ಬೌದ್ಧಿಕ ಮೇವು ನೀಡಿದ ರಂಗ ಅಧ್ಯಯನದ ನಾಟಕ

Team Udayavani, Apr 13, 2018, 6:00 AM IST

19.jpg

(ಕಳೆದ ವಾರದಿಂದ) 
ವಾರ್ಡ್‌ ನಂ. 6

1892ರಲ್ಲಿ ಬಂದ ಆಂಟನ್‌ ಚೆಕಾವೊನ ಕಿರುಕಥೆ “ವಾರ್ಡ್‌ ನಂ.6′. ರಷ್ಯಾದ ಘಟನೆ, ಹಿಟ್ಲರ್‌ನ ಕ್ರೌರ್ಯ ಎಲ್ಲ ಸೇರಿ ಒಂದು ಮಾನಸಿಕ ರೋಗಿಗಳ ಆಸ್ಪತ್ರೆ ಹಾಗೂ ಅದರ ಸುತ್ತ ನಡೆಯುವ ಕ್ರೌರ್ಯ, ವಿಷಾದ, ನಿರಾಸೆ, ತಲ್ಲಣ, ಹಣದಾಹದ ನಡುವಿನ ಮಾನವೀಯತೆಯ ಸನ್ನಿವೇಶಗಳ ಚಿತ್ರಣ. ಇದನ್ನು ಡಿ.ಆರ್‌. ನಾಗರಾಜ್‌ ಕನ್ನಡಕ್ಕೆ ಅನುವಾದಿಸಿದ್ದಾರೆ. ಆರಂಭದಲ್ಲಿ ಸಮಾಜದ ಚಿತ್ರಣ. ಅದರಲ್ಲಿ ರಾಜಕಾರಣಿ, ಕಲಾವಿದ, ಶಿಕ್ಷಣಪ್ರೇಮಿ, ಪ್ರಾಣಿದಯಾ ಸಂಘದವರು ಸಮಾಜದಿಂದ ಏನು ನಿರೀಕ್ಷಿಸುತ್ತೇವೆ ಎಂದು ಸ್ವಗತ ಹೇಳಿಕೊಳ್ಳುತ್ತಾರೆ. ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಚಳವಳಿಗಾರ, ಒಬ್ಬ ಕೊಲೆಗಾರ ಮೊದಲಾದವರಿರುತ್ತಾರೆ. ಚಳವಳಿಗಾರನ ಅನವಶ್ಯಕವಾಗಿ ತನ್ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಹಳವಂಡಕ್ಕೆ ಮನಸೋತು ಪ್ರೀತಿ ತೋರಿಸುವ ಆಸ್ಪತ್ರೆ ವೈದ್ಯಾಧಿಕಾರಿಗೇ ಮಾನಸಿಕ ರೋಗಿಯ ಪಟ್ಟ ಕಟ್ಟುವ ಚಿತಾವಣೆ ನಡೆಯುತ್ತದೆ. ವೈದ್ಯ ಆನಂದನ ಪಾತ್ರಧಾರಿ ಉತ್ತಮ ಅಭಿನಯ ನೀಡಿದ್ದಾರೆ. ಪಾತ್ರಧಾರಿಗಳಾಗಿ ಚಂದನ್‌, ರಾಘವೇಂದ್ರ, ಶಿವಾಜಿ, ಗುರುದತ್ತ, ವಿಶ್ವ, ವೈಶಾಖ್‌, ದುಗೇìಶ್‌, ಅನುರಾಗ್‌, ಹರ್ಷ, ದತ್ತ, ಪ್ರಜ್ವಲ್‌ ಅಭಿನಯಿಸಿದ್ದರು. ಒಟ್ಟಿನಲ್ಲಿ ಕಲಾಸಕ್ತರ ಮನ ಸೆಳೆಯುವ ರಂಗಮಹೋತ್ಸವವಾಗಿ ಮೂಡಿಬಂತು. 

ಬೆಂಗಳೂರಿನ ಅನೇಕಾ ತಂಡವದರಿಂದ ಸುರೇಶ್‌ ಆನಗಳ್ಳಿ ನಿರ್ದೇಶನದ “ಮಹಾರಾಜ ಉಬು’ ಫ್ರಾನ್ಸ್‌ ಮೂಲದ ಕಥೆ. ಅಲ್ಲಿ 1896ರಲ್ಲಿ ಮೊದಲ ಪ್ರಯೋಗ ನಡೆದಾಗ ನಾಟಕವನ್ನು ಕಂಡ ಜನ ದೊಂಬಿ ಎದ್ದು ಎರಡನೇ ಪ್ರದರ್ಶನವಾಗದಂತೆ ತಡೆದರು. ಆದರೆ ಇಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿ ನಮ್ಮ ದೇಶದ ಪ್ರಚಲಿತ ರಾಜಕೀಯ ಸ್ಥಿತಿಗತಿಗಳನ್ನು ವಿಡಂಬನೆ ಮೂಲಕ ತೋರಿಸಲಾಗಿದೆ. ವಿಲಕ್ಷಣ ಮನಸ್ಸಿನ ಸೈನಿಕ ಉಬುರಾಯ್‌ನ ಕಥೆಯನ್ನು ಈ ನಾಟಕ ಒಳಗೊಂಡಿದ್ದು ಮಹತ್ವಾಕಾಂಕ್ಷೆಯಿಂದ, ಪತ್ನಿಯ ಮಾತು ಕೇಳಿ ರಾಜಕೀಯ ಪಿತೂರಿ ನಡೆಸಿ , ನಿರಂಕುಶ ಅಧಿಕಾರದ ಗದ್ದುಗೆ ಹಿಡಿದು ಹುಚ್ಚು ಹಿಂಸೆಯ ರಾಜ್ಯಭಾರ ನಡೆಸುತ್ತಾನೆ. ಸಮಾಜದ ಪ್ರತಿಷ್ಠಿತ ವೃತ್ತಿಗಳಲ್ಲಿ ಇರುವವರನ್ನು ಕೂಡಾ ಹುಚ್ಚು ಆಡಳಿತದಲ್ಲಿ ಗಲ್ಲಿಗೇರಿಸುವ ಹುಂಬ ನಿರ್ಧಾರ ತಾಳುತ್ತಾನೆ. ಒಟ್ಟು ಸಮಾಜದಲ್ಲಿ ಭೀತಿಯ ವಾತಾವರಣ ಮೂಡಿಸುತ್ತಾನೆ. ಹಳೆಯ ಕಾಲದ ರಾಜ್ಯಾಡಳಿತದ ಕತೆಯನ್ನು ಈ ಕಾಲದ ನವ್ಯ ಪ್ರಕಾರದ ಮೂಲಕ ಪ್ರೇಕ್ಷಕರಿಗೆ ಉಣ ಬಡಿಸಿದ ಯಶಸ್ವಿ ನಾಟಕ ಇದಾಗಿದೆ. 

ಲಾವಣ್ಯ ಬೈಂದೂರು ತಂಡದಿಂದ ಗಿರೀಶ್‌ ಬೈಂದೂರು ನಿರ್ದೇಶನದ “ಗಾಂಧಿಗೆ ಸಾವಿಲ್ಲ’ದಲ್ಲಿ ಪ್ರೇಕ್ಷಕರು ಅಭಿನಯದ ವಿಚಾರದಲ್ಲಿ ಗಾಂಧಿಗಿಂತ ಹೆಚ್ಚು ಅಂಕ ಗೋಡ್ಸೆ ಪಾತ್ರಧಾರಿಗೆ ನೀಡಿದ್ದರು. ಬೆಳಕು, ರಂಗಪರಿಕರ, ಸಂಗೀತ ಎಲ್ಲವೂ ರೂಪಕದ ಮಾದರಿಯಲ್ಲಿ ಜನರನ್ನು ಹಿಡಿದು ಕೂರಿಸಿತು. ಇದನ್ನು ಕನ್ನಡಕ್ಕೆ ತಂದದ್ದು ಹಸನ್‌ ನಯೀಂ ಸುರಕೋಡ , ನಿರ್ದೇಶನ ಗಿರೀಶ್‌ ಬೈಂದೂರು, ಮಾರ್ಗದರ್ಶನ ವಸಂತ ಬನ್ನಾಡಿಯವರದ್ದು. 

ತೃಶ್ಶೂರಿನ ರಿಮೆಬ್ರೇನ್ಸ್‌ ಥಿಯೇಟರ್‌ ತಂಡದವರ “ಚಿಲ್ಲರೆ ಸಮರಂ’ ಎಂಬ ಮಲಯಾಳ ನಾಟಕ ಪ್ರೇಕ್ಷಕರ ಮನದಾಳಕ್ಕೆ ಇಳಿಯಿತು. ಮಧ್ಯಮ, ಕೆಳಮಧ್ಯಮ ವರ್ಗದ ಕೃಷಿಕರು, ಕೂಲಿಕಾರರು, ನೌಕರರು, ಸಣ್ಣ ಪುಟ್ಟ ವ್ಯಾಪಾರಿಗಳನ್ನು ಜಾಗತೀಕರಣದ ಗಾಳಿ ಸೋಂಕುವ ಮೂಲಕ ದ‌ಮನಿಸುವ ವಿದೇಶಿ ಹಾಗೂ ಸ್ವದೇಶಿ ಭಾರೀ ಉದ್ಯಮಿ ಕುಳಗಳ ಆಟವನ್ನು ಬಿಡಿಸಿಟ್ಟ ಕಥೆ. ಸಾಮಾನ್ಯರನ್ನು ಮರುಳು ಮಾಡುವ ಐಷಾರಾಮಿ ಆಕರ್ಷಣೆ ಒಡ್ಡುವ ವ್ಯಾಪಾರಿ ಜಗತ್ತಿನ ಜಾಣ್ಮೆಯ ಹೊರಮುಖದ ಕಥೆ.

ಜಾಗತೀಕರಣದ ಬಂಡವಾಳ ಶಾಹಿಗಳ ಹಿನ್ನೆಲೆಯಲ್ಲಿ ಕೃಷಿ ಜಾನಪದ ಧರ್ಮ ಸಂಸ್ಕೃತಿ ಎಲ್ಲವೂ ಒಂದೊಂದಾಗಿ ನಶಿಸಿ ಹೋಗುವ ಕರ್ಮಕಾಂಡವನ್ನು ಬಿಚ್ಚಿಡುತ್ತಾ ತೀರಾ ಗ್ರಾಮೀಣ ಭಾಗದಿಂದ ವಿಮಾನ ಹಾರಾಟದ ತನಕ ಅಭಿವೃದ್ಧಿ ನೆಪದಲ್ಲಿ ನಗರೀಕರಣವಾಗುವ ಚಿತ್ರ ಬಿಚ್ಚಿಡುತ್ತಾ ಸಾಮಾನ್ಯರ ಸೋಲು ನೋವು ಹೇಳುತ್ತಾ ಸಾಗುವ ದೃಶ್ಯಮಾಲೆ ಇದು. ಬಂಡವಾಳ ಶಾಹಿಯನ್ನು ಡಾಲರ್‌ ರೂಪದಲ್ಲೂ ಮಧ್ಯಮ ಕೆಳಮಧ್ಯಮ ವರ್ಗದವರನ್ನು ಚಿಲ್ಲರೆಯಾಗಿಯೂ ಬಿಂಬಿಸಿ ರಂಗವಿನ್ಯಾಸಗೊಳಿಸಿದ ಪರಿ ಹಾಗೂ ಪ್ರಸ್ತುತಿ ಅದ್ಭುತವಾಗಿತ್ತು. ಚಿಲ್ಲರೆ ಶಬ್ದ ಹೇಗೆ ಡಾಲರ್‌ ನೋಟಿನ ತಾಕತ್ತನ್ನು ಮುಗಿಸುತ್ತದೆ ಎಂದು ತಮ್ಮ 60ನಿಮಿಷದಲ್ಲಿ ಸಾರಿ ಹೇಳುವ ಕೇರಳಿಗರ ಈ ರಂಗ ಪ್ರಯೋಗ ಅಪರಿಮಿತ ಅಭ್ಯಾಸದ ಪ್ರತೀಕವಾಗಿತ್ತು. ಗ್ರಾಮೀಣ ಸೊಗಡಿಂದ ವಿದೇಶಿ ಕಮೊಡೊ ತನಕ ಎಲ್ಲವನ್ನೂ ಕ್ಷಣಕ್ಷಣದ ಬದಲಾವಣೆಯಲ್ಲಿ ತೆರೆದಿಡುತ್ತಾ ಪ್ರೇಕ್ಷರನ್ನು ಕಟ್ಟಿ ಹಿಡಿದಿಟ್ಟುಕೊಳ್ಳುವ ಕಲಾವಿದರ ಪರಿಣಿತಿಗೆ ಇನ್ನೊಂದು ಉದಾಹರಣೆ ಇಲ್ಲ. ಅಷ್ಟೊಂದು ನಾಜೂಕು ಹಾಗೂ ಪರಿಪೂರ್ಣತೆ. ಎಲ್ಲ ಕಲಾವಿದರೂ ನೃತ್ಯ ಸಂಗೀತ ಧ್ವನಿ ಭಾವಾಭಿನಯದಲ್ಲಿ ತುಂಬಾ ಅನುಭವಿಗಳು. ಎನರ್ಜಿ ಲೆವೆಲ್‌ ಅಂತೂ ವಿವರಿಸಲೂ ಅಸಾಧ್ಯ.ಕುಂದಾಪುರ ರಂಗ ಅಧ್ಯಯನ ಕೇಂದ್ರ ಪ್ರಸ್ತುತಪಡಿಸಿದ ಭಾರತೀಯ ರಂಗ ಉತ್ಸವದ ಸಮಾರೋಪದಂದು ಪರಿಪೂರ್ಣ ಮಲಯಾಳಂ ನಾಟಕ “ಚಿಲ್ಲರೆ ಸಮರಂ’ ನೋಡಲು ಅವಕಾಶ ಆದದ್ದು ಒಂದು ವಿಶಿಷ್ಟ ಅನುಭವ ಎಂದು ಚಿತ್ರನಟ ಓಂ ಗಣೇಶ್‌ ಅವರು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ರಂಗೋತ್ಸವ ಪ್ರೇಕ್ಷಕರ ಮನದಲ್ಲಿ ಒಂದು ಅಚ್ಚಳಿಯದ ನೆನಪು ಉಳಿಸಿದೆ. 

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.