ಕೊಲ್ಲೂರಿನಲ್ಲಿ ಲೋ ವೋಲ್ಟೇಜ್ ಸಮಸ್ಯೆ
Team Udayavani, Apr 16, 2018, 6:20 AM IST
ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ಲೋವೋಲ್ಟೇಜ್ ಸಮಸ್ಯೆಯಿದ್ದು, ಪರಿಹಾರಕ್ಕಾಗಿ ಇಲಾಖೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ವರ್ಷದ ಎಲ್ಲ ತಿಂಗಳಲ್ಲೂ ಇಲ್ಲಿ ಲೋವೋಲ್ಟೇಜ್ ಸಮಸ್ಯೆ ಇದ್ದು, ಕಳೆದ 6 ದಿನಗಳಿಂದಲೂ ಸಮಸ್ಯೆ ತೀವ್ರವಾಗಿದೆ. ವಾರದಲ್ಲಿ 2 ದಿನ ದುರಸ್ತಿಗೆಂದು ದಿನವಿಡೀ ವಿದ್ಯುತ್ ಕಡಿತಗೊಳಿಸಿದರೆ, ಬಾಕಿ ದಿನಗಳಲ್ಲಿ ಸಾಮಾನ್ಯ ಬಲ್ಬ್ಗಳೂ ಬೆಳಗದಷ್ಟು ವೋಲ್ಟೇಜ್ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಇಲಾಖೆಗೆ ದೂರು ನೀಡಿದರೆ, ಕೇವಲ ಭರವಸೆ ಮಾತ್ರ ಸಿಕ್ಕಿದ್ದು, ಸಮಸ್ಯೆ ಬಗೆಹರಿಯದೇ ಇನ್ನೂ ಹಾಗೇ ಉಳಿದಿದೆ ಎನ್ನುವುದು ಜನರ ಅಳಲು.
ಪಂಪ್, ಉಪಕರಣ ಚಾಲೂ ಇಲ್ಲ!
ಲೋವೋಲ್ಟೇಜ್ ಸಮಸ್ಯೆಯಿಂದ ಕೃಷಿಕರ ಪಂಪ್‌ಸೆಟ್‌ಗಳು, ಕೊಲ್ಲೂರಿನಲ್ಲಿ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಅವರು ಜನರೇಟರ್ ಮೊರೆ ಹೋಗಿದ್ದು, ಹೆಚ್ಚಿನ ಖರ್ಚಿನಿಂದಾಗಿ ಹೊಡೆತ ಬಿದ್ದಿದೆ.
ವಿಳಂಬವಾಗುವ ಸಾಧ್ಯತೆ
ಹಾಲ್ಕಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಮೆಸ್ಕಾಂ ಸಬ್‌ಸ್ಟೇಷನ್‌ಗೆ ಗುದ್ದಲಿ ಪೂಜೆ ನಡೆದಿದ್ದರೂ, ಕಾಮಗಾರಿ ಆಮೆನಡಿಗೆಯಲ್ಲಿ ಸಾಗಿದೆ. 11 ಕೆ.ವಿ. ಲೈನ್ ಬೈಂದೂರು ಅಥವಾ ತಲ್ಲೂರಿನಿಂದ ಕೊಲ್ಲೂರಿಗೆ ಜೋಡಿಸಬೇಕಾಗಿದ್ದು 30 ಕಿ.ಮೀ. ದೂರ ವ್ಯಾಪ್ತಿಯ ಪ್ರದೇಶ ಪೂರ್ಣಗೊಳಿಸುವುದು ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕೆ 2 ವರ್ಷ ಬೇಕಾಗಬಹುದು ಎಂಬ ಅಂದಾಜಿದೆ. ಇದರ ಟೆಂಡರನ್ನು ಮಂಗಳೂರಿನ ಜ್ಯೋತಿ ಕನ್‌ಸ್ಟ್ರಕ್ಷನ್ ಅವರಿಗೆ ಟೆಂಡರ್ ನೀಡಲಾಗಿದೆ. ಕುಡಿಯುವ ನೀರಿಗೂ ಇದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರಾದ ರಮೇಶ್ ಗಾಣಿಗ ಹೇಳುತ್ತಾರೆ.
ಜನರೇಟರ್‌ಗೆ ಶರಣು
ಲೋ ವೋಲ್ಟೇಜ್ ಸಮಸ್ಯೆ ಎದುರಾಗಿರುವ ಕೊಲ್ಲೂರಿನ ಅಂಗಡಿ ಮುಂಗಟ್ಟುಗಳವರು ಇನ್‌ವರ್ಟರ್ ಹಾಗೂ ಜನರೇಟರ್‌ಗೆ ಶರಣು ಹೋಗಬೇಕಾಗಿದ್ದು ದುಬಾರಿ ವೆಚ್ಚ ತೆತ್ತು ವ್ಯವಹಾರ ನಡೆಸುವುದು ಕಷ್ಟಸಾಧ್ಯ. ಸಬ್‌ಸ್ಟೇಷನ್ ಕೂಡಲೇ ಆರಂಭಿಸಿ ಲೋವೋಲ್ಟೇಜ್ ಸಮಸ್ಯೆ ಬಗೆಹರಿಸಬೇಕು.
- ಗಿರೀಶ್ ಶೆಟ್ಟಿ, ಉದ್ಯಮಿ, ಕೊಲ್ಲೂರು
ಅಡುಗೆ ಮಾಡಲಾಗುತ್ತಿಲ್ಲ
ದೈನಂದಿನ ಅಗತ್ಯಕ್ಕೆ ಬಳಕೆ ಆಗಬೇಕಾದ ವಿದ್ಯುತ್ ಉಪಕರಣಗಳು ಲೋವೋಲ್ಟೇಜ್ನಿಂದ ಸ್ತಬ್ಧವಾಗಿವೆ. ಅಡುಗೆ ಮಾಡಲೂ ಸಾಧ್ಯವಾಗುತ್ತಿಲ್ಲ.
- ಲಕ್ಷ್ಮೀದೇವಿ
ಗೃಹಿಣಿ, ಕೊಲ್ಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.