ಎನ್‌ಕೌಂಟರ್ ಡೀಲ್?
Team Udayavani, Apr 16, 2018, 9:05 AM IST
ಲಕ್ನೋ: ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳ ಸರಣಿ ಎನ್‌ಕೌಂಟರ್ ಗಳು ನಡೆದ ವೇಳೆಯಲ್ಲೇ, ಲೇಖೀರಾಜ್ ಸಿಂಗ್ ಯಾದವ್ ಎಂಬ ರೌಡಿಶೀಟರ್ ಗೆ ಎನ್ ಕೌಂಟರ್ ಮಾಡುವ ಬೆದರಿಕೆ ಹಾಕಿ, ಡೀಲಿಂಗ್ ಮಾಡಲು ಪ್ರಯತ್ನಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಮೌನರಾಣಿಪುರ ಪೊಲೀಸ್ ಠಾಣೆಯ ಎಸ್.ಎಚ್.ಒ. ಆಗಿರುವ ಸುನಿತ್ ಕುಮಾರ್ ಸಿಂಗ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇವರಿಬ್ಬರ ನಡುವೆ ನಡೆದ ಎನ್ ಕೌಂಟರ್ ಕುರಿತಾದ ಸಂಭಾಷಣೆ ಅಂತರ್ಜಾಲದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಂಡುತನಿಖೆಗೆ ಆದೇಶಿಸಲಾಗಿದೆ. ಧ್ವನಿಗಳು ಖಚಿತಗೊಳ್ಳದ ಆ ದೂರವಾಣಿ ಮಾತುಕತೆಯ ಪ್ರಕಾರ, ಲೇಖೀರಾಜ್‌ಗೆ ಫೋನಾಯಿಸಿದ್ದ ಸಿಂಗ್, “ನಿನ್ನನ್ನು ಕೊಲ್ಲಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ನಿನ್ನ ಮೊಬೈಲ್ ಸಿಗ್ನಲ್‌ಗಳನ್ನು ಟ್ರೇಸ್ ಮಾಡಲಾಗುತ್ತಿದೆ. ನೀನು ಬಚಾವಾಗಬೇಕೆಂದರೆ, ಸ್ಥಳೀಯ ಬಿಜೆಪಿ ನಾಯಕರಾದ ಸಂಜಯ್ ದುಬೆ ಹಾಗೂ ರಾಜೀವ್ ಸಿಂಗ್ ಪರಿಚಾ ಅವರನ್ನು ‘ಚೆನ್ನಾಗಿ’ ನೋಡಿಕೊಳ್ಳಬೇಕು” ಎಂದಿದ್ದಾರೆ.
ಈ ಮಾತುಕತೆ ನಡೆದ ಕೆಲವೇ ಗಂಟೆಗಳಲ್ಲಿ ಸಿಂಗ್, ಕೆಲ ಪೊಲೀಸ್ ಸಿಬಂದಿ ಜತೆ ಲೇಖೀರಾಜ್ ಅಡಗಿದ್ದ ಪ್ರದೇಶದ ಮುಂದೆ ಹಾಜರಾದಾಗ, ಲೇಖೀರಾಜ್ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಲೇಖೀರಾಜ್ ಪರಾರಿಯಾಗಿದ್ದಾನೆ. ಹೀಗಾಗಿ, ಲೇಖೀರಾಜ್ ಹಾಗೂ ಆತನ ಇಬ್ಬರು ಪುತ್ರರ ವಿರುದ್ಧ ಸಿಂಗ್ ಕೇಸು ಜಡಿದಿದ್ದಾರೆ. ಇದರಿಂದ ಕುಪಿತಗೊಂಡ ಲೇಖೀರಾಜ್, ಆಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.