ನಾಲೆಗೆ ನೀರು ಹರಿಸದೇ ಸಂಕಷ್ಟಕ್ಕೆ ಸಿಲುಕಿಸಿದ ಸಚಿವ
Team Udayavani, Apr 13, 2018, 12:48 PM IST
ನರಸೀಪುರ: ನಾಲೆಗಳಿಗೆ ನೀರು ಹರಿಸದೇ, ಸ್ಥಳೀಯ ಯುವಕರಿಗೆ ಮರಳು ಗಣಿಗಾರಿಕೆ ಅವಕಾಶ ನೀಡದೇ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿ, ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಸ್.ಶಂಕರ್ ದೂರಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಟೌನ್ ಸೇರಿ ತಾಲೂಕಿನ ಸೋಸಲೆ, ದೊಡ್ಡೇಬ್ಟಾಗಿಲು ಗ್ರಾಮಗಳ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಮಹದೇವಪ್ಪ ಜಲಾಶಯಗಳಲ್ಲಿ ನೀರಿದ್ದರೂ ನಾಲೆಗಳಿಗೆ ಹರಿಸಲಿಲ್ಲ,
ಮರಳು ಗಣಿ ನಿರ್ಬಂಧಿಸಿ ಯುವಕರ ಉದ್ಯೋಗಕ್ಕೆ ಕತ್ತರಿ ಹಾಕಿ, ಜನರು ನೆಮ್ಮದಿಯಿಂದ ಜೀವನ ನಡೆಸದಂತೆ ಮಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಣಿಕಂಠರಾಜ್‌ಗೌಡ ಮಾತನಾಡಿದರು. ಯುವಕರಾದ ಶಿವ ನಿಶ್ಚಿತ್, ನಿಂಗರಾಜು, ಶಿವರಾಜು, ಸಿದ್ಧಾರ್ಥ, ಮಹೇಶ್, ರಘು, ಸ್ವಾಮಿ, ಚೌಹಳ್ಳಿ ನವೀನ್, ಸೂರಿ, ಪದ್ಮಾ,
-ಲೋಕೇಶ್, ನಾರಾಯಣಸ್ವಾಮಿ, ಸುಮಂತ್, ಪ್ರಕಾಶ್, ಸಿದ್ದೇಶ್, ರಘುವೀರ್, ತರಕಾರಿ ಶಿವು, ನವೀನ್, ಕಿರಣ್ ಸೇರಿ ಟೌನ್, ಸೋಸಲೆ ಹಾಗೂ ದೊಡ್ಡೇಬ್ಟಾಗಿಲು ಗ್ರಾಮಗಳ ನೂರಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗೋರೂರು ಶಿವಕುಮಾರ್, ಉಪಾಧ್ಯಕ್ಷ ನಾಡನಹಳ್ಳಿ ಸುರೇಶ್, ಡಿ.ಶಿವಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.