ಪಾಕಿಸ್ತಾನ ಮಾಧ್ಯಮ ಲೋಕದಲ್ಲಿ ಇತಿಹಾಸ: ತೃತೀಯಲಿಂಗಿ ಸುದ್ದಿ ವಾಚಕಿ
Team Udayavani, Apr 15, 2018, 7:00 AM IST
ಪಾಕಿಸ್ತಾನ ಮಾಧ್ಯಮ ಲೋಕದಲ್ಲಿ ಇತಿಹಾಸ: ತೃತೀಯಲಿಂಗಿ ಸುದ್ದಿವಾಚಕಿ
ಇಸ್ಲಾಮಾಬಾದ್: ಸಾಮಾಜಿಕವಾಗಿ ಹಿನ್ನ°ಡೆಯನ್ನೇ ಕಾಯ್ದುಕೊಂಡಿರುವ ದೇಶವಾದ ಪಾಕಿಸ್ತಾನದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇದೇ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರು ಇಲ್ಲಿ ಸುದ್ದಿ ವಾಚಕಿಯಾಗಿ ಕಾರ್ಯ ಆರಂಭಿಸಿದ್ದಾರೆ.
ಮಾರ್ವಿಯಾ ಮಲಿಕ್(21) ಈ ಸಾಧನೆ ಮಾಡಿರುವ ಪಾಕಿಸ್ತಾನದ ಪ್ರಥಮ ತೃತೀಯ ಲಿಂಗಿ. ಲಾಹೋರ್‌ನ
ಕೊಹೆನೂರ್ ನ್ಯೂಸ್ ಎಂಬ ವಾಹಿನಿಯಲ್ಲಿ ಇವರು ಸುದ್ದಿ ನಿರೂಪಕಿ. ಮಾರ್ವಿಯಾ ಹೇಳುವಂತೆ ಅವರು ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿ ಕೊಂಡಿದ್ದಾರೆ.
ಮಾರ್ವಿಯಾ ಕಳೆದ ತಿಂಗಳು ವಾಹಿನಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ತೃತೀಯಲಿಂಗಿಯೊಬ್ಬರು ವಾರ್ತಾ ವಾಚಕಿಯಾಗುವ ಕುರಿತು ಪರ ವಿರೋಧ ಚರ್ಚೆಗಳು ನಡೆದಿದ್ದವು. ಕಳೆದ ಒಂದು ತಿಂಗಳಿಂದ ಮಾರ್ವಿಯಾ ಸತತವಾಗಿ ಟೀವಿಯಲ್ಲಿ ಸುದ್ದಿ ಓದುತ್ತಿದ್ದಾರೆ. ಜೊತೆಗೆ ತಮ್ಮ ಸಾಧನೆಯಿಂದ ತಾವೂ ಸುದ್ದಿಯಾಗುತ್ತಿದ್ದಾರೆ.
ಇವರು ತೃತೀಯ ಲಿಂಗಿ ಎಂದು ತಿಳಿದ ಇವರು ಪೋಷಕರು 16ನೇ ವಯಸ್ಸಲ್ಲೇ ಇವರನ್ನು ಮನೆಯಿಂದ ಹೊರಹಾಕಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಅವರು, ಮೇಕಪ್ ಕಲಾವಿದೆಯಾಗಿ ಕೆಲಸ ಮಾಡಿ ಹಣ ಸಂಪಾದಿಸಿ, ಪತ್ರಿಕೋದ್ಯಮದ ಪದವಿ ಪಡೆದರು. ತೃತೀಯಲಿಂಗಿ ಸಮುದಾಯ ಇವತ್ತಿಗೂ ಕತ್ತಲೆಯಲ್ಲಿಯೇ ಇದೆ. ಶಿಕ್ಷಣ, ಉದ್ಯೋಗದಲ್ಲಿ ನಾವು ಹಿಂದೆಯೇ ಉಳಿದಿದ್ದೇವೆ. ರಾಜಕೀಯವಾಗಿಯೂ ನಾವು ಶಕ್ತರಲ್ಲ. ನಮ್ಮ ಸಮುದಾಯವನ್ನು ಮುಂದೆ ತರುವುದೇ ನನ್ನ ಧ್ಯೇಯ ಎಂದಿದ್ದಾರೆ ಮಾರ್ವಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.