ಸಿದ್ದಲಿಂಗ ಪಟ್ಟಣಶೆಟ್ಟಿ ಆತ್ಮ ಕಥನ ಗಿರಿಜವ್ವನ ಮಗ ಲೋಕಾರ್ಪಣೆ
Team Udayavani, Apr 16, 2018, 5:03 PM IST
ಧಾರವಾಡ: ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ವತಿಯಿಂದ ಹಿರಿಯ ಕವಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಆತ್ಮಕಥನ ‘ಗಿರಿಜವ್ವನ ಮಗ’ ಕೃತಿಯು ನಗರದ ರಂಗಾಯಣದ ಸಾಂಸ್ಕೃತಿಕ ಸಮುತ್ಛಯದಲ್ಲಿ ರವಿವಾರ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆ ಮಾಡಿದ ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ತಾಯಿ ತನ್ನ ರಟ್ಟೆ ಬಲದ ಮೂಲಕ ಗಟ್ಟಿತನದ ವ್ಯಕ್ತಿತ್ವ ಹೊಂದುವ ಮಕ್ಕಳನ್ನು ಸಮಾಜಕ್ಕೆ ಕಟ್ಟಿಕೊಡುವ ಬದುಕೇ ಒಂದು ರೋಚಕ. ಇಂತಹ ಸಾಂಸ್ಕೃತಿಕ ಅನನ್ಯತೆ ಒಂದು ಕಾಲದಲ್ಲಿತ್ತು. ಆದರೆ, ಆಧುನಿಕ ಬಿರುಗಾಳಿಗೆ ಸಿಲುಕಿ ಚದುರಿ ಹೋಗುವ ಮಾನವೀಯ ಸಂಬಂಧಗಳ ಗಟ್ಟಿತನವನ್ನು ಇಂದಿಗೂ ಗ್ರಾಮೀಣ ಸೊಗಡಿನಲ್ಲಿ ಕಾಣಬಹುದು. ಮನುಷ್ಯ ತನ್ನ ಅನುಭವದ ಮೂಲಕವೇ ಜಗತ್ತು ಗೆಲ್ಲಬಹುದು ಎಂಬುದಕ್ಕೆ ‘ಗಿರಿಜವ್ವನ ಮಗ’ ಕೃತಿಯೇ ಸಾಕ್ಷಿ. ಇದು ತಾಯಿ-ಮಗನ ಸಂಬಂಧದ ಪುಸ್ತಕವಲ್ಲ. ಸಾಮಾಜಿಕ ನೆಲೆಗಟ್ಟಿನಲ್ಲಿ ಮೂಡಿ ಬಂದಿರುವ ಗುರು ಪರಂಪರೆ, ಶೈಕ್ಷಣಿಕ ವ್ಯವಸ್ಥೆ, ಗ್ರಾಮೀಣ ಬದುಕು, ಸಂಬಂಧ ಹಾಗೂ ಸೌಹಾರ್ದತೆ ಬೆಸೆಯುವ ಅದ್ಭುತ ಕೃತಿಯಾಗಿದೆ ಎಂದರು.
ಸಾಹಿತಿ ಡಾ.ರಾಜಶೇಖರ ಮಠಪತಿ ಕೃತಿ ಪರಿಚಯಿಸಿ, ‘ಗಿರಿಜವ್ವನ ಮಗ’ ನೆನಪುಗಳ ಸಂಕಲನ. ಒಂದು ಪುಸ್ತಕ ಬರೆಯುವುದು ಎಂದರೆ ಆತ್ಮದೊಂದಿಗೆ ಆಲಾಪ-ಸಲ್ಲಾಪ ಇರಲಿದೆ. ಜಗತ್ತಿನ ಶ್ರೇಷ್ಠ ಬರಹಗಾರನು ಸಂಪೂರ್ಣ ಸತ್ಯ ಹೇಳಲು ಸಾಧ್ಯವಿಲ್ಲ. ಓರ್ವ ಲೇಖಕ ಎಷ್ಟರ ಮಟ್ಟಿಗೆ ಸತ್ಯ ಹೇಳಲು ಸಾಧ್ಯವೋ ಅಷ್ಟರ ಮಟ್ಟಿಗೆ ಈ ಕೃತಿ ಹೇಳಿದೆ. 25 ಪುಟಗಳು ಶಿಕ್ಷಕರ ಹೆಸರು, 100 ಪುಟಗಳಷ್ಟು ಸ್ನೇಹಿತರ ಹೆಸರುಗಳಿದ್ದು, ತಾಯಿಯ ಅಂತಃಕರಣ ಬಿಂಬಿಸುವುದನ್ನು ಕಾಣಬಹುದು ಎಂದರು.
ಕೃತಿಕಾರ ಕವಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ| ಚಂದ್ರಶೇಖರ ವಸ್ತ್ರದ, ಮಾಜಿ ಶಾಸಕಿ ಸೀಮಾ ಮಸೂತಿ, ಲೇಖಕಿ ಡಾ| ಹೇಮಾ ಪಟ್ಟಣಶೆಟ್ಟಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.