ಹಿಂದುಳಿದ ವರ್ಗ ಸೆಳೆಯಲು ಬಿಜೆಪಿ ಕೃಷ್ಣಂರಾಜುಗೆ ಬಿಜೆಪಿ  ಮೊರೆ

Team Udayavani, Apr 13, 2018, 12:08 PM IST

hin-krishna.jpg

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಮತಬ್ಯಾಂಕ್‌ ಬಿಜೆಪಿಯತ್ತ ಸೆಳೆಯುವ ದೃಷ್ಟಿಯಿಂದ ಬಿಜೆಪಿ ನೆರೆಯ ಆಂಧ್ರಪ್ರದೇಶದ ರೆಬಲ್‌ಸ್ಟಾರ್‌ ಖ್ಯಾತಿಯ ನಟ ಕೃಷ್ಣಂರಾಜು ಅವರಿಗೆ ಮೊರೆ ಹೋಗಿದೆ.  ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ಕೃಷ್ಣಂರಾಜು ರಾಜುಕ್ಷತ್ರಿಯ ಸಂಘದ ಅಧ್ಯಕ್ಷ ಎಲ್‌.ಕೆ.ರಾಜು, ಉದ್ಯಮಿ ಶ್ಯಾಮರಾಜು ಸೇರಿದಂತೆ ಸಮುದಾಯದ ಮುಖಂಡರ ಜತೆ ಸತತ ಸಮಾಲೋಚನೆ ನಡೆಸಿದ್ದಾರೆ.

ನಟ ಪ್ರಭಾಸ್‌ ಅವರನ್ನು ರಾಜಕೀಯಕ್ಕೆ ಕರೆ ತಂದರೆ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ರಾಜು ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ಹಾಗೂ ಸಮುದಾಯದವನ್ನು ಎಲ್ಲರೂ ಗುರುತಿಸಲು ಸಹಕಾರಿಯಾಗಲಿದೆ ಎಂದು ರಾಜ್ಯದ ಮುಖಂಡರು ಕೃಷ್ಣಂರಾಜು ಅವರ ಬಳಿ ಪ್ರಸ್ತಾಪವನ್ನೂ ಇಟ್ಟಿದ್ದು ವಿಶೇಷ.  ಈ ಸಂದರ್ಭದಲ್ಲಿ ಕೃಷ್ಣಂರಾಜು ಜತೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನ.

* ಕರ್ನಾಟಕದಲ್ಲಿ ನಿಮ್ಮ ಪ್ರಕಾರ ಬಿಜೆಪಿ ಪರಿಸ್ಥಿತಿ ಹೇಗಿದೆ? 
ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. 

* ಆಂಧ್ರಪ್ರದೇಶಕ್ಕೆ ವಿಶೆಷ ಪ್ಯಾಕೇಜ್‌ ನೀಡಿಲ್ಲ. ತೆಲುಗು ಭಾಷಿಕರು ಬಿಜೆಪಿಗೆ ಮತ ಹಾಕಬಾರದು ಎಂಬ ಅಭಿಯಾನ ನಡೆಯುತ್ತಿದೆಯಲ್ಲಾ?|
ಅದೆಲ್ಲಾ ಇಲ್ಲಿ ನಡೆಯುವುದಿಲ್ಲ. ಬಿಜೆಪಿ ಆಂಧ್ರಪ್ರದೇಶಕ್ಕೆ ಮೋಸ ಮಾಡಿಲ್ಲ. ವಾಗಾœನ ಮಾಡಿದ್ದನ್ನು  ಈಡೇರಿಸಿದೆ, ಇನ್ನೂ ಕೊಡಲಿದೆ. 

* ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾತಿಗೆ ತಪ್ಪಿದ ಬಿಜೆಪಿ ಎಂದು ಎನ್‌ಡಿಎ ಮೈತ್ರಿಕೂಟದಿಂದಲೇ ಹೊರ ಹೋಗಿದ್ದಾರಲ್ಲಾ? 
ಅದು ರಾಜಕೀಯ ಕಾರಣಗಳಿಗೆ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಆದರೆ, ನರೇಂದ್ರಮೋದಿಯಿಂದ ನಮಗೆ ಅನ್ಯಾಯವಾಗಿಲ್ಲ 

* ಈ ಚುನಾವಣೆಯಲ್ಲಿ ನಿಮ್ಮ ರಾಜು ಸಮುದಾಯಕ್ಕೆ ಬಿಜೆಪಿಯಿಂದ ಎಷ್ಟು ಟಿಕೆಟ್‌ ಕೊಡಿಸುವಿರಿ? 
ಯಾವ್ಯಾವ ಕ್ಷೇತ್ರದಲ್ಲಿ ರಾಜು ಸಮುದಾಯದ ನಾಯಕರಿಗೆ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ಟಿಕೆಟ್‌ ದೊರೆಯಲಿದೆ. 

* ನೀವು ಆ ಬಗ್ಗೆ ಮಾತನಾಡಿದ್ದೀರಾ? 
ಹೌದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಳಿ ಮಾತನಾಡಿದ್ದೇನೆ. 

* ನಿಮ್ಮನ್ನು ಸಮುದಾಯದ ಸಂಘಟಿಸಲು ಕೇಂದ್ರದ ನಾಯಕರು ಕರ್ನಾಟಕಕ್ಕೆ ಕಳುಹಿಸಿದ್ದಾರಾ?
 ಹಾಗೇನಿಲ್ಲ. ಪಕ್ಷದ ಜವಾಬ್ದಾರಿಯುತ ಮುಖಂಡನಾಗಿ ಪಕ್ಷದ ಪರ ಕೆಲಸ ಮಾಡಲು ಬಂದಿದ್ದೇನೆ. 

* ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆಂಧ್ರ-ತೆಲಂಗಾಣದಲ್ಲಿ ಯಾವುದು ಪ್ರಮುಖ ವಿಷಯ? 
ಟಿಡಿಪಿ-ಬಿಜೆಪಿ ಮರು ಮೈತ್ರಿ ಸಾಧ್ಯವಾ? ಯಾವುದೇ ಚುನಾವಣೆಯಲ್ಲೂ ಅಭಿವೃದ್ಧಿ ಪ್ರಮುಖ ವಿಷಯ. ಜತೆಗೂಡುವುದು ಬಿಡುವುದು ಅವರವರಿಗೆ ಬಿಟ್ಟದ್ದು.

* ನಿಮ್ಮ ಸಹೋದರ ಪುತ್ರ ನಟ ಪ್ರಭಾಸ್‌ನನ್ನು ಸಮುದಾಯದ ಪರವಾಗಿ ರಾಜಕೀಯಕ್ಕೆ ಕರೆತನ್ನಿ ಎಂಬ ಪ್ರಸ್ತಾಪವಿದೆಯಂತಲ್ಲಾ?
ರಾಜಕೀಯಕ್ಕೆ ಬರುವುದು ಬಿಡುವುದು ಆತನ ಇಚ್ಛೆ.   

ಆಂಧ್ರದ ರೆಬೆಲ್ ಸ್ಟಾರ್: ಉಪ್ಪಲಪಾಟಿ ಚಿನ್ನವೆಂಕಟ ಕೃಷ್ಣಂರಾಜು ಅವಿಭಜಿತ ಆಂಧ್ರಪ್ರದೇಶದಲ್ಲಿ “ರೆಬಲ್‌ಸ್ಟಾರ್‌’ ಎಂದೇ ಖ್ಯಾತಿ. 183 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು  “ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ ಅವರ ದೊಡ್ಡಪ್ಪ. ಪ್ರಭಾಸ್‌ ಇವರ ಗರಡಿಯಲ್ಲೇ ಪಳಗಿ ನಟರಾದವರು. 1998 ರಲ್ಲಿ ಕಾಕಿನಾಡಿ, 1999 ರಲ್ಲಿ ನರಸಾಪುರ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದ ಕೃಷ್ಣಂರಾಜು, ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. 

* ಎಸ್‌.ಲಕ್ಷ್ಮಿನಾರಾಯಣ 

ಟಾಪ್ ನ್ಯೂಸ್

Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ

Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ

Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿ ಭವಿಷ್ಯ ನಿಜವಾಯ್ತು

Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು

Nidhi-TVK

Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ ಪಟ್ಟ…ಟ್ರಂಪ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

12

Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್  

Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ‌

Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Crime: ಶೀಲ ಶಂಕಿಸಿ ಪತ್ನಿ  ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ

Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ

Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿ ಭವಿಷ್ಯ ನಿಜವಾಯ್ತು

Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು

Mangaluru: ಡಿ.28; ಮಂಗಳೂರು ಕಂಬಳ; ಪೂರ್ವಭಾವಿ ಸಭೆ

Mangaluru: ಡಿ.28; ಮಂಗಳೂರು ಕಂಬಳ; ಪೂರ್ವಭಾವಿ ಸಭೆ

Nidhi-TVK

Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ

Udupi: ಕಾರ್ಮಿಕರ ದಾಖಲೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕರ ದಾಖಲೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.