ಜಾವಾಂಯ್ ನಂ.1 ಬಿಡುಗಡೆ
Team Udayavani, Apr 14, 2018, 8:20 AM IST
ಮಂಗಳೂರು: ಸಂಗಾತಿ ಕ್ರಿಯೇಶನ್ಸ್ ನಿರ್ಮಾಣ ಮತ್ತು ಬಾಲಿವುಡ್ನ ಭೋಜ್ಪುರಿ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ನಿರ್ದೇಶನದ ಬಹುನಿರೀಕ್ಷೆಯ ‘ಜಾವಾಂಯ್ ನಂ.1’ ಕೊಂಕಣಿ ಸಿನೆಮಾ ಶುಕ್ರವಾರ ಕರಾವಳಿಯ 13 ಥಿಯೇಟರ್ಗಳಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪೌಲ್ ಡಿ’ಸೋಜಾ ಅವರು ಚಿತ್ರ ಬಿಡುಗಡೆ ಮಾಡಿದರು. ‘ಕಳೆದ ಕೆಲ ವರ್ಷಗಳಲ್ಲಿ ನಿರಂತರವಾಗಿ ಕೊಂಕಣಿ ಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದು ಕೊಂಕಣಿ ಚಿತ್ರೋದ್ಯಮದ ಪ್ರಗತಿಯ ಸೂಚನೆಯಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಬೇಕು’ ಎಂದು ಆಶಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಹಿರಿಯ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ, ಸಂಗೀತ ನಿರ್ದೇಶಕ ಎರಿಕ್ ಒಝಾರಿಯೊ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿ’ಸೋಜಾ, ನಟಿ ವರ್ಷಾ ಉಸ್ಗಾವಂಕರ್ ಮಾತನಾಡಿದರು. ನಿರ್ದೇಶಕ ಹೆನ್ರಿ ಫೆರ್ನಾಂಡಿಸ್ ಹಾಗೂ ಸಿರಿಲ್ ಕ್ಯಾಸ್ಟಲಿನೊ ವಂದಿಸಿದರು. ನಟರಾದ ಸ್ಟಾನಿ ಅಲ್ವರೆಸ್, ರಾನ್ಸ್ ಲಂಡನ್, ಸುಜಾತಾ ಅಂದ್ರಾಡೆ, ದೀಪಕ್ ಪಾಲಡ್ಕ, ಲೆವಿ ಜೆ ಪಿಂಟೊ, ಮಾಂಡ್ ಸೊಭಾಣ್, ಫೋರ್ವಿಂಡ್ಸ್ ಕಮ್ಯುನಿಕೇಶನ್ಸ್ನ ಇ. ಫೆರ್ನಾಂಡಿಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.