ನೀರಿನ ಬರಕ್ಕಿಲ್ಲಿ ಬೇಸಿಗೆಯೇ ಬೇಕೆಂದಿಲ್ಲ!


Team Udayavani, Apr 15, 2018, 12:22 PM IST

neerina.jpg

ಬೆಂಗಳೂರು: ಇಲ್ಲಿ ಉಚಿತ ಅಕ್ಕಿ (ಅನ್ನ ಭಾಗ್ಯದಡಿ) ದೊರೆಯುತ್ತದೆ. ಆದರೆ, ಉಚಿತವಾಗಿ ನೀರು ಸಿಗುವುದಿಲ್ಲ. ನಿತ್ಯ ನೀವು ದುಡ್ಡು ಕೊಟ್ಟು ಹಾಲು, ಪೇಪರ್‌ ತರುವಂತೆಯೇ ಇಲ್ಲಿ ಜನ, ಕೈಯಲ್ಲಿ ಹಣ ಇಟ್ಟು ನೀರು ತುಂಬಿಕೊಂಡು ಬರುತ್ತಾರೆ. ಹಾಗಾಗಿ, ಅನ್ನಕ್ಕಿಂತ ಇಲ್ಲಿ ನೀರು ದುಬಾರಿ!

ಜನ ಬೆಳಗಾಗುತ್ತಿದ್ದಂತೆ ಗೇಟಿನಲ್ಲಿರುವ ವಾಹನಗಳಿಗೆ ನೀರಿನ ಕ್ಯಾನ್‌ ಅಥವಾ ಬಿಂದಿಗೆಗಳನ್ನು ನೇತುಹಾಕುತ್ತಾರೆ. ಚಿಲ್ಲರೆ ಜೇಬಿಗಿಳಿಸಿಕೊಂಡು, ಊರ ಹೊರಗಿರುವ ಖಾಸಗಿ ಕುಡಿಯುವ ನೀರಿನ ಘಟಕದತ್ತ ಮುಖಮಾಡುತ್ತಾರೆ. ಅಲ್ಲಿ ಹದಿನೈದು ರೂಪಾಯಿ ಕೈಗಿಟ್ಟು, ನೀರು ತುಂಬಿಕೊಂಡು ವಾಪಸ್ಸಾಗುತ್ತಾರೆ.

ಇದು ಪಾಲಿಕೆಯ ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿ ದುಃಸ್ಥಿತಿ. ಊರ ಮುಂದೆ ಬೃಹದಾಕಾರದ ಟ್ಯಾಂಕ್‌ ಇದೆ. ಹಾದಿ-ಬೀದಿಗಳಲ್ಲಿ ಕಾವೇರಿ ಪೈಪ್‌ಲೈನ್‌ ಹಾದುಹೋಗಿದೆ. ಅಲ್ಲಲ್ಲಿ ಕೊಳವೆಬಾವಿಗಳೂ ಇವೆ. ಕೇರಿಯಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕವೂ ಇದೆ. ಆದರೂ ನೀರಿಗಾಗಿ ನಿತ್ಯ ಬೆಲೆ ತೆರಬೇಕು. ಈ ಸ್ಥಿತಿಗೆ ಚಳಿಗಾಲ ಅಥವಾ ಬೇಸಿಗೆ ಕಾಲ ಎಂಬ ಭೇದವಿಲ್ಲ.

ಎಲ್ಲ ಸೀಜನ್‌ಗಳಲ್ಲೂ ಇದೇ ಗೋಳು. ಆದ್ದರಿಂದ “ನಮ್ಮ ಪಾಲಿಗೆ ಪಾಲಿಕೆ ಅಥವಾ ಜಲಮಂಡಳಿ ಇದ್ದೂ ಇಲ್ಲದಂತೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಾರೆ. “ಶೆಟ್ಟಿಹಳ್ಳಿಯ ಜನ ಕುಡಿಯುವ ನೀರಿಗೆ ಬಿಬಿಎಂಪಿ ಅಥವಾ ಜಲಮಂಡಳಿಯನ್ನು ಅವಲಂಬಿಸಿಯೇ ಇಲ್ಲ. ಖಾಸಗಿ ಪಾನೀಯ ಉದ್ಯಮಿಯೊಬ್ಬರು ನೀರಿನ ಘಟಕ ತೆರೆದಿದ್ದಾರೆ. ಅಲ್ಲಿ ಕ್ಯಾನ್‌ವೊಂದಕ್ಕೆ 15 ರೂ. ನಿಗದಿಪಡಿಸಿದ್ದಾರೆ.

ಅಲ್ಲಿಂದಲೇ ಕುಡಿಯಲು ನೀರು ಹಿಡಿದು ತರುತ್ತೇವೆ. ಅದೇ ನೀರನ್ನು ಎರಡು ದಿನ ಮಾಡುತ್ತೇವೆ. ಆದರೆ, ಹಬ್ಬ-ಹರಿದಿನಗಳು, ಸಂಬಂಧಿಕರು ಮನೆಗೆ ಬಂದರೆ ಈ ನೀರಿನ ಹೊರೆ ಹೆಚ್ಚುತ್ತದೆ,’ ಎಂದು ಜಗದೀಶ ಲೇಔಟ್‌ ನಿವಾಸಿ ಸಂತೋಷ್‌ ಅಲವತ್ತುಕೊಳ್ಳುತ್ತಾರೆ. “ಬಳಸುವ ನೀರಿಗೆ ಸಮಸ್ಯೆ ಇಲ್ಲ.

ಆದರೆ, ಕುಡಿಯುವ ನೀರಿನದ್ದೇ ಗೋಳು. ಮೂರು ತಿಂಗಳ ಹಿಂದೆ ಕಾವೇರಿ ಪೈಪ್‌ಲೈನ್‌ ಹಾಕಿದ್ದಾರೆ. ಇನ್ನೂ ನೀರು ಹರಿದಿಲ್ಲ. ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕ ದೂರದಲ್ಲಿದೆ. ಹಾಗಾಗಿ, ಪಕ್ಕದಲ್ಲೇ ಇರುವ ಖಾಸಗಿ ಕುಡಿಯುವ ನೀರಿನ ಘಟಕಕ್ಕೆ ಹೋಗಿ ನೀರು ತರುತ್ತೇವೆ’ ಎಂದು ಚಿಕ್ಕಸಂದ್ರದ ರವಿ ತಿಳಿಸುತ್ತಾರೆ.

ಟ್ಯಾಂಕ್‌ ಸ್ವತ್ಛಗೊಳಿಸಿ ದಶಕವಾಯ್ತು!: ಇನ್ನು ಮರಿರಾಮು ಅವರ ಮನೆ ಮುಂದೆಯೇ ದೊಡ್ಡ ಟ್ಯಾಂಕ್‌ ಇದೆ. ಆದರೆ, ಅದನ್ನು ಸ್ವತ್ಛಗೊಳಿಸಿ ದಶಕ ಕಳೆದಿದೆ! ಕೊಳವೆಬಾವಿ ನೀರು ಈ ಟ್ಯಾಂಕ್‌ಗೆ ತುಂಬಲಾಗುತ್ತದೆ. ಅಲ್ಲಿಂದ ಮನೆಗಳಿಗೆ ಪೂರೈಸಲಾಗುತ್ತದೆ. ಹೀಗೆ ಪೂರೈಕೆಯಾಗುವ ನೀರಿನಲ್ಲಿ ಎಷ್ಟೋ ಸಲ ಹುಳುಗಳು ಬಂದ ಉದಾಹರಣೆಗಳೂ ಇವೆ. ಆದರೆ, ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಕ್ಕಿಂತ ಖಾಸಗಿ ಘಟಕದಲ್ಲಿ ನೀರು ಹೆಚ್ಚು ಶುಚಿಯಾಗಿರುತ್ತವೆ. ಹಾಗಾಗಿ, ತುಸು ದುಬಾರಿ ಎನಿಸಿದರೂ ಅಲ್ಲಿಂದಲೇ ತರುತ್ತೇವೆ ಎಂದು ಮರಿರಾಮು ಅಸಹಾಯಕತೆ ತೋಡಿಕೊಂಡರು. “ಶೆಟ್ಟಿಹಳ್ಳಿಯ ಬೈರವೇಶ್ವರ ನಗರ, ಅಂಜನಾದ್ರಿ ನಗರ, ಎವೈಆರ್‌ ಲೇಔಟ್‌ ಸೇರಿದಂತೆ ಸುಮಾರು ನಾಲ್ಕು ಸಾವಿರ ಮನೆಗಳು ಇವೆ. ನೀರಿನ ಸೌಲಭ್ಯ ಮಾತ್ರ ಸಮರ್ಪಕವಾಗಿಲ್ಲ.

ಅಂತರ್ಜಲ ಸಾಕಷ್ಟು ಕುಸಿದಿದ್ದು, ಬೇಸಿಗೆಯಲ್ಲಿ ಇದು ಮತ್ತಷ್ಟು ಉಲ್ಬಣಿಸಿದೆ. ಸುತ್ತಲಿನ ಶಾಲೆಗಳ ಸಾವಿರಾರು ಮಕ್ಕಳಿಗೆ ನಾನೇ ಉಚಿತವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದೇನೆ. ಸಾಮಾನ್ಯ ಜನರಿಗೆ ಮಾತ್ರ ಕ್ಯಾನ್‌ಗೆ 15 ರೂ. ನಿಗದಿಪಡಿಸಿದ್ದೇನೆ,’ ಎಂದು ಸಾಯಿ ಅಕ್ವಾ ಬಿವರೇಜಸ್‌ ಮಾಲಿಕ ಸುರೇಶ್‌ ಮಾಹಿತಿ ನೀಡುತ್ತಾರೆ. 

ಎಂಟು ವಾರ್ಡ್‌ಗಳಲ್ಲಿ ಏಳು ಕಡೆ ಯಾವುದೇ ಸಮಸ್ಯೆ ಇಲ್ಲ. ಒಂದು ಕಡೆ ಮಾತ್ರ ತುಸು ತೊಂದರೆ ಇದೆ. ಅದೂ ನಾಲ್ಕು ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲೆಲ್ಲಾ ಕೊಳವೆಬಾವಿಗಳನ್ನು ಕೊರೆದು, ನೀರು ಪೂರೈಸಲಾಗುತ್ತಿದೆ ಎಂದು ಬಿಬಿಎಂಪಿ ದಾಸರಹಳ್ಳಿ ವಲಯದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ನೀರು ಪೂರೈಕೆ; ತಾರತಮ್ಯ ಯಾಕೆ?: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ ನಾಲ್ಕು ಹಳ್ಳಿಗಳು ದಾಸರಹಳ್ಳಿ ವಲಯಕ್ಕೆ ಬರುತ್ತವೆ. ಹೀಗೆ ಸೇರ್ಪಡೆಗೊಂಡು ಹತ್ತು ವರ್ಷವಾದರೂ ಈ ಗ್ರಾಮಗಳಿಗೆ ಕಾವೇರಿ ನೀರು ಕನಸಾಗಿಯೇ ಉಳಿದಿದೆ. ಉದ್ದೇಶಿತ ವಲಯದಲ್ಲಿ 8 ವಾರ್ಡ್‌ಗಳು ಬರುತ್ತವೆ. ಏಳು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಶೆಟ್ಟಿಹಳ್ಳಿ, ಚಿಕ್ಕಸಂದ್ರ, ಅಬ್ಬಿಗೆರೆ, ಮ್ಯಾಗರಹಳ್ಳಿಗಳಲ್ಲಿ ಮಾತ್ರ ನೀರಿಗೆ ಹಾಹಾಕಾರ. ಈ ತಾರತಮ್ಯ ಯಾಕೆ ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಾರೆ.

* ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

Hospitalised: ಚಂದ್ರಬಾಬು ನಾಯ್ಡು ಸಹೋದರನ ಆರೋಗ್ಯ ಸ್ಥಿತಿ ಗಂಭೀರ… ಆಸ್ಪತ್ರೆಗೆ ದಾಖಲು

Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

Hospitalised: ಚಂದ್ರಬಾಬು ನಾಯ್ಡು ಸಹೋದರನ ಆರೋಗ್ಯ ಸ್ಥಿತಿ ಗಂಭೀರ… ಆಸ್ಪತ್ರೆಗೆ ದಾಖಲು

Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.