ಸನ್‌ಗೆ ದೀಪಕ್, ಸ್ಟಾನ್ ಲಕ್
Team Udayavani, Apr 14, 2018, 7:00 AM IST
ಹೈದರಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ ಹೈದರಾಬಾದ್ ತಂಡ ರೋಚಕ 1 ವಿಕೆಟ್ ಗೆಲುವು ಸಾಧಿಸಿದೆ. ಇದು ಹೈದರಾಬಾದ್ ತಂಡಕ್ಕೆ ಪ್ರಸ್ತುತ ಕೂಟದಲ್ಲಿ ಒಲಿದ ಸತತ ಎರಡನೇ ಗೆಲುವು. ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಕೂಟದಲ್ಲಿ ಸತತ ಎರಡನೇ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸಂದೀಪ್ ಶರ್ಮ, ಸಿದ್ದಾರ್ಥ್ ಹಾಗೂ ರಶೀದ್ ಖಾನ್ ಬಿಗು ದಾಳಿಗೆ ಸಿಲುಕಿ 8 ವಿಕೆಟಿಗೆ 147 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್ ರೈಸರ್ ಗೆ ಮುಂಬೈ ಬೌಲರ್ ಮಾಯಾಂಕ್ ಮಾರ್ಕಂಡೆ (23ಕ್ಕೆ4) ವಿಕೆಟ್ ಭಯ ಹುಟ್ಟಿಸಿದ್ದರು. ಆದರೆ ಹೈದರಾಬಾದ್ ಪರ ಶಿಖರ್ ಧವನ್ (45 ರನ್), ವೃದ್ದಿಮಾನ್ ಸಹಾ (22 ರನ್) ಉತ್ತಮ ಆರಂಭ ನೀಡಿದರು. ಕೊನೆಯಲ್ಲಿ ದೀಪಕ್ ಹೂಡಾ (ಅಜೇಯ 32 ರನ್) ಹಾಗೂ ಬಿಲ್ಲಿ ಸ್ಟಾನ್‌ಲೇಕ್ (5 ರನ್) ಸಾಹಸಮಯ ಬ್ಯಾಟಿಂಗ್‌ನಿಂದ ಸನ್‌ರೈಸರ್ ರೋಚಕ ಗೆಲುವು ಪಡೆಯಿತು.
ಗೆಲ್ಲಿಸಿದ ಹೂಡಾ – ಸ್ಟಾನ್‌ಲೇಕ್: ಗೆಲುವಿನಂಚಿಗೆ ತಲುಪಿದ್ದ ಸನ್‌ರೈಸರ್ ಕೊನೆಯ ಹಂತದಲ್ಲಿ ಇದ್ದಕ್ಕಿಂದಂತೆ ವಿಕೆಟ್
ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ಅಂತಿಮವಾಗಿ 1 ಎಸೆತಕ್ಕೆ 1 ರನ್ ಅಗತ್ಯವಿದ್ದಾಗ ದೀಪಕ್ ಹೂಡಾ – ಬಿಲ್ಲಿ ಸ್ಟಾನ್ ಲೇಕ್ (5 ರನ್) ಇದ್ದರು. ಕ್ರೀಸ್‌ನಲ್ಲಿದ್ದ ಸ್ಟಾನ್ ಲೇಕ್ ಅವರು ಕಟ್ಟಿಂಗ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು. ಅಲ್ಲಿಗೆ 20 ಓವರ್‌ಗೆ 151ಕ್ಕೆ 9 ವಿಕೆಟ್ ಕಳೆದುಕೊಂಡು ಹೈದರಾಬಾದ್ ಗೆಲುವು ಸಾಧಿಸಿತು.
ಮತ್ತೆ ಎಡವಿದ ರೋಹಿತ್ ಪಡೆ: ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ತವರಿನಂಗಳದಲ್ಲೇ ಶರಣಾಗಿದ್ದ ಮುಂಬೈ, ದ್ವಿತೀಯ ಪಂದ್ಯದಲ್ಲೂ ಬ್ಯಾಟಿಂಗ್ ಜೋಶ್ ಪ್ರದರ್ಶಿಸುವಲ್ಲಿ ವಿಫಲವಾಯಿತು. ಹೈದರಾಬಾದ್ ತಂಡದ ರಶೀದ್ ಖಾನ್ ಬಿಗು ದಾಳಿಗೆ ಪರದಾಡಿತು.
ಪಂದ್ಯದ ತಿರುವು
ಚೇಸಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಕೊನೆಯ 2 ಎಸೆತದಲ್ಲಿ 2 ರನ್‌ಬೇಕಿತ್ತು. ಕೈಯಲ್ಲಿ ಒಂದು ವಿಕೆಟ್ ಮಾತ್ರ ಇತ್ತು. ಈ ಹಂತದಲ್ಲಿ ಮುಂಬೈ ತಂಡದ ಬೆನ್ ಕಟಿಂಗ್ ಎಸೆದ 19.5ನೇ ಎಸೆತದಲ್ಲಿ ಹೂಡಾ ಹೊಡೆದ ಚೆಂಡನ್ನು ಫೈನ್ ಲೆಗ್‌ನಲ್ಲಿದ್ದ ಬುಮ್ರಾ ಕೈಚೆಲ್ಲಿದರು. ಮುಂಬೈನಿಂದ ಪಂದ್ಯವೂ ಕೈಜಾರಿತು.
ಮುಂಬೈ 20 ಓವರ್‌ಗೆ 147/8
ರೋಹಿತ್ ಶರ್ಮ ಸಿ ಶಕೀಬ್ ಬಿ ಸ್ಟಾನ್‌ಲೇಕ್ 11
ಎವಿನ್ ಲೆವಿಸ್ ಬಿ ಕೌಲ್ 29
ಇಶಾನ್ ಕಿಶನ್ ಸಿ ಪಠಾಣ್ ಬಿ ಕೌಲ್ 9
ಸೂರ್ಯಕುಮಾರ್ ಸಿ ಹೂಡಾ ಬಿ ಸಂದೀಪ್ 28
ಕೃಣಾಲ್ ಪಾಂಡ್ಯ ಸಿ ವಿಲಿಯಮ್ಸನ್ ಬಿ ಶಕೀಬ್ 15
ಕೈರನ್ ಪೊಲಾರ್ಡ್ ಸಿ ಧವನ್ ಬಿ ಸ್ಟಾನ್‌ಲೇಕ್ 28
ಬೆನ್ ಕಟಿಂಗ್ ಬಿ ರಶೀದ್ ಖಾನ್ 9
ಪ್ರದೀಪ್ ಸಂಗ್ವಾನ್ ಎಲ್‌ಬಿ ಸಂದೀಪ್ 0
ಮಾಯಾಂಕ್ ಮಾರ್ಕಂಡೆ ಅಜೇಯ 6
ಜಸ್‌ಪ್ರೀತ್ ಬುಮ್ರಾ ಅಜೇಯ 4
ಇತರೆ 8 ವಿಕೆಟ್: 1-11, 2-48, 3-54, 4-72, 5-110, 6-133, 7-136, 8-136
ಬೌಲಿಂಗ್
ಸಂದೀಪ್ ಶರ್ಮ 4 0 25 2
ಬಿಲ್ಲಿ ಸ್ಟಾನ್‌ಲೇಕ್ 4 0 42 2
ರಶೀದ್ ಖಾನ್ 4 0 13 1
ಸಿದ್ದಾರ್ಥ್ ಕೌಲ್ 4 0 29 2
ಶಕೀಬ್ ಅಲ್ ಹಸನ್ 4 0 34 1
ಸನ್ ರೈಸರ್ ಹೈದರಾಬಾದ್ 20 ಓವರ್‌ಗೆ 151/9
ವೃದ್ಧಿಮಾನ್ ಶಾ ಎಲ್‌ಬಿ ಮಾರ್ಕಂಡೆ 22
ಶಿಖರ್ ಧವನ್ ಸಿ ಬುಮ್ರಾ ಬಿ ಮಾರ್ಕಂಡೆ 45
ಕೇನ್ ವಿಲಿಯಮ್ಸನ್ ಸಿ ಕಿಶಾನ್ ಬಿ ಮುಸ್ತμಜೂರ್ 6
ಮನೀಶ್ ಪಾಂಡೆ ಸಿ ರೋಹಿತ್ ಬಿ ಮಾರ್ಕಂಡೆ 11
ಶಕೀಬ್ ಅಲ್ ಹಸನ್ ಬಿ ಮಾರ್ಕಂಡೆ 12
ದೀಪಕ್ ಹೂಡಾ ಅಜೇಯ 32
ಯೂಸುಫ್ ಪಠಾಣ್ ಸಿ ಪೋಲಾರ್ಡ್ ಬಿ ಬುಮ್ರಾ 14
ರಶೀದ್ ಖಾನ್ ಸಿ ಇಶಾನ್ ಬಿ ಬುಮ್ರಾ 0
ಸಿದ್ದಾರ್ಥ್ ಕೌಲ್ ಸಿ ಮತ್ತು ಬಿ ಮುಸ್ತμಜೂರ್ 0
ಸಂದೀಪ್ ಶರ್ಮಾ ಸಿ ಪಾಂಡ್ಯ ಡಿ ಮುಸ್ತμಜೂರ್ 0
ಬಿಲ್ಲಿ ಸ್ಟಾನ್‌ಲೇಕ್ ಅಜೇಯ 5
ಇತರೆ 4
ವಿಕೆಟ್: 1-62, 2-73, 3-77, 4-89, 5-107, 6-136, 7-136, 8-137, 9-137
ಬೌಲಿಂಗ್
ಪ್ರದೀಪ್ ಸಾಂಗ್ವಾನ್ 2 0 19 0
ಜಸ್‌ಪ್ರೀತ್ ಬುಮ್ರಾ 4 0 32 2
ಬೆನ್ ಕಟಿಂಗ್ 4 0 37 0
ಕೃಣಾಲ್ ಪಾಂಡ್ಯ 2 0 10 0
ಮಾಯಾಂಕ್ ಮಾರ್ಕಂಡೆ 4 0 23 4
ಮುಸ್ತಜೂರ್ ರೆಹಮಾನ್ 4 0 24 3
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.