ವಿವಿಧೆಡೆ ಸಂಭ್ರಮದ ವಿಷು ಆಚರಣೆ
Team Udayavani, Apr 16, 2018, 10:10 AM IST
ಮಹಾನಗರ: ಸೌರ ಯುಗಾದಿ ಅಂಗವಾಗಿ ‘ಬಿಸು ಪರ್ಬ’ವನ್ನು ನಗರದ ವಿವಿಧೆಡೆ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.
ಕೊಡಿಯಾಲ್ಬೈಲ್ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಮಧ್ಯಾಹ್ನ 12ರಿಂದ ಶ್ರೀ ಮಾತೆಯರಿಗೆ ವಿಷು ಕಣಿ ಸೇವೆಯು ನಡೆಯಿತು.
ಶರವು ದೇವಸ್ಥಾನದಲ್ಲಿ ಬೆಳಗ್ಗೆ 5.30ಕ್ಕೆ ವಿಷು ಕಣಿ ಪೂಜೆ ನಡೆದು ಬಳಿಕ ನಿತ್ಯ ಪೂಜೆ ಜರಗಿತು. ಮಹತೋಭಾರ
ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ವಿಷು ಕಣಿ ಇಟ್ಟು , ಮಧ್ಯಾಹ್ನ ದೇವರಿಗೆ ಅಲಂಕಾರ ಮಾಡಿ ಮಹಾಪೂಜೆಯ ಬಳಿಕ ಹೊಸ ಪಂಚಾಂಗವನ್ನು ಓದಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಕೃಷ್ಣ ದೇವರ ಮೂರ್ತಿಯ ಮುಂಭಾಗದಲ್ಲಿ ವಿಷು ಕಣಿ ಇಡಲಾಯಿತು.
ಮೂಡಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಣಿ ಪೂಜೆ, ಉಳೆಪಾಡಿ ಶ್ರೀ ದುರ್ಗಾ
ಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದಲ್ಲಿ ವಿಷುಕಣಿ ಆರಾಧನೆ ನೆರವೇರಿತು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಾಂಪ್ರದಾಯದಂತೆ ರವಿವಾರ ಕನ್ನಡಿಗೆ ಅಲಂಕಾರ ಮಾಡಿ ಹಸುರುವಾಣಿ ತರಕಾರಿಯೊಂದಿಗೆ ಇರಿಸಲಾಗಿದ್ದ ಕಣಿಯನ್ನು ನೋಡಿದ ಅನಂತರ ಭಕ್ತರು ಶ್ರೀದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ದೇಗುಲದಲ್ಲಿ ವಿಶೇಷ ಪೂಜೆ ಜರಗಿದವು. ಸಂಜೆ ದೇವಸ್ಥಾನದ ಪವಿತ್ರ ಪಾಣಿ ಅತ್ತೂರುಬೈಲು ಉಡುಪರು ಕ್ಷೇತ್ರಕ್ಕೆ ಆಗಮಿಸಿ ನೂತನ ಪಂಚಾಂಗ ಫಲವನ್ನು ಪಠಿಸಿದರು. ಸಂಜೆ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.