ಮನಸ್ಸು ಮನಸ್ಸು ಸೇರಿಸೋ “ನೃತ್ಯ ರಂಗೋಲಿ’
Team Udayavani, Apr 14, 2018, 3:41 PM IST
ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ರಾಷ್ಟ್ರೀಯ ನೃತ್ಯ ಮಹೋತ್ಸವ, “ನೃತ್ಯ ರಂಗೋಲಿ’ ಆಯೋಜನೆಯಾಗಿದೆ. ಖ್ಯಾತ ಕಥಕ್ ಕಲಾವಿದೆ ನಿರುಪಮಾ ರಾಜೇಂದ್ರ ಅವರಿಂದ “ಅಭಿಸಾರ್’ ಕಥಕ್ ಪ್ರದರ್ಶನ ನಡೆಯುತ್ತಿದೆ. ಯುವ ನೃತ್ಯ ದಂಪತಿ ವಿದ್ವಾನ್ ಚೇತನ್ ಗಂಗಟ್ಕರ್ ಮತ್ತು ವಿದುಷಿ ಚಂದ್ರಪ್ರಭ ಚೇತನ್‌ರಿಂದ ಕೂಚಿಪುಡಿ ನೃತ್ಯ ಪ್ರದರ್ಶನ ಹಾಗೂ ನೂಪುರ ತಂಡದವರಿಂದ “ನೃತ್ಯ ಕರ್ನಾಟಕ’ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭ ಡಾ. ವೀಣಾ ಮೂರ್ತಿ ವಿಜಯ್ ನೇತೃತ್ವದಲ್ಲಿ ನಡೆಯಲಿದೆ.
ಎಲ್ಲಿ?: ಚೌಡಯ್ಯ ಮೆಮೊರಿಯಲ್ ಹಾಲ್, ವೈಯಾಲಿ ಕಾವಲ್
ಯಾವಾಗ?: ಏ.14, ಶನಿವಾರ ಸಂಜೆ 6.15
ಸಂಪರ್ಕ: 9886598171
ಹಿಂದೂಸ್ಥಾನಿ ಸಂಗೀತ ಲಹರಿ
ರಾಗ ಸಂಗಮ ಸಂಸ್ಥೆ ವತಿಯಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜನೆಯಾಗಿದೆ. ಉಸ್ತಾದ್ ರಯೀಸ್ ಬಾಲೇಖಾನ್ ಅವರ ಗಾಯನಕ್ಕೆ ಪಂಡಿತ್ ವಿಶ್ವನಾಥ್ ನಾಕೋಡ್ (ತಬಲಾ) ಸತೀಶ್ ಕೊಳ್ಳಿ (ಸಂವೇದಿನಿ) ಅವರು ಸಹಕಾರ ನೀಡಲಿದ್ದಾರೆ.
ಎಲ್ಲಿ?: ಎಸ್.ಎನ್.ಇ.ಎ ಭವನ, 1020, ಬಿ ಬ್ಲಾಕ್, ಅಲಹಾಬಾದ್ ಬ್ಯಾಂಕ್ ಹತ್ತಿರ, ಸಹಕಾರ ನಗರ
ಯಾವಾಗ?: ಏ.15, ಭಾನುವಾರ ಸಂಜೆ 6
ಮಾಧವನ ನೆನೆಯುತ್ತಾ….
ವಿಆರ್‌ಸಿ ಅಕಾಡೆಮಿ ಆರ್ಟ್ ಮ್ಯೂಸಿಕ್ ಆ್ಯಂಡ್ ಡ್ಯಾನ್ಸ್ ಹಾಗೂ ಲಾಸ್ಯ ಆರ್ಟ್ಸ್ ಮಲೇಷಿಯ ವತಿಯಿಂದ “ಮಾಧವಂ; ದಿ ಎಟರ್ನಲ್ ಬ್ಲಿಸ್’..ಎಂಬ ನೃತ್ಯ ಪ್ರದರ್ಶನ ನಡೆಯಲಿದೆ. ಕೃತಿಕಾ ರಾಮಚಂದ್ರನ್ ಮತ್ತು ಶಂಗಾರಿ ಆ್ಯಡ್ರಿಯನ್, ಮಾಧವನನ್ನು ನೆನೆಯುತ್ತಾ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇವರು ಗುರುವಾಯೂರು ಉಷಾ ದೊರೈ ಅವರ ಶಿಷ್ಯೆಯರು. ಇವರಿಬ್ಬರ ಹೆಜ್ಜೆಗಳ ಜುಗಲ್‌ಬಂಧಿಗೆ ಸಾಕ್ಷಿಯಾಗಿ.
ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ
ಯಾವಾಗ? ಏ.14, ಶನಿವಾರ ಸಂಜೆ 6.30
ಹೊರಟು ಉಳಿದವನ ದ್ವಂದ್ವ
ಅಂತರಂಗ ರಂಗತಂಡದ ಹೊಸ ನಾಟಕ “ಹೊರಟು ಉಳಿದವನು’ ಪ್ರದರ್ಶನಕ್ಕೆ ಸಿದ್ಧವಾಗಿದೆ. ವೈಯಕ್ತಿಕ ಬದುಕಿನಿಂದ ವಿಮುಖನಾಗಲು ಹೊರಟ ಕಥಾನಾಯಕ ತನ್ನವರಿಂದ ದೂರವಾಗಿ ತನಗೆ ಮಾತ್ರ ಕಾಣುವ ಪಾತ್ರಗಳೊಂದಿಗೆ ಹತ್ತಿರವಾಗುತ್ತಾನೆ. ಆದೆ ಮುಂದೊಮ್ಮೆ ಮತ್ತೆ ಕುಟುಂಬವನ್ನು ಸೇರಲು ಪ್ರಯತ್ನಿಸಿದಾಗ ದ್ವಂದ್ವಗಲು ಎದುರಾಗುತ್ತವೆ. ಪ್ರಸಿದ್ಧ ಹಿಂದಿ ರಂಗ ಮತ್ತು ಸಿನಿಮಾ ಕಲಾವಿದ ಮಾನವ್ ಕೌಲ್ ರಚಿಸಿದ ಈ ನಾಟಕವನ್ನು ಕನ್ನಡಕ್ಕೆ ತಂದವರು ಜಗದೀಶ್ ಮಲಾ°ಡ್. ಅರ್ಚನಾ ಶ್ಯಾಮ್ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ಏಪ್ರಿಲ್ 20, ಸಂಜೆ 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.