಿಗೂ ಮಾದರಿ.
– ಜಗದೀಶ್ ಕಾಮತ್,
ಕಟಪಾಡಿ.
– ವಿಜಯ ಆಚಾರ್ಯ, ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.