ವಿದ್ಯಾರ್ಥಿಗಳ ಆಪ್ತಮಿತ್ರ “ಎಕ್ಸಾಮ್ ವಾರಿಯರ್’
Team Udayavani, Apr 14, 2018, 6:40 AM IST
ಹುಬ್ಬಳ್ಳಿ: “ಮನ್ ಕೀ ಬಾತ್’ ಮೂಲಕ ವಿದ್ಯಾರ್ಥಿಗಳು, ಯುವಕರು, ರೈತರು ಇನ್ನಿತರರ ಮೇಲೆ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಪ್ರಭಾವ ಬೀರಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ-ಆತಂಕ ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬುವ “ಎಕ್ಸಾಮ್ ವಾರಿಯರ್’ ಕೃತಿ ಕನ್ನಡದಲ್ಲೂ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರಲ್ಲದೆ, ಪರೀಕ್ಷೆ ಸಂದರ್ಭದಲ್ಲಿ ಮಾರ್ಗದರ್ಶಿಯಾಗಬಲ್ಲ, ಆತ್ಮಬಲ ತುಂಬಬಲ್ಲ ಹಲವು ಸಲಹೆಗಳನ್ನೂ ನೀಡಿದ್ದರು. “ಮನ್ ಕೀ ಬಾತ್’ನಲ್ಲಿ ನೀಡಿದ ಸಲಹೆಗಳನ್ನೇ ಒಟ್ಟುಗೂಡಿಸಿ ಅವುಗಳಿಗೆ ಅಕ್ಷರ ರೂಪ ನೀಡಲಾಗಿದೆ. ದೇಶದಲ್ಲಿ ಎಲ್ಲ ಭಾಷೆಗಳಲ್ಲೂ ಈ ಕೃತಿ ಹೊರ ಬರಲಿದ್ದು, ಕನ್ನಡ ಅವತರಣಿಕೆಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿದೆ.
ಹಬ್ಬದ ರೀತಿ ಆಚರಿಸಿ:
ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ರೀತಿ ದಿಗಿಲು, ಆತಂಕ-ಭಯ ಆವರಿಸಿಕೊಳ್ಳುತ್ತದೆ. ಮನಸ್ಸಿನ ಒತ್ತಡ ಹೆಚ್ಚುತ್ತದೆ. ಉತ್ತಮ ಅಂಕ ಪಡೆಯಬೇಕೆಂದು ಪಾಲಕರು ಮಕ್ಕಳ ಮೇಲೆ ಹಾಕುವ ಒತ್ತಡ ಇದರ ಬಿಸಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ.
ಕೆಲವೊಂದು ವಿದ್ಯಾರ್ಥಿಗಳು ತರಗತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳಾಗಿರುತ್ತಾರೆ. ಆದರೆ, ಪರೀಕ್ಷೆ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿ ಅನುತ್ತೀರ್ಣರಾದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಒತ್ತಡ ನಿವಾರಣೆ ನಿಟ್ಟಿನಲ್ಲಿ ಮೋದಿಯವರು “ಮನ್ ಕೀ ಬಾತ್’ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಮಿತ್ರನಾಗಿ, ಮಾರ್ಗದರ್ಶಕ, ಶಿಕ್ಷಕನಾಗಿ ಸಲಹೆ ನೀಡಿದ್ದಾರೆ. ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆ ವೃದ್ಧಿಸುವ ಕಾರ್ಯ ಮಾಡಿದ್ದಾರೆ. ಹಬ್ಬಗಳೆಂದರೆ ಸಂಭ್ರಮದಿಂದ ಹೇಗೆ ಆಚರಿಸುತ್ತೇವೋ, ಅದಕ್ಕಾಗಿ ಹೇಗೆಲ್ಲ ತಯಾರಿ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಪರೀಕ್ಷೆಯನ್ನು ಸಂಭ್ರಮದಿಂದಲೇ ಎದುರಿಸಿ, ಪರೀಕ್ಷೆಗೆ ಹೋಗುವಾಗ ಒತ್ತಡಕ್ಕೆ ಒಳಗಾಗದೆ ನಗು ಮೊಗದೊಂದಿಗೆ ಹೋಗಿ ಎಂಬ ಮಹತ್ವದ ಸಲಹೆ ನೀಡಿದ್ದಾರೆ.
ಪರೀಕ್ಷೆ ಇಡೀ ಬದುಕಲ್ಲ. ಅದೊಂದು ಭಾಗವಷ್ಟೇ. ಪರೀಕ್ಷೆಯ ಸೋಲು, ಬದುಕಿನ ಸೋಲಲ್ಲ. ಸಿದ್ಧತೆಯಲ್ಲಿ ಯಾವುದೇ ರಾಜಿ ಬೇಡ. ಎದೆಗುಂದದೆ ಎದುರಿಸಿ ಜಯಶೀಲರಾಗಿ. ಅಂಕ ಗಳಿಕೆ ಚಿಂತೆ ಬಿಡಿ, ಜ್ಞಾನ ಸಂಪಾದನೆಯ ಯಾತ್ರೆಯೇ ಒಂದು ತೃಪ್ತಿದಾಯಕ ಅನುಭವ. ನಿಮ್ಮೊಂದಿಗೆ ನೀವೇ ಸ್ಪರ್ಧಿಸಲು ಮುಂದಾಗಿ, ಯಶಸ್ಸು ತಾನಾಗಿಯೇ ಬರುತ್ತದೆಂಬ ಆಪ್ತ ಸಲಹೆ ನೀಡಿದ್ದಾರೆ.
ಸಮಯಕ್ಕೆ ಆದ್ಯತೆ ನೀಡಬೇಕೇ ವಿನಃ ಅದನ್ನು ಪೋಲು ಮಾಡಬೇಡಿ. ಸಮಯ ಅಮೂಲ್ಯ, ಅದರ ಪೂರ್ಣ ಪ್ರಮಾಣದ ಸದ್ಬಳಕೆ ಆಗಲಿ. ಇದು ತಂತ್ರಜ್ಞಾನದ ಯುಗವಾಗಿದ್ದು, ತಂತ್ರಜ್ಞಾನವೇ ನಿಮ್ಮ ಉತ್ತಮ ಶಿಕ್ಷಕನಾಗಲಿ. ಲವಲವಿಕೆಯಿಂದಿರಿ, ಇದಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಪರೀಕ್ಷೆ ಚೆನ್ನಾಗಿ ಬರೆದರೆ ಉತ್ತಮ ಅಂಕ ಬಂದೇ ಬರುತ್ತದೆ. ಒಂದು ವೇಳೆ ಚೆನ್ನಾಗಿ ನಿಭಾಯಿಸಿಲ್ಲ ಎಂದಾದರೆ ಚಿಂತೆ ಬೇಡ. ಯಾಕೆಂದರೆ ನಿಮ್ಮ ಕೊರಗಿನಿಂದ ಉತ್ತರ ಪತ್ರಿಕೆ ಬದಲಾಯಿಸುವ ಸ್ವಾತಂತ್ರ್ಯ ನಿಮಗಿಲ್ಲ ಎನ್ನುವ ಮೂಲಕ ಪರೀಕ್ಷೆ ಮುಂಚೆ ಆತಂಕಕ್ಕೊಳಗಾಗುವ, ಪರೀಕ್ಷೆ ನಂತರ ನಿರಾಸೆಗೊಳಗಾಗುವ ವಿದ್ಯಾರ್ಥಿಗಳಿಗೆ ಬದುಕು ದೊಡ್ಡದಿದೆ, ಅವಕಾಶಗಳು ಸಾಕಷ್ಟಿವೆ ಎಂಬ ಧೈರ್ಯ ತುಂಬುವ ಮಾತುಗಳು ಕೃತಿಯಲ್ಲಿ ಕಾಣ ಸಿಗುತ್ತವೆ.
ಸುಮಾರು 224 ಪುಟಗಳನ್ನೊಳಗೊಂಡ “ಎಕ್ಸಾಮ್ ವಾರಿಯರ್’ ಕೃತಿ 25 ಪರಿವಿಡಿ, ಶಿಕ್ಷಕರಿಗೆ ಪತ್ರ, ಯೋಗದ ಕುರಿತಾದ ಮಾಹಿತಿಯನ್ನು ಹೊಂದಿದೆ. ಈ ಕೃತಿ ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆ ಸಂದರ್ಭದಲ್ಲಷ್ಟೇ ಅಲ್ಲದೆ, ಬದುಕಿನ ಮಹತ್ವ ಅರಿಯುವ ಕನ್ನಡಿಯಾಗಿ ಗೋಚರಿಸಿದೆ. ವಿದ್ಯಾರ್ಥಿಗಳಲ್ಲದವರಿಗೂ ಇದು ಆತ್ಮಸ್ಥೈರ್ಯ ತುಂಬುವ ಮಾರ್ಗದರ್ಶಿಯಾಗಬಲ್ಲದಾಗಿದೆ ಎಂಬ ಭರವಸೆಯನ್ನು ಕೃತಿ ಮೂಡಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.