“ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್’
Team Udayavani, Apr 15, 2018, 6:15 AM IST
ಮೀಯಪದವು: ಕುರಿಯ ವಿಠಲ ಶಾಸ್ತ್ರಿಗಳ ಅಳಿಯ ಮೀಯಪದವು ಸಮೀಪದ ಮದಂಗಲ್ಲು ಆನಂದ ಭಟ್ ಉದ್ಯೋಗ ನಿಮಿತ್ತ ಮಹಾರಾಷ್ಟ್ರದ ಪೂನಾ ನಗರಕ್ಕೆ ತೆರಳಿ ಮೂರು ದಶಕಗಳಿಗೂ ಅ ಧಿಕ ಸಮಯ ಸಂದು ಹೋಯಿತು. ಅಭಿಜಾತ ಯಕ್ಷಗಾನ ಕಲಾವಿದರಾಗಿರುವ ಆನಂದ ಭಟ್ ನಮ್ಮೂರಲ್ಲೇ ಯಕ್ಷಗಾನ ಕಲಿತು ವಿಠಲ ಶಾಸ್ತ್ರಿಗಳ ಆಶೀರ್ವಾದ ಮಾರ್ಗದರ್ಶನದಿಂದ ಯಕ್ಷಗಾನದ ಸರ್ವ ಅಂಗಗಳಲ್ಲೂ ಪ್ರಾವೀಣ್ಯವನ್ನು ಪಡೆದು ಭಗವತಿ ಮೇಳ ಹಾಗೂ ಹವ್ಯಾಸಿರಂಗದಲ್ಲಿ ಯಕ್ಷಗಾನ ರಂಗದಲ್ಲಿ ಅನುಭವಗಳನ್ನು ಹೊಂದಿಯೇ ಪೂನಾಕ್ಕೆ ತೆರಳಿದವರು. ಪೂನಾದಲ್ಲೂ ಕಳೆದ ಮೂರು ದಶಕಗಳಿಂದ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ ದುಡಿಯುತ್ತಾ ಹತ್ತಾರು ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡುತ್ತಾ ನೂರಾರು ಶಿಷ್ಯರನ್ನು ಸಿದ್ಧಗೊಳಿಸಿ ಯಕ್ಷಗಾನದ ಕಂಪನ್ನು ಮಹಾರಾಷ್ಟ್ರದಲ್ಲಿ ಹರಡುವಲ್ಲಿ ಅವರ ಪಾತ್ರ ಮಹತ್ತರವಾದದ್ದು.
ಅವರ ಸಾಧನೆ ಹಾಗೂ ಕಲಾ ಸೇವೆಯನ್ನು ಮನಗಂಡು ಸಾಹಿತ್ಯಬಳಗ ಮುಂಬಯಿ ತನ್ನ ರಜತ ಮಹೋತ್ಸವ ಸಂದರ್ಭ ಸಾಧಕರಿಗೆ ನಮನ ಮಾಲಿಕೆಯಲ್ಲಿ ಐದನೇ ಕುಸುಮವಾಗಿ “ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್’ ಎನ್ನುವ ಅವರ ಜೀವನ ಪರಿಚಯ ಹಾಗೂ ಕಲಾ ಸೇವೆಯನ್ನು ಪರಿಚಯಿಸುವ ಹೊತ್ತಗೆಯನ್ನು ಪ್ರಕಟಿಸಿ ಗೌರವ ಸಲ್ಲಿಸಿದೆ.
ಯಕ್ಷಗಾನ ರಂಗದ ಮಹಾ ಪೋಷಕರು ನೂರಾರು ಯಕ್ಷಗಾನ ಪ್ರಸಂಗಗಳ ಪ್ರಕಾಶಕರೂ, ಯಕ್ಷಗಾನ ಸಮ್ಮೇಳನಗಳ ರೂವಾರಿಗಳೂ ಆಗಿರುವ ಎಚ್.ಬಿ.ಎಲ್. ರಾವ್ ಪ್ರಧಾನ ಸಂಪಾದಕರಾಗಿ ಪೊಳಲಿ ಮಹೇಶ್ ಪ್ರಸಾದ್ ಹೆಗ್ಡೆ ಲೇಖಕರಾಗಿರುವ 68 ಪುಟಗಳ ಹೊತ್ತಗೆ ಆನಂದ ಭಟ್ಟರ ಕಲಾ ಸೇವೆ ಸಾಧನೆಗೆ ಕೈಗನ್ನಡಿ.
ಪುಸ್ತಕದ ನಲು°ಡಿಯಲ್ಲಿ ಲೇಖಕಿ ಇಂದಿರಾ ಸಾಲ್ಯಾನ್ ಪುಣೆಯವರು ಆನಂದ ಭಟ್ಟರ ಕಲಾ ಪ್ರೌಢಿಮೆ ವಿಠಲ ಶಾಸ್ತ್ರಿಗಳ ನೆನಪನ್ನು ಮಾಡಿಕೊಂಡು ಪುಣೆಯಲ್ಲಿ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ.
ಪ್ರಧಾನ ಸಂಪಾದಕ ಎಚ್.ಬಿ.ಎಲ್.ರಾವ್ “ಕಂಠ ತ್ರಾಣದವ ಭಾಗವತ ಸೊಂಟತ್ರಾಣದವ ವೇಷಧಾರಿ’ ಎನ್ನುವ ಶೀರ್ಷಿಕೆಯ ತನ್ನ ಬರಹದಲ್ಲಿ ಇಂದಿನ ಯಕ್ಷಗಾನದ ಸ್ಥಿತಿಗತಿಯನ್ನು ತಿಳಿಸುತ್ತಾ ಅದರಲ್ಲಿ ಆನಂದ ಭಟ್ಟರು ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಎಂದು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ತಮ್ಮ ಬರಹದಲ್ಲಿ ಉಲ್ಲೇಖೀಸುತ್ತಾ ಸಂಗೀತದಲ್ಲಿ ವಿದುಷಿಯಾಗಲು ಕೆಲವು ವರ್ಷಗಳ ಅಧ್ಯಯನ ಬೇಕು, ನಾಟ್ಯದಲ್ಲಿ ನರ್ತಕಿಯಾಗಿ ರಂಗಪ್ರವೇಶ ಮಾಡಲು ಹಲವು ವರ್ಷಗಳ ಪರಿಣತಿ ಬೇಕು. ಆರು ತಿಂಗಳಲ್ಲಿ ಒಬ್ಬ ಪ್ರಚಂಡ ಕಲಾವಿದನಾಗಲು ಯಕ್ಷಗಾನದಲ್ಲಿ ಮಾತ್ರ ಸಾಧ್ಯ.
ಸ್ತ್ರೀ ಪುರುಷರೆನ್ನುವ ಭೇದವಿಲ್ಲದೆ ಹಲವಾರು ಹೊಸ ಪ್ರತಿಭೆಗಳು ರಂಗಭೂಮಿಗೆ ಪಾದಾ ರ್ಪಣೆ ಮಾಡಿದ್ದಾರೆ, ಪರಂಪರೆಯ ಬಣ್ಣಗಾರಿಕೆಗೆ ತಿಲ ತರ್ಪಣೆ, ಬಾಯಿಪಾಠ ಮಾಡಿದ ಅರ್ಥಗಾರಿಕೆ, ಇತಿಮಿತಿಯಿಲ್ಲದೆ ಗಿರ್ಕಿ, ಇಂದಿನ ಪ್ರದರ್ಶನಗಳಲ್ಲಿ ಬರುವ ವೈವಿಧ್ಯಗಳು, ಸಂಗೀತ ಮತ್ತು ನಾಟ್ಯಕ್ಕೆ ಪರೀಕ್ಷೆಗಳಿವೆ. ಯಕ್ಷಗಾನ ಕಲಾವಿದನಿಗೆ ಯಾವ ಪರೀಕ್ಷೆಯೂ ಅನ್ವಯವಾಗುವುದಿಲ್ಲ. ಇದು ಯಕ್ಷಗಾನ ತವರೂರಲ್ಲಿ ನಡೆಯುವ ಘಟನೆಗಳು, ಪರಿಸ್ಥಿತಿ ಹೀಗಿದ್ದರೂ ಯಕ್ಷಗಾನದ ಪರಂಪರೆ ಯನ್ನು ಉಳಿಸಿಕೊಂಡು ಹಲವಾರು ಆಸಕ್ತರಿಗೆ ನಾಟ್ಯವನ್ನು ಕಲಿಸಿ, ಉತ್ತಮ ಪ್ರಯೋಗವನ್ನು ನೀಡುವ ಕಲಾವಿದ ಯಕ್ಷರಂಗದ ಮದಂಗಲ್ಲು ಆನಂದ ಭಟ್, ಯಕ್ಷರಂಗಕ್ಕೆ ಹೊಸ ಆಯಾಮವನ್ನು ಕೊಟ್ಟ ಕುರಿಯ ವಿಠಲ ಶಾಸ್ತ್ರಿಗಳ ಸೋದರಳಿಯ. ಯಕ್ಷಗಾನವು ಇವರ ಉಸಿರು, ಇವರ ವಿದ್ಯಾರ್ಥಿಗಳು ಗುಣಮಟ್ಟದ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಯಕ್ಷಗಾನದ ವ್ಯಾಪಾರೀ ಕರಣವನ್ನು ಮಾಡದೆ ಸ್ವಾರ್ಜಿತ ಗಣನೀಯ ಅಂಶವನ್ನು ಕಲೆಗಾಗಿ ವಿನಿ ಯೋಗಿಸುತ್ತಿದ್ದಾರೆ ಎಂದು ಮೆಚ್ಚುನುಡಿ ಗಳನ್ನಾಡಿದ್ದಾರೆ.
ಮಾತ್ರವಲ್ಲ ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಪಾಂಗಾಳ ವಿಶ್ವನಾಥ ಶೆಟ್ಟಿ ಬೆನ್ನುಡಿ ಬರೆದಿರುತ್ತಾರೆ.ಲೇಖಕ ಪೊಳಲಿ ಮಹೇಶ್ ಪ್ರಸಾದ್ ಹೆಗ್ಡೆ ತನ್ನ “ಮನದಾಳದಿಂದ’ ಬರಹಆಸಕ್ತರಿಗಾಗಿ ಪುಸ್ತಕ ಪರಿಚಯಿಸು ವುದಷ್ಟೇ ಬರಹದ ಉದ್ದೇಶ. ಪುಸ್ತಕ ಸಂಪೂರ್ಣ ಪಡೆದು ವಾಚಿಸಿದಾಗಷ್ಟೇ ಗಡಿನಾಡ ಪ್ರತಿಭೆ ಆನಂದ ಭಟ್ಟರ ಸಮಗ್ರ ಮಾಹಿತಿ ಅನಾವರಣಗೊಳ್ಳಬಹುದು.
– ಯೋಗೀಶ ರಾವ್ ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.