ಮಹಾಲಿಂಗೇಶ್ವರ ಜಾತ್ರೆಯಲ್ಲಿ ಇಂದು ವಿಷುಕಣಿ ಸಂಭ್ರಮ
Team Udayavani, Apr 15, 2018, 11:02 AM IST
ಸೌರಮಾನ ಯುಗಾದಿ ತುಳುನಾಡಿನಲ್ಲಿ ಹೊಸ ವರ್ಷವನ್ನು ಆಚರಿಸುವ ದಿನ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಉತ್ಸವದೊಂದಿಗೆ ವಿಷು ಕಣಿ ಸಂಭ್ರಮವೂ ಸೇರಿಕೊಂಡು ಎ. 15ರಂದು ಶಿಷ್ಟ ಸಂಪ್ರದಾಯದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಶನಿವಾರ ವಿಷು ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತರು ಸೇರಿ ಕಾಲ ಕಾಲಕ್ಕೆ ಮಳೆ – ಬೆಳೆ ಸಮೃದ್ಧಿಯಾಗಿ, ಸುಭಿಕ್ಷೆ ಉಂಟಾಗಲಿ ಎಂದು ದೇವಸ್ಥಾನದ ತಂತ್ರಿಗಳ ಮೂಲಕ ದೇವರ ಸತ್ಯ, ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣ ಸಹಿತ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.
ವಿಷು (ಬಿಸು)ವಿನ ದಿನ (ತುಳು ಪಂಚಾಂಗದಲ್ಲಿ ತಿಂಗಳಡಿ ದಿನ) ಪ್ರಾತಃ ಕಾಲದಲ್ಲಿ ಶ್ರೀ ದೇವರ ಗರ್ಭಗುಡಿಯ ಬಾಗಿಲು ತೆರೆದು ದರ್ಪಣ ಬಿಂಬ ದರ್ಶನವಾಗುತ್ತದೆ. ದೇವಾಲಯದ ಒಳಾಂಗಣದ ಸಾಂಪ್ರದಾಯಿಕ ಚಪ್ಪರದ ಕಂಬಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ದೇವರು ಬಂದು ನಿಲ್ಲುವ ಕೊಡಿಮರದ ಬಲ ಭಾಗದಲ್ಲಿ ಚಪ್ಪರಕ್ಕೆ ಮೇಲ್ಕಾಪು ಹಾಸಲಾಗುತ್ತದೆ.
ವಿಶೇಷ ಊಟ
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಷು ಹಬ್ಬದ ಪ್ರಯುಕ್ತ ವಿಶೇಷ ಊಟ ಇರುತ್ತದೆ. ಮನೆಗಳಲ್ಲಿ ಸೌರಯುಗಾದಿ ಆಚರಣೆ ಇದ್ದರೂ ಒಬ್ಬ ಸದಸ್ಯನಾದರೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ವಿಷು ಊಟದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವುದು ಅಂದಿನ ವಿಶೇಷ.
ಇಂದಿನ ಪೇಟೆ ಸವಾರಿ
ಎ. 15ರಂದು ಬೆಳಗ್ಗೆ ಸೌರಯುಗಾದಿ ವಿಷು ಆಚರಣೆ, ಅನಂತರ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ ಬಲಿ, ಹೊರಾಂಗಣದಲ್ಲಿ ಚಂದ್ರಮಂಡಲ ಉತ್ಸವ, ಬಳಿಕ ಬನ್ನೂರು, ಅಶೋಕ ನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ತನಕ ಪೇಟೆ ಸವಾರಿ ತೆರಳಿ ದೇವರು ದೇವಾಲಯಕ್ಕೆ ಮರಳಲಿದೆ.
ವಿಶೇಷ ಉತ್ಸವ
ಸೌರ ಯುಗಾದಿ ವಿಷುಕಣಿ ಅಂಗವಾಗಿ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ವಿಶೇಷ ಉತ್ಸವ ಬಲಿ, ವಸಂತ ಕಟ್ಟೆಪೂಜೆ ನಡೆಯುತ್ತದೆ. ಸಂಜೆ ತುಳು ಪಂಚಾಂಗ ಸಾಂಪ್ರದಾಯದಂತೆ ದೇವಾಲಯದ ಹೊರಾಂಗಣದಲ್ಲಿ ‘ಬಯ್ಯದ ಬಲಿ’ (ಸಂಜೆಯ ಉತ್ಸವ) ನಡೆದು ಬಳಿಕ ಶ್ರೀ ದೇವರ ಸಾಂಪ್ರದಾಯಿಕ ಚಂದ್ರ ಮಂಡಲ ಉತ್ಸವ (ಬಂಡಿ ಉತ್ಸವ) ನಡೆಯುತ್ತದೆ. ಇಲ್ಲಿ ಶತಮಾನಗಳ ಹಿಂದೆ ಬಂಡಿಯ ಪೀಠದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಹೊರಾಂಗಣದಲ್ಲಿ ಎಳೆಯಲಾಗುತ್ತಿತ್ತು.
ಚಂದ್ರಮಂಡಲ ರಥವನ್ನು ನಿರ್ಮಿಸಿದ ಬಳಿಕ ಚಂದ್ರಮಂಡಲ ರಥ ಉತ್ಸವ ನಡೆಯುತ್ತದೆ. ಪುತ್ತೂರು ಸೀಮೆಯ ಜನರು ಇದನ್ನು ಬಂಡಿ ಉತ್ಸವ ಎಂದೂ ಕರೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.