ಜಗದ್ಗುರು ಮೌನೇಶ್ವರ ಜಾತ್ರೆ: ಪಲ್ಲಕ್ಕಿ ಮೆರವಣಿಗೆ
Team Udayavani, Apr 13, 2018, 3:41 PM IST
ಭಾಲ್ಕಿ: ಜಗದ್ಗುರು ಮೌನೇಶ್ವರರ 32ನೇ ವಾರ್ಷಿಕ ಜಾತ್ರಾಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಪಲ್ಲಕ್ಕಿ ಮೆರವಣಿಗೆಯು ಶ್ರದ್ಧೆ, ಭಕ್ತಿಯಿಂದ ಜರುಗಿತು. ಬೆಳಗ್ಗೆ 8ಕ್ಕೆ ಕಾಳಿಕಾದೇವಿ ದೇಗುಲದಲ್ಲಿ ಪಲ್ಲಕ್ಕಿ ಮೆರವಣಿಗೆಗೆ ಜಗದ್ಗುರು ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಏಕನಾಥರಾವ್ ಪಾಂಚಾಳ ಚಾಲನೆ ನೀಡಿದರು. ಮೌನೇಶ್ವರ ಮಂದಿರದಿಂದ ಆರಂಭಗೊಂಡ ಮೆರವಣಿಗೆ ತೀನ್ ದುಕಾನ್, ಧರ್ಮೇಶ್ವರ ದೇಗುಲ, ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಗಾಂಧಿ ವೃತ್ತದ ರಸ್ತೆಯಿಂದ ಸಾಗಿ ಪುನಃ ಮೌನೇಶ್ವರ ದೇಗುಲದಲ್ಲಿ ಸಮಾವೇಶಗೊಂಡಿತು.
ನಂತರ ಮಹಾ ಮಂಗಳಾರುತಿ, ಪೂಜೆ ಸೇರಿದಂತೆ ನಾನಾ ಕೈಂಕರ್ಯಗಳು ನೆರವೇರಿದವು. ಮೆರವಣಿಗೆಯಲ್ಲಿ ಪುರವಂತರು, ಕಳಸ ಹೊತ್ತ ಸುಮಂಗಲೆಯರು ಗಮನ ಸೆಳೆದರು. ಹುಮನಾಬಾದನ ಏಕದಂಡಿ ಪೀಠದ ಕುಮಾರ ಸ್ವಾಮೀಜಿ, ಜಗದ್ಗುರು ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಏಕನಾಥರಾವ್ ಪಾಂಚಾಳ, ಉಪಾಧ್ಯಕ್ಷ ಅಶೋಕರಾವ್ ಸೋನಾರ್, ಖಜಾಂಚಿ ರಾಜಕುಮಾರ ಪಾಂಚಾಳ, ರಾಜು ಪಾಂಚಾಳ, ಬಾಬುರಾವ್ ಕಂಬಾರ್, ಬಸಪ್ಪ ಪಾಂಚಾಳ, ದಿಲೀಪ ಪಾಂಚಾಳ, ಧನರಾಜ, ಗಣಪತಿ, ಚಂದ್ರಕಾಂತ ಪಾಂಚಾಳ, ಅನಿಲ ಪಾಂಚಾಳ, ಸಂಜುಕುಮಾರ ಪಾಂಚಾಳ,
ವಿಠಲರಾವ್ ಪಾಂಚಾಳ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.