ದೊಂದಿ ಬೆಳಕಿನಲ್ಲಿ ನಡೆದ ಹಿಡಿಂಬಾ ವಿವಾಹ 

Team Udayavani, Apr 13, 2018, 6:00 AM IST

14.jpg

ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನವನ್ನು ಯುವ ಪೀಳಿಗೆಗೆ ತೋರಿಸಿಕೊಡುವ ಪ್ರಯತ್ನ ಇತ್ತೀಚಿಗೆ ವಡ್ಡರ್ಸೆಯಲ್ಲಿ ದೊಂದಿ ಬೆಳಕಿನ ಸಾಂಪ್ರದಾಯಿಕ ಶೈಲಿಯ ಯಕ್ಷಗಾನದ ಮೂಲಕ ನಡೆಯಿತು. 

ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇದರ ಯುವ ಪ್ರತಿಭೆಗಳು,ಯುವ ಪ್ರಸಂಗಕರ್ತ ಎಮ್‌.ಎಚ್‌. ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಮಾರ್ಗದರ್ಶನದಲ್ಲಿ “ಹಿಡಿಂಬಾ ವಿವಾಹ’ ಎನ್ನುವ ಆಖ್ಯಾನವನ್ನು ಪ್ರದರ್ಶಿಸಿದರು. ಕೋಟ ರಾಮಚಂದ್ರ ಆಚಾರ್ಯರ ಕಲಾಚತುರತೆಯಿಂದ ಮೂಡಿಬಂದ ಬಿದಿರಿನ ರಂಗಸ್ಥಳ, ತೆಂಗಿನ ಗರಿಯ ತಟ್ಟಿ, ಸುತ್ತಲೂ ಮಾವಿನ ತೋರಣ, ಸಿಂಗಾರದ ಹೂವಿನ ಅಲಂಕಾರ, ಹಿಮ್ಮೇಳದವರು ಕೂರಲು ಹಡಿಮಂಚದ ವ್ಯವಸ್ಥೆ, ಸಿಂಹಾಸನದ ಬದಲು ನಾಲ್ಕು ಚಕ್ರದ ಮರದ ಕಟ್ಟು ರಥ, ರಂಗಸ್ಥಳದ ಪಕ್ಕದಲ್ಲೇ ಭವ್ಯವಾದ ಅರಗಿನ ಅರಮನೆ, ದಾರಿಯುದ್ದಕ್ಕೂ ಅಳವಡಿಸಿದ ದೊಂದಿ ಬೆಳಕು ಎಲ್ಲವೂ ಹೊಸ ಲೋಕಕ್ಕೆ ಕರೆದೊಯ್ಯಿತು. 

ಅರಮನೆಯು ಉರಿದು ಭಸ್ಮವಾಗುವ ಸಂದರ್ಭ ಪಾಂಡವರನ್ನು ಕಾಪಾಡುವ ಭೀಮನ ವೀರಾವೇಷ ದೊಂದಿಯ ಮಂದಬೆಳಕಿನಲ್ಲಿ ಚೆನ್ನಾಗಿ ಮೂಡಿಬಂತು. ಒಡ್ಡೋಲಗದಿಂದ ಹಿಡಿದು ಅಂತ್ಯದ ತನಕ ಎಲ್ಲಾ ಕಲಾವಿದರ ಪ್ರದರ್ಶನ ಉತ್ತಮವಾಗಿತ್ತು. ಸಾಂಪ್ರದಾಯಿಕ ಪ್ರಯಾಣ ಕುಣಿತ, ವೇಷಭೂಷಣಗಳು, ಚುಟ್ಟಿ ಇಟ್ಟು ಮಾಡಿದ ಬಣ್ಣದ ವೇಷ, ಬಣ್ಣದ ವೇಷದ ಒಡ್ಡೋಲಗ, ಹಿಡಿಂಬಾಸುರನ ಅಭ್ಯಂಜನ, ಅಲಂಕಾರ ಮಾಡಿಕೊಳ್ಳುವ ಸನ್ನಿವೇಷ ಕಣ್ಣಿಗೆ ಕಟ್ಟುವಂತಿತ್ತು. ಹಿಡಿಂಬೆಯ ಪ್ರವೇಶ ಕೂಡ ಚೆನ್ನಾಗಿ ಮೂಡಿಬಂತು. 

ಭಾಗವತ ಪ್ರಸಾದ ಕುಮಾರ್‌ ಮೊಗೆಬೆಟ್ಟು ಅವರ ಗಾನ ರಸಧಾರೆ, ದೇವದಾಸ್‌ ರಾವ್‌ ಕೂಡ್ಲಿಯವರ ಮದ್ದಲೆಯ ನುಡಿಕೆ, ಶಿರಿಯಾರ ಕೃಷ್ಣಾನಂದ ಶೆಣೈಯವರ ಚಂಡೆಯ ಕೈ ಚಳಕ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಿತು.
 
ಸತೀಶ್‌ ಪೂಜಾರಿ ವಡ್ಡರ್ಸೆ 

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.