ರಾಷ್ಟ್ರೀಯ ಮಾಸ್ಟರ್ ಆ್ಯತ್ಲೆಟಿಕ್ ಕೂಟಕ್ಕೆ ಚಾಲನೆ
Team Udayavani, Apr 13, 2018, 9:35 AM IST
ಮಂಗಳೂರು: ಭಾರತ ಹಿರಿಯರ ಆ್ಯತ್ಲೆಟಿಕ್ ಫೆಡರೇಶನ್ ಅನುಮೋದನೆಯೊಂದಿಗೆ ದ.ಕ. ಜಿಲ್ಲಾ ಹಿರಿಯರ ಆ್ಯತ್ಲೆಟಿಕ್ ಅಸೋಸಿಯೇಶನ್ ಹಾಗೂ ಕರ್ನಾಟಕ ರಾಜ್ಯ ಹಿರಿಯರ ಆ್ಯತ್ಲೆಟಿಕ್ ಅಸೋಸಿಯೇಶನ್ ಜಂಟಿ ಸಹಯೋಗದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ 38ನೇ ರಾಷ್ಟ್ರೀಯ ಹಿರಿಯರ ಆ್ಯತ್ಲೆಟಿಕ್ ಕೂಟ ಗುರುವಾರ ಉದ್ಘಾಟನೆಗೊಂಡಿತು. ಎ.15ರ ವರೆಗೆ ಕೂಟ ನಡೆಯಲಿದೆ. ದೇರಳಕಟ್ಟೆಯ ಯೇನಪೊಯ ವಿ.ವಿ. ಕುಲಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಆರೋಗ್ಯಯುತ ಮತ್ತು ಶಕ್ತಿಶಾಲಿ ದೇಹ ಹೊಂದಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯ. ಕ್ರೀಡೆ ಜೀವನದ ಭಾಗವೂ ಹೌದು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆಯೋಜಿಸಿರುವ ಹಿರಿಯರ ಕ್ರೀಡಾಕೂಟ ಮಾರ್ಗದರ್ಶಿ ಎಂದರು.
ಭಾರತೀಯ ಮಾಸ್ಟರ್ ಆ್ಯತ್ಲೆಟಿಕ್ಸ್ ಕಾರ್ಯಾಧ್ಯಕ್ಷ ಡಿ.ಎಚ್. ಗುರು, ಶ್ರೀಲಂಕಾದ ಹಿರಿಯರ ತಂಡದ ಮ್ಯಾನೇಜರ್ ಸುಂದರ್ ರಾಜು, ನಾಯಕ ಮಹೇಶ ಗುಣರತ್ನೆ, ಭಾ. ಮಾ. ಆ್ಯತ್ಲೆಟಿಕ್ಸ್‌ನ ಪ್ರ. ಕಾರ್ಯದರ್ಶಿ ಜೆರಾಲ್ಡ್ ಡಿ’ಸೋಜಾ, ಜಿಲ್ಲಾಧ್ಯಕ್ಷ ಕೆ.ಎಸ್. ಕೋದಂಡ ರಾಮೇಗೌಡ, ಮಿಸ್ಟರ್ ವರ್ಲ್ಡ್ ರೇಮಂಡ್ ಡಿ’ಸೋಜಾ ಉಪಸ್ಥಿತರಿದ್ದರು. ಕ್ರೀಡಾಕೂಟ ಸಂಘಟನ ಸಮಿತಿ ಸಂಚಾಲಕ ಕೆ. ತೇಜೋಮಯ ಸ್ವಾಗತಿಸಿದರು. ಉದ್ಘಾಟನೆಗೆ ಮುನ್ನ ಆಕರ್ಷಕ ಪಥಸಂಚಲನ ನಡೆಯಿತು.
ಮೈದಾನವೆಲ್ಲ ಹಿರಿಯರ ಕಲರವ
ಕರ್ನಾಟಕ, ಮಹಾರಾಷ್ಟ್ರ, ಕೇರಳ, ತ. ನಾಡು, ಆಂಧ್ರ, ತೆಲಂಗಾಣ, ಗುಜರಾತ್, ಮ. ಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಚಂಡೀಗಢ, ಪಂಜಾಬ್, ಕಾಶ್ಮೀರ, ಉ. ಪ್ರದೇಶ, ಉತ್ತರಾಖಂಡ, ಒರಿಸ್ಸಾ, ಹಿಮಾಚಲ ಪ್ರದೇಶ ಹಾಗೂ ಅಸ್ಸಾಂನ ಹಿರಿಯ ಕ್ರೀಡಾಪಟುಗಳು ಭಾಗವಹಿಸಿ ದ್ದಾರೆ. ಸುಮಾರು 100ರಷ್ಟು ತೀರ್ಪು ಗಾರರು ಉಪಸ್ಥಿತರಿದ್ದಾರೆ. ವಿಶೇಷ ಆಮಂತ್ರಿತರಾಗಿ ಶ್ರೀಲಂಕಾದ 47 ಕ್ರೀಡಾಳುಗಳು ಭಾಗವಹಿಸಿದ್ದಾರೆ. 80ಕ್ಕಿಂತ ಮೇಲ್ಪಟ್ಟವರು ಕೂಡ ಭಾಗವಹಿಸಿರುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.