“ನಾವು ಓಟು ಹಾಕುತ್ತೇವೆ ಆದರೆ ನೀವು ಪ್ರತಿಜ್ಞೆ ಮಾಡುತ್ತೀರಾ?’


Team Udayavani, Apr 14, 2018, 7:30 AM IST

karnataka-assembly-election.jpg

ಕುಂದಾಪುರ: ನಾವು ನಿಮಗೆ ಮತ ಹಾಕುತ್ತೇವೆ. ಆದರೆ ನೀವು ಅದಕ್ಕೂ ಮೊದಲು ನಮಗೊಂದು ಪ್ರತಿಜ್ಞೆ ಮಾಡುತ್ತೀರಾ ಇದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಸಜ್ಜಾಗಿರುವ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಸಮಿತಿಯು ಒಂದು ವಿಶಿಷ್ಟ ಪ್ರತಿಜ್ಞಾ ವಿಧಿಯನ್ನು ಸಿದ್ದಪಡಿಸಿ, ಇದಕ್ಕೆ ಬದ್ಧರಾದರೆ ಮಾತ್ರ ನಾವು ನಿಮಗೆ ಓಟು ಹಾಕುತ್ತೇವೆ ಎನ್ನುವುದನ್ನು ಮತದಾರರ ಮೂಲಕ ವ್ಯಕ್ತಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 

ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಸಮಿತಿಯು ಜಿಲ್ಲಾ ಸ್ವೀಪ್‌ ಸಮಿತಿಯ ನಿರ್ದೇಶನದಂತೆ ಎಲ್ಲ ಕಡೆಗಳಲ್ಲಿ ಮತದಾನದ ಜಾಗೃತಿ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆ ಕಾರ್ಯಕ್ರಮಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ಆಧರಿಸಿ ಈ ಪ್ರತಿಜ್ಞಾ ವಿಧಿಯನ್ನು ಸಿದ್ದಪಡಿಸಿದ್ದು, ಇದನ್ನು ಈಗ ಅಭ್ಯರ್ಥಿಗಳ ಮುಂದಿಡಲಾಗುತ್ತಿದೆ.

ಈ ಅಂಶಗಳಿಗೆ ಬದ್ಧರಾಗಿರಿ
-  ಹಣ, ಹೆಂಡ, ವಸ್ತುಗಳನ್ನು ಹಂಚದೇ, ಯಾವುದೇ ಆಸೆ-ಆಮಿಷಗಳನ್ನು ಜನರಿಗೆ ಒಡ್ಡದೇ ಪ್ರಾಮಾಣಿಕ, ಚೊಕ್ಕ ಚುನಾವಣೆ ನಡೆಸುತ್ತೇನೆ.
-  ಎಲ್ಲರನ್ನೊಳಗೊಂಡ ಜನ ಭಾಗವಹಿಸುವಿಕೆಗೆ ಬೆಂಬಲ ನೀಡುತ್ತೇನೆ ಹಾಗೂ ಜನಪರ ಅಭಿವೃದ್ಧಿಯಲ್ಲಿ ಪಕ್ಷ ರಾಜಕೀಯ ಮಾಡುವುದಿಲ್ಲ.
-  ದೇಶದ ಸಂವಿಧಾನಕ್ಕೆ ಹಾಗೂ ಅದರ ರಕ್ಷಣೆ, ಅನುಷ್ಠಾನಕ್ಕೆ ಬದ್ಧನಾಗಿರುತ್ತೇನೆ. 
-  ಹಕ್ಕು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ.
-  ಯಾವುದೇ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ಜನರನ್ನು ಹಣ ಕೊಟ್ಟು ಕೊಂಡುಕೊಳ್ಳುವುದಿಲ್ಲ. 
-  ಮಹಿಳೆ ಮತ್ತು ಮಕ್ಕಳನ್ನು ಒಳಗೊಂಡ ಶೋಷಿತ ವರ್ಗದವರ ಬಗ್ಗೆ ಗೌರವ ಮತ್ತು ಕಾಳಜಿ ಉಳ್ಳವನಾಗಿದ್ದು, ಅವರ ಪರವಾಗಿ, ಅವರ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತೇನೆ.
-  ಜಾತಿ, ಮತ, ಧರ್ಮ, ಪ್ರಾದೇಶಿಕ, ಲಿಂಗ, ವಯಸ್ಸಿನ ಬೇಧ ಮಾಡದೇ ಎಲ್ಲರ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತೇನೆ.

ಅಭ್ಯರ್ಥಿಗಳೇ ಪ್ರತಿಜ್ಞೆ ಮಾಡಿ
“ಭಾರತ ದೇಶದ ಪ್ರಜೆಯಾದ ನಾನು, ಈ ದೇಶದ ಸಂವಿಧಾನವನ್ನು ಗೌರವಿಸುವುದಲ್ಲದೇ, ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ. ಅದಲ್ಲದೇ ಈಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು, ಪ್ರಜಾಪ್ರಭುತ್ವದ ನೆಲೆಯಲ್ಲಿ ಜನರ ಒಡಗೂಡಿ ಪ್ರಾಮಾಣಿಕವಾಗಿ, ಯಾವುದೇ ರೀತಿಯ ಸ್ವಂತ ಹಿತಾಸಕ್ತಿ ತೋರದೇ, ಜನರನ್ನು ಆಸೆ-ಆಮಿಷಗಳಿಗೆ ಒಡ್ಡದೇ, ಜನರೊಂದಿಗೆ ಸೇರಿ ಸೇವೆ ಸಲ್ಲಿಸುವುದಕ್ಕೋಸ್ಕರ, ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡುವುದಿಲ್ಲ ಎಂಬ ದೃಢ ನಿಲುವಿನೊಂದಿಗೆ ಜನರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ’. 

ಟಾಪ್ ನ್ಯೂಸ್

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.