ಗುರು ಹಿರಿಯಡ್ಕ ಗೋಪಾಲರಾಯರಿಗೆ ಸಮ್ಮಾನ 


Team Udayavani, Apr 13, 2018, 6:00 AM IST

15.jpg

ಬಾಲ್ಯದ ಬಡತನದ ಬದುಕು, ಶ್ರಮ ಪೂರ್ಣ ಜೀವನ, ಯೌವನದಲ್ಲಿ ತಂದೆಯ ಜೊತೆ ಸೇರಿ ಯಕ್ಷಗಾನ ಅಧ್ಯಯನ-ಅಭ್ಯಾಸ-ಸಂಘಟನೆ, ಆಯುರ್ವೇದ ಔಷಧ ತಯಾರಿಕೆ ಹಾಗೂ ವೈದ್ಯವೃತ್ತಿ ಹೀಗೆ ವಿವಿಧ ರಂಗಗಳಲ್ಲಿ ಜೀವನ ವೃತ್ತಿಯ ಶೋಧನೆ- ಸಾಧನೆ ಮಾಡಿ ಕೊನೆಗೆ ಯಕ್ಷಗಾನ ಮದ್ದಳೆವಾದಕರಾಗಿ ಸಿದ್ಧಿಯ ಔನ್ನತ್ಯ ಹೊಂದಿದುದು ಗೋಪಾಲರಾಯರ ಜೀವನ ಗಾಥೆಯ ಅತೀ ಸಂಕ್ಷಿಪ್ತ ಹಂತಗಳು. ಯಕ್ಷಗಾನ ಪ್ರವೇಶ ಮಾಡಿದಾಗ ವೇಷಧಾರಿಯಾಗಿ ಮತ್ತು ಸಂಘಟಕರಾಗಿ ಸೋತರೂ, ಬಳಿಕ ಮದ್ದಳೆಗಾರರಾಗಿ ಜಯದ ವಿಜೃಂಭಣೆ ರಸಿಕರಿಗೆ ಕಾಣಿಸಿದವರು. ಆ ಕಾಲದಲ್ಲಿ ಕೆಲವರಲ್ಲಿ ಮಾತ್ರವಿದ್ದ ಮದ್ದಳೆ ವಾದನದ ವಿಶಿಷ್ಟಕ್ರಮ-ಗಂಟುರುಳಿಕೆ-ಗೋಪಾಲರಾಯರ ವಾದನ ಶೈಲಿಯ ಪರಿಣತ ವೈಶಿಷ್ಟವೆನಿಸಿತು. ಕುಂಜಾಲು ಶೇಷಗಿರಿ ಭಾಗವತ, ಜಾನುವಾರುಕಟ್ಟೆ ಕಾಮತ್‌, ಗುಂಡ್ಮಿ ನಾವಡ ಮೊದಲಾದ ಭಾಗವತರಿಗೆ ಮದ್ದಳೆಗಾರರಾಗಿ, ಗಣಪತಿ ಪ್ರಭು, ರಾಮಪ್ಪ ಅಡಿಗ, ಹಾರಾಡಿ ರಾಮ, ವೀರಭದ್ರನಾಯಕ್‌, ಸಾಮಗ ಸಹೋದರರು ಮೊದಲಾದವರನ್ನು ರಂಗದಲ್ಲಿ ಕುಣಿಸಿದವರು.ಪರಂಪರೆಯ ಪ್ರಸಿದ್ಧ ಕಲಾವಿದರ ಒಡನಾಟದಿಂದ ಯಕ್ಷಗಾನದ ಸಾಂಪ್ರದಾಯಕತೆಯ ಪ್ರಭುತ್ವ ಮತ್ತು ಶಿವರಾಮ ಕಾರಂತ, ಕೆ.ಕೆ ಹೆಬ್ಟಾರ್‌, ಮುಂತಾದವರ ಜೊತೆಗೆ ಕಂಡುಕೊಂಡ ಪ್ರಯೋಗಾತ್ಮಕ ಚಿಂತನಶೀಲತೆ ಇವರೆಡರ ಸಮ್ಮಿಲನ ಗೋಪಾಲರಾಯರ ಕಲಾ ಸಂಪನ್ಮೂಲತೆಗೆ ಶೈಕ್ಷಣಿಕ ಮಹತ್ವ ನೀಡಿದೆ. ಸುಮಾರು ಮೂವತ್ತು ವರ್ಷಗಳಲ್ಲಿ ಪೆರ್ಡೂರು, ಅಮೃತೇಶ್ವರಿ, ಮಂದಾರ್ತಿ, ಹಿರಿಯಡ್ಕ ಮೊದಲಾದ ಮೇಳಗಳಲ್ಲಿ ದುಡಿದ ಬಳಿಕ ವೃತ್ತಿ ಮೇಳಕ್ಕೆ ವಿದಾಯ ಹೇಳಿ ಮದ್ದಳೆ ವಾದನ ವೃತ್ತಿಗೆ, ತನ್ನ ಕಲಾಭಿವ್ಯಕ್ತಿಗೆ ಅನ್ಯಮಾರ್ಗವನ್ನು ಕಂಡು ಹಿಡಿದರು. ವಿಚಾರ ಸಂಕಿರಣ, ಕಾರ್ಯಾಗಾರ, ಯಕ್ಷಗಾನ ಸಮ್ಮೇಳನ ಇತ್ಯಾದಿಗಳಲ್ಲಿ ಭಾಗವಹಿಸುತ್ತ ಕಲಾಚಿಂತಕರ ಗಮನ ಸೆಳೆದರು. ಅಮೆರಿಕಾದ ಮಾರ್ತಾ ಆಶrನ್‌, ಪೀಟರ್‌. ಜೆ. ಕ್ಲಾಸ್‌ ಮೊದಲಾದವರನ್ನು ಯಕ್ಷಗಾನ ಕಲಾವಿದರನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಶಿಷ್ಯೆ ಮಾರ್ತಾರಿಂದಾಗಿ ಅಮೇರಿಕಾ, ಜರ್ಮನಿ ಮೊದಲಾದ ದೇಶಗಳ ಯುನಿರ್ವಸಿಟಿಗಳಲ್ಲಿ ಪ್ರದರ್ಶನ- ಪ್ರಾತ್ಯಕ್ಷಿಕೆ ಕೊಟ್ಟುದು ಇವರ ಸಾಧನಾ ಪಥದ ಒಂದು ಮುಖ್ಯ ಮೈಲಿಗಲ್ಲು. 

ಯಕ್ಷಗಾನಕ್ಕೆ ಸಲ್ಲಿಸಿದ ಇವರ ಹಲವು ಕೊಡುಗೆಗಳಲ್ಲಿ ಏರುಮದ್ದಳೆ ಎನ್ನುವುದು ಪ್ರಮುಖವಾದುದು. ಈ ಚಿಕ್ಕ ಮದ್ದಳೆಯನ್ನು ತಯಾರಿಸಿ, ಇಂದು ಅರ್ಧರಾತ್ರಿಯ ಬಳಿಕ ಆಟದಲ್ಲಿ ಏರುಮದ್ದಳೆಯ ಬಳಕೆಗೆ ಇವರೇ ಮೊದಲಿಗರು. ಹವ್ಯಾಸಿ ತಂಡವಾಗಿರುವ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಆರಂಭದಲ್ಲಿ ಕಲಾವಿದರ ಹೆಜ್ಜೆಗಾರಿಕೆ ಹಾಗೂ ಅರ್ಥಗಾರಿಕೆಗೆ ಇವರೇ ಗುರುಗಳು. ಹಿರಿಯಡ್ಕದ ಕಾಜಾರಗುತ್ತು ದಶಾವತಾರ ಮಂಡಳಿ ಸ್ಥಾಪಿಸಿ ಯಕ್ಷಗಾನದ ಪಾರಂಪರಿಕ ಶೈಲಿಯನ್ನು ಅಲ್ಲಿಯ ಹವ್ಯಾಸಿಗಳಿಗೆ ಧಾರೆ ಎರೆದಿದ್ದಾರೆ. ಕರ್ನಾಟಕ ಸರಕಾರದ ಜಾನಪದ ಶ್ರೀ ಪ್ರಶಸ್ತಿ ಮಾತ್ರವಲ್ಲದೆ ಹಲವಾರು ಪ್ರಶಸ್ತಿಗಳು ತಾವಾಗಿಯೇ ಅರಸಿಕೊಂಡು ಬಂದಿವೆ. ಎ.14ರಂದು ಅಂಬಲಪಾಡಿಯಲ್ಲಿ ಗುರು ಹಿರಿಯಡ್ಕ ಗೋಪಾಲರಾಯರಿಗೆ ಅರ್ವತ್ತರ ಸಮ್ಮಾನವಿದೆ. 

ಪ್ರೊ|ಎಂ.ಎಲ್‌.ಸಾಮಗ 

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.