![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 13, 2018, 10:51 AM IST
ಮಹಾನಗರ: ಮಕ್ಕಳ ಶೈಕ್ಷಣಿಕ ಮನೋವಿಜ್ಞಾನ ಅಧ್ಯಯನಕ್ಕಾಗಿ ಮಂಗಳೂರಿಗೆ ಬಂದಿದ್ದ ಇಬ್ಬರು ಜರ್ಮನಿ ವಿದ್ಯಾರ್ಥಿನಿಯರು ಮತ್ತು 6 ಅಮೆರಿಕಾದ ವಿದ್ಯಾರ್ಥಿನಿಯರು ಆವಿಷ್ಕಾರ ಯೋಗ ಬಿಜೈನಲ್ಲಿ ಯೋಗ ತರಬೇತಿ ಪಡೆದರು.
ಜರ್ಮನಿ ವಿದ್ಯಾರ್ಥಿನಿಯರು 4 ತಿಂಗಳ ಸರ್ಟಿಫಿಕೇಟ್ ಯೋಗ ಕೋರ್ಸ್ ಪೂರೈಸಿ ಆರೋಗ್ಯ ಕಾಳಜಿ, ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ಇರುವುದರಿಂದ ಅಲ್ಲಿನ ಇನ್ಶೂರೇನ್ಸ್ ಕಂಪೆನಿಗಳು ಯೋಗ ತರಬೇತಿಗೆ ಹಣ ಪಾವತಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಮೆರಿಕಾದ ವಿದ್ಯಾರ್ಥಿನಿಯರು 15 ದಿನಗಳ ತರಬೇತಿಯನ್ನು ಪಡೆದು, ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯೋಗವೂ ಒಂದು ಕಡ್ಡಾಯ ವಿಷಯವಾಗಿರುವುದು ಅಮೆರಿಕಾದ ಶಿಕ್ಷಣ ಪದ್ಧತಿ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.
ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಷಟ್ ಕ್ರಿಯೆ, ಯೋಗಾಸನ, ಪ್ರಾಣಾಯಾಮ, ಬಂಧ ಮುದ್ರ, ವಿಶ್ರಾಂತಿ ಕ್ರಿಯೆ ಹಾಗೂ ಧ್ಯಾನದ ತರಬೇತಿಯಲ್ಲಿ ಯೋಗ ಚಿಕಿತ್ಸಕ ಕುಶಾಲಪ್ಪ ಗೌಡ ಎಸ್., ಮತ್ತು ಉಷಾ ಕೆ. ತರಬೇತಿ ಮತ್ತು ಅಷ್ಠಾಂಗ ಹಾಗೂ ಹಠ ಯೋಗದ ಸಿದ್ಧಾಂತ ತರಗತಿಯನ್ನು ನಡೆಸಿದರು.
You seem to have an Ad Blocker on.
To continue reading, please turn it off or whitelist Udayavani.