ಡೌನ್ ಸಿಂಡ್ರೋಮ್ ನೀವು ತಿಳಿದಿರಬೇಕಾದ ಮಾಹಿತಿ
Team Udayavani, Apr 15, 2018, 6:00 AM IST
ನೀವು ಈ ಡೌನ್‌ಸಿಂಡ್ರೋಮ್ ಬಗ್ಗೆ ಟಿವಿಯಲ್ಲಿ ನೋಡಿರಬಹುದು. ಅಥವಾ ಎಲ್ಲಿಯಾದರೂ ಕೇಳಿರಬಹುದು. ಆದರೆ ಇದು ಯಾವ ರೀತಿಯ ಖಾಯಿಲೆ, ಇದರ ಬಗ್ಗೆ ನೀವು ಯಾಕೆ ತಿಳಿದುಕೊಳ್ಳಬೇಕು. ಇದನ್ನು ಪತ್ತೆ ಹಚ್ಚಬಹುದೇ? ಹಾಗಾದರೆ ಹೇಗೆ? ಇಲ್ಲಿದೆ ಇದರ ಬಗ್ಗೆ ಮಾಹಿತಿ.
ಪ್ರತಿಯೊಬ್ಬ ಗರ್ಭವತಿ ಸ್ತ್ರೀ ಮತ್ತು ಅವಳ ಕುಟುಂಬದವರು, ಮಗು ಸ್ವಸ್ಥವಾಗಿರಬೇಕು. ಹಾಗೂ ಅದು ಬೆಳೆದು ಉತ್ತುಂಗದ ಮಟ್ಟದಲ್ಲಿ ಏರಬೇಕು ಎಂಬ ಅಭಿಲಾಷೆ ಹೊಂದಿರುತ್ತಾರೆ. ಅದು ಸಹಜ. ಆದರೆ ಕೆಲವೊಮ್ಮೆ, ದುರಾದೃಷ್ಟ ವಶಾತ್ ಕೆಲವು ಮಕ್ಕಳಿಗೆ ಹುಟ್ಟುತ್ತಲೇ ಜೆನೆಟಿಕ್ ಅಸ್ವಸ್ಥತೆ ಇರಬಹುದು. ಇದು ಕುಟುಂಬದಲ್ಲಿ ಯಾರಿಗೂ ಇದರ ಲಕ್ಷಣವಿಲ್ಲದೇ ಹೋದರೂ, ಆಗಬಹುದು. ಅಂತಹ ಕಾಯಿಲೆಗಳಲ್ಲಿ ಒಂದು ಡೌನ್ ಸಿಂಡ್ರೋಮ್.
ಡೌನ್ ಸಿಂಡ್ರೋಮ್ ಎಂದರೆ ಗುಣತಂತುಗಳ ಅಸಮತೋಲನದಿಂದ ಆಗುವ ಒಂದು ಸ್ಥಿತಿ. ಎಲ್ಲ ಆರೋಗ್ಯವಂತ ವ್ಯಕ್ತಿಗಳಲ್ಲಿ, 21ನೇ ಜಾಗದಲ್ಲಿ, ಇನ್ನೊಂದು ಗುಣತಂತುವು ಅಧಿಕವಾಗಿ ಇರುತ್ತದೆ, ಆದರಿಂದಲೇ ಈ ಸ್ಥಿತಿಯನ್ನು ಟ್ರೈಸೋಮಿ 21 (Trysomy 21) ಎಂದೂ ಸಹ ಕರೆಯಲಾಗುತ್ತದೆ. ಬುದ್ಧಿಮಾಂದ್ಯತೆ ಉಂಟು ಮಾಡುವ ಕಾಯಿಲೆಗಳಲ್ಲಿ, ಇದು ಅತ್ಯಂತ ಪ್ರಮುಖವಾದದ್ದು. ಈ ಮಕ್ಕಳು ನೋಡಲು ಭಿನ್ನವಾಗಿ ಕಾಣುತ್ತಾರೆ, ಹೃದಯ ಹಾಗೂ ಜಠರಕ್ಕೆ ಸಂಬಂಧಿಸಿದ ತೊಂದರೆಗಳು ಇವರಲ್ಲಿ ಸಹಜ. ಈ ಮಕ್ಕಳು ಎಲ್ಲರಂತೆ ಕೂರುವುದು, ನಿಲ್ಲುವುದು, ನಡೆಯುವುದು ಮಾತನಾಡುವುದು, ಇವೆಲ್ಲವನ್ನು ಮಾಡುತ್ತಾರೆ. ಆದರೆ ನಿಧಾನಗತಿಯಲ್ಲಿ . ಇವರು ದೊಡ್ಡವರಾದ ಅನಂತರವು ಮನೆಯವರ ನೆರವು ಹಾಗೂ ಉಸ್ತುವಾರಿ ಅಗತ್ಯವಿರುತ್ತದೆ.
ಡೌನ್ ಸಿಂಡ್ರೋಮ್ ಇರುವ ಮಕ್ಕಳು ಜನಿಸುವ ಸಾಧ್ಯತೆ ಯಾವುದೇ ಸ್ತ್ರೀಗೂ ಸಹ ಇರುತ್ತದೆ. ಅದರದಲ್ಲಿ ತಾಯಿಯ ವಯಸ್ಸು ಹೆಚ್ಚಾಗುತ್ತಾ ಹೋದಂತೆ, ಈ ಸಿಂಡ್ರೋಮ್ ಇರುವ ಮಗು ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. ಆದರೆ ಒಂದು ಒಳ್ಳೆಯ ವಿಚಾರವೇನೆಂದರೆ, ಈ ಸಿಂಡ್ರೋಮ್ ಇರುವುದು, ಮಗು ಜನಿಸುವ ಮುನ್ನವೇ ಪತ್ತೆ ಹಚ್ಚುವ ಸೌಲಭ್ಯವಿದೆ.ಈ ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ಮಾಡಬಹುದು.ಒಂದು 11-14ನೇ ವಾರದ ಗರ್ಭಾವಸ್ಥೆಯಲ್ಲಿ, ಅಲ್ಟ್ರಾಸೌಂಡ್ ಮೂಲಕ ಎನ್‌ಟಿ/ಎನ್‌ಬಿ (NT/NB) ಸ್ಕ್ಯಾನ್ ಮಾಡಿ, ಅದರ ಜೊತೆ ಡಬಲ್ ಮಾರ್ಕರ್ ಎನ್ನುವ ರಕ್ತಪರೀಕ್ಷೆಯನ್ನು ಮಾಡಬಹುದು.ಇಲ್ಲವಾದರೆ, 15-20 ವಾರಗಳ ನಡುವೆ ಕ್ವಾಡ್ರುಪಾಲ್ ಟೆಸ್ಟ್ ಎನ್ನುವ ರಕ್ತ ಪರೀಕ್ಷೆಯನ್ನು ಮಾಡಬಹುದು.
ಇವೆರಡೂ ಪರೀಕ್ಷೆಗಳು ಕೇವಲ ಸ್ಕ್ರೀನಿಂಗ್ (screening)) ಪರೀಕ್ಷೆಗಳಾಗಿರುತ್ತವೆ ಎಂದರೆ ಪ್ರಾಸಿಂಡ್ರೋಮ್ ಆಗುವ ಸಂಭಾವನೆ/ಅಪಾಯ. ನಿಮಗಿದೆಯೆ ಎಂದು ತಿಳಿಯಬಹುದು. ಕಡಿಮೆ ಅಪಾಯ Low riskಎಂಬ ಫಲಿತಾಂಶ ಬಂದರೆ ಗರ್ಭಾವಸ್ಥೆಯನ್ನು ಯಥಾವತ್ ಮುಂದೆ ನಡೆಸಿಕೊಂಡು ಹೊಗಬಹುದು. ಆದರೆ, ಒಂದೊಮ್ಮೆ ಇದ್ದರಲ್ಲಿ ಏನಾದರೂ ಹೆಚ್ಚಿನ ಅಪಾಯವೆಂದು ಫಲಿತಾಂಶ ಬಂದರೆ, ಈ ಮಗುವಿಗೆ ಡೌನ್ ಸಿಂಡ್ರೋಮ್ ಇದೆಯೇ, ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಲು ಕೋರಿಯೋನಿಕ್ ವಿಲ್ಲಸ್ ಮಾದರಿ (US) ಅಥವಾ ಆಮ್ನಿಯೋಸೆಂಟಸಿಸ್ (Amniocenteus) ಎಂಬ ಪರೀಕ್ಷೆಯನ್ನು ಮಾಡಬೇಕಾಗುತ್ತದೆ ಇದರಲ್ಲಿ ಮಗುವಿನ ಸುತ್ತ ಇರುವ ಗರ್ಭನಾಳದ ಮಾಸುಚೀಲದ ಅಂಶ (Uniquionic villi) ಅಥವಾ ಆಮ್ನಿಯೋಟಿಕ್ ದ್ರವವನ್ನು ಒಂದು ಸಣ್ಣ ಸೂಜಿಯಿಂದ ತೆಗೆದು ಪರೀಕ್ಷಿಸುತ್ತೇವೆ. ಈ ಪರೀಕ್ಷೆಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಆದರೆ ಸುಮಾರು 0.3 to 0.5% ಗರ್ಭಪಾತದ ಸಾಧ್ಯತೆ ಇರುತ್ತದೆ.ಒಂದು ನೆನಪಿನಲ್ಲಿ ಇಡಬೇಕಾಗದ ವಿಷಯವೆಂದರೆ, ಈ ಪರೀಕ್ಷೆಗಳು ಕೇವಲ. ಪರೀಕ್ಷೆ ಮಾಡಿದ ಸಿಂಡ್ರೋಮ್ ಇದೆಯೇ ಇಲ್ಲವೇ ಎಂದು ಮಾತ್ರ ಹೇಳುತ್ತದೆ. ಬುದ್ಧಿಮಾಂದ್ಯತೆ ಕಾರಣವಾಗುವ ಬೇರೆ ಪರಿಸ್ಥಿತಿ ಹಾಗೂ ಅಂಗ ವೈಕಲ್ಯತೆಯನ್ನು ಪತ್ತೆ ಹಚ್ಚುವುದಿಲ್ಲ.
ಇದಲ್ಲದೆ ಅಕ್ರಮಶೀಲ ಪ್ರಸವಪೂರ್ವ ಸ್ಕ್ರೀನಿಂಗ್ (NIPS) ಎಂಬ ಹೊಸ ಪರೀಕ್ಷೆಯು ಸಹ ಲಭ್ಯವಿದೆ. ಇದರಲ್ಲಿ ಕೇವಲ ತಾಯಿಯ ರಕ್ತದಿಂದ ಡೌನ್ ಸಿಂಡ್ರೋಮ್ ಪರೀಕ್ಷೆಯನ್ನು ಮಾಡಿ 98.99% ನಿಖರತೆಯಿಂದ ಫಲಿತಾಂಶವನ್ನು ಹೇಳಬಹುದು. ಇದನ್ನು 10 ವಾರಗಳ ನಂತರ ಯಾವಾಗಲಾದರೂ ಈ ಪರೀಕ್ಷೆಯನ್ನು ಮಾಡಿಸಬಹುದು. ಇದು ಸಹ ಕೇವಲ ಸ್ಕ್ರೀನಿಂಗ್ ಪರೀಕ್ಷೆಯಾಗಿದ್ದು, ಒಂದೊಮ್ಮೆ ಪಾಸಿಟಿವ್/ಹೆಚ್ಚಿನ ಅಪಾಯದ ಫಲಿತಾಂಶ ಬಂದರೆ, ಇVಖ ಅಥವಾ ಆಮ್ನಿಯೋ ಸೆಂಟನಿನ್ ಅನ್ನು ಮಾಡಬೇಕಾಗುತ್ತದೆ; ನೆಗೆಟಿವ್ ಅಥವಾ ಕಡಿಮೆ ಅಪಾಯ ಎಂದು ಬಂದರೆ ಗರ್ಭಾವಸ್ಥೆಯನ್ನು ಯಾವುದೇ ಭಯವಿಲ್ಲದೆ ಮುಂದುವರಿಸಬಹುದು.
ಗಮನದಲ್ಲಿ ಇಡಬೇಕಾದ ವಿಷಯಗಳು
-ಮೇಲಿನ ಯಾವುದೇ ಪರೀಕ್ಷೆಗಳನ್ನು ನಿಮ್ಮ ಡಾಕ್ಟರ್‌ನ ಸಲಹೆಯ ಅನಂತರವೇ ಮಾಡತಕ್ಕದ್ದು.
-ನಮ್ಮ ದೇಶದಲ್ಲಿ 20 ವಾರಗಳ ಮೇಲ್ಪಟ್ಟ ಗರ್ಭಾವಸ್ಥೆಯನ್ನು ಗರ್ಭಪಾತ ಮಾಡಿಸುವುದು ಶಿಕ್ಷಾರ್ಹ.ಡೌನ್ ಸಿಂಡ್ರೋಮ್ 800ರಲ್ಲಿ ಒಂದು ಗರ್ಭಾವಸ್ಥೆಯಲ್ಲಿ ಇರಬಹುದು. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಿಸಿ, ಆರೋಗ್ಯವಂತ ಮಗುವನ್ನು ಹೊಂದಲು ಎಲ್ಲರಿಗೂ ಅವಕಾಶವಿದೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡೋಣ.
– ಡಾ| ಶೃತಿ ಆರ್,
ಫಿಟಲ್ ಮೆಡಿಸಿನ್ ಕನ್ಸಲ್‌ಟೆಂಟ್
ಕೆ.ಎಂ.ಸಿ., ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.