ಮಾಯವಾಗುತ್ತಿವೆ ಕುಡಿಯುವ ನೀರಿನ ಬಾವಿಗಳು !
Team Udayavani, Apr 13, 2018, 9:25 AM IST
ಕುಂಬಳೆ : ಹಿಂದಿನ ಕಾಲದಲ್ಲಿ ಕುಡಿಯುವ ನೀರಿಗಾಗಿ ಮನೆಗೊಂದು ಬಾವಿ ಅನಿವಾರ್ಯವಾಗಿತ್ತು.ಕೃಷಿಗೆ ತೋಟಗಳಲ್ಲಿ ಕೊಳಗಳಿದ್ದುವು. ಇದರಲ್ಲಿ ಧಾರಾಳ ನೀರಾಶ್ರಯವಿತ್ತು. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕೆಲವರಿಗೆ ಪ್ರಕೃತಿದತ್ತವಾಗಿ ಹರಿದು ಬರುವ ಸುರಂಗವಿತ್ತು. ಇದರಿಂದ ಶುದ್ಧ ಜಲಧಾರೆಯಾಗುತ್ತಿತ್ತು. ಕಾಲ ಕ್ರಮೇಣ ಮಳೆ ವಿರಳವಾಗಿ ಹವಾಮಾನದ ವೈಪರೀತ್ಯದಿಂದ ನೀರಿನ ಕೊರತೆ ಆರಂಭವಾಯಿತು.
ಜನಸಂಖ್ಯೆ ಏರಿಕೆಯಿಂದ ನೀರಿನ ಬಳಕೆ ಅಧಿಕವಾಗಿ ಜಲಮೂಲಗಳಲ್ಲಿ ನೀರಿನ ಕೊರತೆ ತಲೆದೋರಲು ಪ್ರಾರಂಭವಾಯಿತು. ಬಾವಿಗಳಲ್ಲಿ ನೀರು ತಳಸೇರಿ ಬಾವಿ ಬತ್ತಲು ತೊಡಗಿತು. ಬಾವಿಗೆ ಪರ್ಯಾಯವಾಗಿ ಕೊಳವೆ ಬಾವಿ ತೋಡಲು ಆರಂಭಗೊಂಡಿತು. ಇದೀಗ ಎಲ್ಲೆಡೆ ಬೋರ್‌ವೆಲ್‌ಗಳ ಕೊರೆತದ ಭೋರ್ಗರೆಯುವ ಶಬ್ದವನ್ನು ರಾತ್ರಿ ಹಗಲೆನ್ನದೆ ಎಲ್ಲೆಲ್ಲೂ ಕೇಳಬಹುದು.ರಾತ್ರಿ ಬೆಳಗಾಗುವುದರೊಳಗೆ ಅದೆಷೋr ಕೊಳವೆ ಬಾವಿಗಳು ನಿರ್ಮಾಣಗೊಳ್ಳುತ್ತಿವೆ. ಇದರಿಂದಾಗಿ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಆಳಕ್ಕೆ ಇಳಿಯುತ್ತಿದೆ. ನೀರಿಲ್ಲದೆ ಹೆಚ್ಚಿನ ಬರಿದಾದ ಬಾವಿಗಳೆಲ್ಲವೂ ಅನಾಥ ವಾಗಿವೆ. ಇದರಲ್ಲಿ ಕೆಲವು ಬಾವಿಗಳು ಮನೆ, ಕಟ್ಟಡ ಕಟ್ಟುವಾಗ ಮಣ್ಣು ತುಂಬಿಸಿ ಮುಚ್ಚಿದರೆ, ಇನ್ನು ಕೆಲವು ಬಾವಿಗಳನ್ನು ಮನೆಯ ಶೌಚಾಲಯದ ಗುಂಡಿಗಳನ್ನಾಗಿಸಲಾಗಿದೆ. ಇನ್ನು ಕೆಲವನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸಾರ್ವಜನಿಕರ ಬಳಕೆಗಾಗಿ ಸರಕಾರದಿಂದ ತೋಡಿದ ಬಾವಿಗಳು ಮಾಲಿನ್ಯ ತುಂಬುವ ಹೊಂಡಗಳಾಗಿವೆ. ಪೇಟೆ ಪಟ್ಟಣ ಮತ್ತು ರಸ್ತೆ ಪಕ್ಕಲ್ಲಿರುವ ಬಾವಿಗಳು ಹತ್ತಿರದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಮನೆಯವರಿಗೆ ತ್ಯಾಜ್ಯ ಸುರಿಯುವ ಗುಂಡಿಗಳಾಗಿವೆ. ಅಲ್ಲಲ್ಲಿ ಕೊಳವೆ ಬಾವಿ ನಿರ್ಮಾಣವಾಗುತ್ತಿದ್ದು ನೀರಿನ ಮಟ್ಟ ಪಾತಾಳಕ್ಕೆ ಇಳಿಯುವುದರಿಂದ ಬಾವಿಗಳ ನೀರು ಬತ್ತಿಹೋಗಿ ಹೆಚ್ಚಿನ ಬಾವಿಗಳ ಬಳಕೆ ಇಲ್ಲವಾಗಿದೆ.
ಬಾವಿಗಳು ದುರ್ಬಳಕೆಯಾಗುತ್ತಿವೆೆ.
ಪಾಳು ಬಾವಿಗಳಿಗೆ ಮಳೆ ನೀರು ಬೀಳುವುದರಿಂದ ಬಾವಿಯಲ್ಲಿ ನೀರು ಶೇಖರಣೆಯಾಗುವುದು.ಮತ್ತು ಮಳೆಗಾಲದ ಹರಿಯುವ ನೀರನ್ನು ಬಾವಿಗೆ ಹರಿಯ ಬಿಡುವುದರಿಂದ ನೀರನ್ನು ಭೂಮಿಗೆ ಇಂಗಿಸ ಬಹುದಾಗಿದೆ. ಆದರೆ ಇದರತ್ತ ಸಾರ್ವಜನಿಕರು ಮತ್ತು ಸರಕಾರ ಹೆಚ್ಚಿನ ಗಮನ ಹರಿಸಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ನೀರಿನ ಸಮಸ್ಯೆ ಜಟಿಲವಾಗಿ ಮುಂದಿನ ದಿನಗಳಲ್ಲಿ ಬಾವಿಗಳೇ ಇಲ್ಲವಾಗುವುದರಲ್ಲಿ ಸಂಶಯವಿಲ್ಲ. ಸಂಬಂಧಪಟ್ಟವರು ಇದರತ್ತ ಗಮನ ಹರಿಸಿ ಇದ್ದ ಬಾವಿಗಳನ್ನು ಉಳಿಸಬೇಕಾಗಿದೆ. ಬಾವಿಗಳ ರಕ್ಷಣೆಗೆ ಗಂಭೀರ ಚಿಂತನೆ ನಡೆಯಬೇಕಿದೆ. ನೀರಿಂಗಿಸಲು ಇಂಗು ಗುಂಡಿಗಳ ನಿರ್ಮಾಣಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಆದರೆ ನಿರುಪಯುಕ್ತ, ಪಾಳುಬಿದ್ದಿರುವ ಬಾವಿಗಳ ಉಳಿವಿಗೆ ಯೋಜನೆ ಇಲ್ಲವಾಗಿದೆ. ಬಾವಿಗಳನ್ನು ಮುಚ್ಚುವವರ ವಿರುದ್ಧ ಯಾವುದೇ ಕಾನೂನಿನ ಬಿಗಿ ಕ್ರಮ ಇಲ್ಲದ ಕಾರಣ ಬಾವಿಗಳು ಮಾಯವಾಗುತ್ತಿವೆ.
— ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.