ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ರಂಗಸಿರಿ ಯಕ್ಷಗಾನ
Team Udayavani, Apr 14, 2018, 10:55 AM IST
ಬೊಳ್ಳೂರು: ಯಕ್ಷಗಾನದ ಬಣ್ಣಗಾರಿಕೆ, ವೇಷಭೂಷಣಗಳ ಕಟ್ಟುವಿಕೆಯನ್ನು ಕಲಾವಿದನು ಸ್ವತಃಮಾಡಿಕೊಂಡರೆ ಅದು ಆತನ ಕಲಾ ಪರಿಪೂರ್ಣತೆಯ ಮಾಪನದ ಒಂದು ಭಾಗ. ಇಂದಿನ ಹವ್ಯಾಸಿ, ಮಹಿಳಾ, ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಮುನ್ನೆಲೆಗೆ ಬರುತ್ತಿರುವವರು ಕೇವಲ ರಂಗಪ್ರದರ್ಶನ ಭಾಗವನ್ನಷ್ಟೇ ಸ್ವಲ್ಪ ಕಲಿತು, ಅಲ್ಪಸಾಧನೆಗೆ ತೃಪ್ತರಾಗುವುದನ್ನೇ ಕಾಣುತ್ತೇವೆ. ಅದಕ್ಕೆ ಅಪವಾದವೆಂಬಂತೆ ಸ್ವಂತಿಕೆಯನ್ನು ಅಳವಡಿಸಿಕೊಳ್ಳುತ್ತಿರುವವರು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳು. ಬದಿಯಡ್ಕ ಸಮೀಪದ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಮಕ್ಕಳೇ ಉತ್ಸಾಹದಿಂದ ನಮ್ಮೂರ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತೇವೆಂದು ಮುಂದೆ ಬಂದರು. ಸ್ವತಃ ತಾವೇ ಪ್ರಾಯೋಜಕತ್ವವನ್ನೂ ವಹಿಸಿಕೊಂಡು ಅವಕಾಶ ಕೇಳಿದಾಗ ಒಪ್ಪಿ, ಪ್ರೋತ್ಸಾಹಿಸುವ ಒಳ್ಳೆಯ ಮನ ಮಾಡಿದ್ದು ಬ್ರಹ್ಮಕಲಶೋತ್ಸವ ಸಮಿತಿ.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯರು ಒದಗಿಸಿದ ವೇಷಭೂಷಣ ತಂದು ಅವರ ಮಾರ್ಗದರ್ಶನದಲ್ಲೇ ಸ್ವತಃ ಬಣ್ಣಗಾರಿಕೆ, ವೇಷ ಮಾಡಿಕೊಂಡರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ರಾಜೇಂದ್ರ ವಾಂತಿಚ್ಚಾಲು, ಶ್ರೀಹರಿ ಮವ್ವಾರು, ಗಿರೀಶ ಅವರು ಸಹಕರಿಸಿದರು. ‘ಜಾಂಬವತೀ ಕಲ್ಯಾಣ’ ಆಖ್ಯಾನದ ಪ್ರದರ್ಶನದಲ್ಲಿ ಬಲರಾಮನಾಗಿ ಧ್ಯಾನ್ ರೈ, ನಾರದ ಮತ್ತು ಜಾಂಬವತಿಯಾಗಿ ಶ್ರೀಜಾ ಉದನೇಶ್, ಕೃಷ್ಣನಾಗಿ ಅಭಿಜ್ಞಾ ಭಟ್, ಜಾಂಬವಂತನಾಗಿ ಶಶಾಂಕ ಮೈರ್ಕಳ ತಮ್ಮ ಪ್ರತಿಭೆ ಮೆರೆದರು. ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ, ಮದ್ದಳೆಯಲ್ಲಿ ರಂಗಸಿರಿಯ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಹಾಗೂ ಚಕ್ರತಾಳದಲ್ಲಿ ಶ್ರೀಶ ಕುಮಾರ ಪಂಜಿತ್ತಡ್ಕ ಸಹಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ತಂಡಕ್ಕೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.