ವಿಧಾನಸಭಾ ಚುನಾವಣೆ : ‘ಕೈ’ ಪಟ್ಟಿ ಬಿಡುಗಡೆ
Team Udayavani, Apr 15, 2018, 8:34 PM IST
ನವದೆಹಲಿ: ಕರ್ನಾಟಕ ವಿಧಾನಸಭೆಗೆ ಇದೇ ಬರುವ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ ಪಕ್ಷದ ಹುರಿಯಾಳುಗಳ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಅಂತಿಮಗೊಳಿಸಿದ್ದು ಆ ಪಟ್ಟಿ ಇದೀಗ ಹೊರಬಿದ್ದಿದೆ. ಒಟ್ಟು 224 ಕ್ಷೇತ್ರಗಳಲ್ಲಿ ‘ಕೈ’ ಹೈಕಮಾಂಡ್ ಇದೀಗ 218 ಕ್ಷೇತ್ರಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು 5 ಮತಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, ಇಲ್ಲಿ ಇತ್ತೀಚೆಗೆ ನಿಧನ ಹೊಂದಿದ್ದ ರೈತ ಮುಖಂಡ ಕೆ.ಸಿ. ಪುಟ್ಟಣ್ಣಯ್ಯ ಅವರ ಪುತ್ರನ ಎದುರು ಕಾಂಗ್ರೆಸ್ ಅಭ್ಯರ್ಥಿತನವಿರುವುದಿಲ್ಲ. ಹಾಗಾಗಿ ಇನ್ನು 5 ಮತಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿಯಾದಂತಾಗಿದೆ.
ಈ ಹಿಂದೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸುಳಿವನ್ನು ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿರಿಯ ನಾಯಕರ ವಿರೋಧಕ್ಕೆ ಮಣಿದಂತೆ ಕಂಡುಬಂದಿದ್ದು, ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರವೇ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಬಳ್ಳಾರಿ ಜಿಲ್ಲೆಯಿಂದ ಅನಿಲ್ ಲಾಡ್ ಅವರಿಗೆ ಟಿಕೆಟ್ ಸಿಕ್ಕಿದೆ. ಶಾಂತಿನಗರ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನಷ್ಟೇ ಘೊಷಿಸಬೇಕಾಗಿದ್ದು, ಪುತ್ರ ನಲಪಾಡ್ ಪ್ರಕರಣದಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದ ಹಾಲಿ ಶಾಸಕ ಹ್ಯಾರಿಸ್ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ:
ಮಂಗಳೂರು ನಗರ ಉತ್ತರ : ಬಿ.ಎ. ಮೊಯಿದ್ದೀನ್ ಬಾವಾ
ಮಂಗಳೂರು ನಗರ ದಕ್ಷಿಣ : ಜಾನ್ ರಿಚರ್ಡ್ ಲೋಬೋ
ಮಂಗಳೂರು : ಯು.ಟಿ. ಅಬ್ದುಲ್ ಖಾದರ್
ಬೆಳ್ತಂಗಡಿ : ವಸಂತ ಬಂಗೇರ
ಬಂಟ್ವಾಳ : ರಮಾನಾಥ ರೈ
ಮೂಡಬಿದಿರೆ : ಕೆ. ಅಭಯಚಂದ್ರ ಜೈನ್
ಪುತ್ತೂರು : ಶಕುಂತಳಾ ಶೆಟ್ಟಿ
ಸುಳ್ಯಮೀಸಲು : ಡಾ. ಬಿ. ರಘು
ಉಡುಪಿ ಜಿಲ್ಲೆ:
ಉಡುಪಿ : ಪ್ರಮೋದ್ ಮಧ್ವರಾಜ್
ಕಾಪು : ವಿನಯ ಕುಮಾರ್ ಸೊರಕೆ
ಕಾರ್ಕಳ : ಗೋಪಾಲ ಭಂಡಾರಿ ಹೆಚ್.
ಕುಂದಾಪುರ : ರಾಕೇಶ್ ಮಲ್ಲಿ
ಬೈಂದೂರು : ಗೋಪಾಲ ಪೂಜಾರಿ ಕೆ.
ಹಳಿಯಾಳ : ಆರ್.ವಿ. ದೇಶಪಾಂಡೆ
ಕಾರವಾರ : ಸತೀಶ್ ಸೈಲ್
ಕುಮಟಾ : ಶಾರದಾ ಮೋಹನ್ ಶೆಟ್ಟಿ
ಭಟ್ಕಳ : ಮಂಕಾಳ ಎಸ್. ವೈದ್ಯ
ಶಿರಸಿ : ನಿವೇದಿತಾ ಆಳ್ವ
ಬೆಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿರುವ ಪ್ರಮುಖರು:
ಸರ್ವಜ್ಞನಗರ : ಕೆ.ಜೆ. ಜಾರ್ಜ್
ಗಾಂಧಿನಗರ : ದಿನೇಶ್ ಗುಂಡೂರಾವ್
ಚಾಮರಾಜಪೇಟೆ : ಜಮೀರ್ ಅಹಮ್ಮದ್ ಖಾನ್
ಶಿವಾಜಿನಗರ : ರೋಷನ್ ಬೇಗ್ ಆರ್.
ಕೆ.ಆರ್.ಪುರ : ಭೈರತಿ ಬಸವರಾಜ್
ಬ್ಯಾಟರಾಯನಪುರ : ಕೃಷ್ಣ ಭೈರೇಗೌಡ
ಚಿಕ್ಕಪೇಟೆ : ದೇವರಾಜ್ ಆರ್.ವಿ.
ಯಶವಂತಪುರ : ಸೋಮಶೇಖರ ಎಸ್.ಟಿ.
ರಾಜರಾಜೇಶ್ವರಿನಗರ: ಮುನಿರತ್ನ ನಾಯ್ಡು
ಹೆಬ್ಟಾಳ : ಬಿ.ಎಸ್. ಸುರೇಶ್
ಪುಲಕೇಶಿನಗರ ಮೀಸಲು : ಅಖಂಡ ಶ್ರೀನಿವಾಸಮೂರ್ತಿ
ಚಾಮುಂಡೇಶ್ವರಿ : ಸಿದ್ಧರಾಮಯ್ಯ
ಕೊರಟಗೆರೆ ಮೀಸಲು : ಡಾ. ಪರಮೇಶ್ವರ ಜಿ.
ವರುಣಾ : ಡಾ. ಯತೀಂದ್ರ
ಕನಕಪುರ : ಡಿ.ಕೆ. ಶಿವಕುಮಾರ್
ಮಂಡ್ಯ : ಅಂಬರೀಶ್
ಮೂಡಿಗೆರೆ : ಮೋಟಮ್ಮ ಸಿ.
ಹೊಳಲ್ಕೆರೆ ಮೀಸಲು : ಹೆಚ್. ಆಂಜನೇಯ
ಗದಗ : ಹೆಚ್.ಕೆ.ಪಾಟೀಲ್
ಧಾರವಾಡ : ವಿನಯ ಕುಲಕರ್ಣಿ
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
ತೆರದಾಳ : ಉಮಾಶ್ರೀ
ಯಲಬುರ್ಗಾ : ಬಸವರಾಜ್ ರಾಯರೆಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.