ಬಾನಂಗಳದಿಂದ ಮತದಾನ ಜಾಗೃತಿ
Team Udayavani, Apr 15, 2018, 5:45 PM IST
ದಾವಣಗೆರೆ: ಮೇ. 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಾನದ ನಿಟ್ಟಿನಲ್ಲಿ ಚುನಾವಣಾ ಆಯೋಗ ವಿವಿಧ ಕಸರತ್ತು ಮಾಡುತ್ತಿದ್ದು, ಶನಿವಾರ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಿಂದ ಪ್ಯಾರಾಗ್ಲೆಡಿಂಗ್ ಮೂಲಕ ಬಾನಂಗಳದಿಂದ ಮತದಾನ ಜಾಗೃತಿ ಕರಪತ್ರ ಹಾರಿಬಿಟ್ಟು ಜಾಗೃತಿ ಮೂಡಿಸಲಾಯಿತು.
ಪ್ಯಾರಾಗ್ಲೆ$çಡ್ ಹಾರಾಟಗಾರ ನಿತ್ಯಾನಂದ ಬೆನ್ನಿಗೆ ಪ್ಯಾರಾ ಗ್ಲೆ$çಡಿಂಗ್ ಕಟ್ಟಿಕೊಂಡು ಒಮ್ಮೆಲೇ ಬಾನಂಗಳಕ್ಕೆ ಹಾರಿದರು. ಅಲ್ಲಿಂದ ಜಾಗೃತಿ ಕರಪತ್ರ ಹಾರಿಬಿಟ್ಟರು. ಹೀಗೆ ಬಿಡಲಾದ ಕರಪತ್ರಗಳು ಬೇರೆ ಬೇರೆ ಜಾಗಕ್ಕೆ ತಲುಪಿ, ಮತದಾನದ ಮಹತ್ವ, ಜಾಗೃತಿ ಮೂಡಿಸುವ ಸಂದೇಶ ಸಾರಿದವು.
ನನ್ನ ಮತ ಮಾರಾಟಕ್ಕಿಲ್ಲ. ಇಂದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಿ, ಮತದಾರರಿಗೆ ಹಣ, ಮದ್ಯ ಅಥವಾ ಯಾವುದೇ ಆಮಿಷ ಒಡ್ಡುವುದು ಕ್ರಿಮಿನಲ್ ಅಪರಾಧ ಎಂಬ ಬರಹ ಹೊಂದಿದ್ದ ಪತ್ರಗಳನ್ನು ಆಕಾಶದಿಂದ ತೂರಿ ಬಿಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಅಶ್ವತಿ, ಸ್ವೀಪ್ ಕಾರ್ಯಕ್ರಮದಡಿ ಈಗಾಗಲೇ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗ ಪ್ಯಾರಾಗ್ಲೆಡಿಂಗ್ ಶೋ ನಗರಾದ್ಯಂತ ಜಾಗೃತಿ ಮೂಡಿಸಲಿದೆ. ನಾಳೆ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷಚೇತನರ ಮತದಾನಕ್ಕೆ ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಪ್ಯಾರಾಗ್ಲೆಡಿಂಗ್ ತಂಡದ ರಾಹುಲ್ ಮಾತನಾಡಿ, ಈಗಾಗಲೇ ನಮ್ಮ ತಂಡ ಚಿತ್ರದುರ್ಗ, ಉಡುಪಿ, ಧಾರಾವಾಡ ಮುಂತಾದೆಡೆ ಮತದಾನದ ಕುರಿತು ಜಾಗೃತಿ ಮೂಡಿಸಿದೆ. ಭಾನುವಾರ ದಾವಣಗೆರೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು.
ಪ್ಯಾರಾಗ್ಲೆಡಿಂಗ್ ನೆಲಮಟ್ಟದಿಂದ 50ರಿಂದ 60 ಮೀಟರ್ ಮೇಲೆ ಹಾರಾಡುವುದರಿಂದ ಜನ ಕುತೂಹಲದಿಂದ ವೀಕ್ಷಿಸುತ್ತಾರೆ. ಇದರಿಂದ ಮತದಾನ ಜಾಗೃತಿಗೆ ಸಹಕಾರಿಯಾಗಲಿದೆ ಎಂದರು. ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಇತರೆ ಇಲಾಖೆ
ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.