ಮಾತಿನ ಮತ, ಸಂದರ್ಶನ:
Team Udayavani, Apr 15, 2018, 2:15 PM IST
ಹಣಬಲದೆದುರು ಸಿದ್ಧಾಂತಕ್ಕೆ ಸೋಲು
ಕಳೆದ ಬಾರಿ ಸೋಲಿಗೆ ಕಾರಣ ?
ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಣಬಲದ ಎದುರು ಜೆಡಿಎಸ್‌ಗೆ ಸ್ಪರ್ಧೆ ಕಠಿನವಾಯ್ತು. ಓಟ್ ಬ್ಯಾಂಕ್ ರಾಜಕೀಯ ನಮ್ಮಲ್ಲಿಲ್ಲ. ಜೆಡಿಎಸ್ ಸಿದ್ಧಾಂತದಡಿ ಚುನಾವಣೆ ಎದುರಿಸಿದ್ದು, ಹಣ ಬಲದ ಎದುರು ನಮ್ಮ ಸಿದ್ಧಾಂತಕ್ಕೆ ಸೋಲಾಗಿದೆ.
ಈ ಬಾರಿ ಸ್ಪರ್ಧಾ ಆಕಾಂಕ್ಷಿಯೇ ?
ಈ ಬಾರಿ ನಾನು ಸ್ಪರ್ಧಾಕಾಂಕ್ಷಿಯಲ್ಲ, ಕ್ಷೇತ್ರದಿಂದ ಈಗಾಗಲೇ ಮುಖಂಡರಾದ ಗಂಗಾಧರ ಉಳ್ಳಾಲ, ಮೋಹನದಾಸ್ ಶೆಟ್ಟಿ, ಮಾಜಿ ಮೇಯರ್ ಅಶ್ರಫ್ ಅಭ್ಯರ್ಥಿಗಳಾಗಲು ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಸಿದ್ಧಾಂತದ ಪ್ರಕಾರ ಯಾರಿಗೆ ಅವಕಾಶ ನೀಡಿದರೂ ಪಕ್ಷದ
ಕಾರ್ಯಕರ್ತನಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಾನು ಮನಃಪೂರ್ವಕ ತೊಡಗಿಕೊಳ್ಳುತ್ತೇನೆ.
ಮತ ಗಳಿಕೆಯಲ್ಲಿ ಜೆಡಿಎಸ್ ಹಿಂದೆ ಬೀಳಲು ಕಾರಣ
ನಾಯಕತ್ವ ಕೊರತೆ, ಜಿಲ್ಲಾ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳ ಕೊರತೆಯಿಂದಾಗಿ ಪಕ್ಷವು ಸಂಘಟನೆಯಲ್ಲಿ ಹಿಂದೆ ಬಿದ್ದಿದೆ. ಪಕ್ಷ ಸಂಘಟನೆಯಾಗದಿದ್ದರೆ ಕಾರ್ಯಕರ್ತರಲ್ಲಿ ಉತ್ಸಾಹವಿರುವುದಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪಕ್ಷ ಜನರನ್ನು ಮುಟ್ಟುವಲ್ಲಿ ವಿಫಲವಾಗಿದ್ದು,
ಸಾಂಪ್ರದಾಯಿಕ ಮತಗಳು ಮಾತ್ರ ಪಕ್ಷದ ಅಭ್ಯರ್ಥಿಗೆ ಸಿಕ್ಕಿವೆ.
ಈ ಬಾರಿ ಇಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹೇಗಿದೆ ?
ಈ ಬಾರಿ ಸಂಘಟನೆ ಉತ್ತಮವಾಗಿದೆ. ಹಿಂದಿನ ಕಾರ್ಯಕರ್ತರೊಂದಿಗೆ ಹೊಸ ಮುಖಗಳು ಪಕ್ಷದತ್ತ ಬರುತ್ತಿದ್ದಾರೆ. ಬೇರೆ ಪಕ್ಷಗಳಿಂದ ಜೆಡಿಎಸ್ ಕಡೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಕ್ಷೇತ್ರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜೆಡಿಎಸ್‌ನತ್ತ ಜನರ ಒಲವು ಹೆಚ್ಚಾಗುತ್ತಿದೆ.
ಈ ಬಾರಿಯ ಪ್ರಚಾರ ತಂತ್ರದ ಬಗ್ಗೆ …
ಕ್ಷೇತ್ರದಲ್ಲಿ ನಾಯಕರು ಮತ್ತು ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಆಡಳಿತ ವೈಫಲ್ಯ, ರಾಜ್ಯದಲ್ಲಿ ಜೆಡಿಎಸ್ ಸರಕಾರದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಎಸ್.ಆರ್.
ಬೊಮ್ಮಾಯಿ, ಜೆ.ಎಸ್. ಪಟೇಲ್, ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ನಡೆದ ಜನೋಪಯೋಗಿ ಕೆಲಸಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ನಡೆಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದ್ದು, ಇದರಿಂದ ಕ್ಷೇತ್ರಕ್ಕೆ ಲಾಭವಾಗುವ ವಿಚಾರವನ್ನು ಮತದಾರರಿಗೆ ಮನವರಿಕೆ ಮಾಡಲಾಗುತ್ತಿದೆ.
ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.