ಗೃಹಸ್ಥರಿಂದಲೇ ಧರ್ಮ ಉಳಿವು
Team Udayavani, Apr 16, 2018, 5:29 PM IST
ಹುಬ್ಬಳ್ಳಿ: ಧರ್ಮ ಇರುವುದು ಗೃಹಸ್ಥರಿಗೆ ಮಾತ್ರ. ಗೃಹಸ್ಥರಿಂದ ಧರ್ಮ ಉಳಿಯುತ್ತದೆ, ಸನ್ಯಾಸಿಗಳಿಂದಲ್ಲ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ವೀರಾಪುರ ರಸ್ತೆಯಲ್ಲಿರುವ ಶ್ರೀ ಗುರು ಬಸವ ಮಂಟಪದಲ್ಲಿ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವಣ್ಣ ಸ್ಥಾಪಿಸಿದ ಗೃಹಸ್ಥ ಧರ್ಮ. ಧರ್ಮ ಇರುವುದು ಗೃಹಸ್ಥರಿಗೆ. ಪ್ರವಾದಿ ಪೈಗಂಬರರು, ಬಸವಣ್ಣನವರ ಗೃಹಸ್ಥರಾಗಿದ್ದರು. ಅವರಿಂದಲೇ ಧರ್ಮ ಉಳಿದಿರುವುದು ಬೆಳೆದಿರುವುದು ಎಂದರು.
ಪ್ರಜಾಪ್ರಭುತ್ವ ಕ್ಕೆ ಇನ್ನೊಂದು ಹೆಸರು ಬೇಕಾಗಿದೆ ಅದು ಲಿಂಗಾಯತ. ಈ ಕುರಿತು ಎಲ್ಲರಿಗೆ ಸ್ಪಷ್ಟತೆ ಇದೆ. ಆದರೂ ಧೈರ್ಯ ಮಾಡುತ್ತಿಲ್ಲ. ಇಂದಿನ ಸ್ಥಿತಿ ನೋಡಿ ಬಸವಣ್ಣನು ನೆನೆಸಿದರೆ ಅಯ್ಯೋ ಎನಿಸುತ್ತಿದೆ. ಎಲ್ಲೊ ಒಂದು ಕಡೆ ಬಸವಣ್ಣ ಒಬ್ಬನೇ ಆಗಿದ್ದಾ ನೆ. ಬಸವಣ್ಣ ಎಲ್ಲರಿಗೂ ಬೇಕು.
ಅವನಿಲ್ಲದೆ ಏನೂ ಇಲ್ಲ. ಸಂಕ್ರಮಣ ಕಾಲದಲ್ಲಿ ಬಸವಣ್ಣನವರು ನಿಂತಿದ್ದಾರೆ ಎಂದರು.
ಇಂದು ಕೆಲ ಮಠಗಳಲ್ಲಿ ಅಣ್ಣ, ಅಕ್ಕ, ತಂಗಿಯರನ್ನು ಮಠದ ವ್ಯವಸ್ಥಾಪಕರನ್ನಾಗಿ ಮಾಡಿಕೊಳ್ಳಾಗಿದೆ. ಇಂದಿನ ಸಮಾಜದಲ್ಲಿರುವ ಮೂಢನಂಬಿಕೆ, ಅಂಧಶ್ರದ್ಧೆಯಿಂದ ಎಲ್ಲರೂ ಹೊರ ಬರಬೇಕಾಗಿದೆ. ಧಾರ್ಮಿಕ ಮುಖಂಡರು ದಾರಿ ತಪ್ಪಿದಾಗ ಸಮಾಜವೇ ಅವರನ್ನು ಸರಿದಾರಿಗೆ ತರಬೇಕು ಎಂದರು.
ಚಿಂತಕ ಸಿದ್ದಣ್ಣ ಲಂಗೋಟಿ ಅವರು ವಿಶ್ವಗುರು ಬಸವೇಶ್ವರರ ಸಾರ್ವಕಾಲಿಕ ಸಂದೇಶದ ಕುರಿತು ಅನುಭಾವ ನೀಡಿದರು. ಬಸವ ಕಿರಣ ಕಾರ್ಯಕ್ರಮ ಉದ್ಘಾಟಿಸಿದರು. ಚಂದ್ರಶೇಖರ ಕರವೀರಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಲಿಂಗಶೆಟ್ಟರ, ಸುಲೋಚನಾ ಭೂಸನೂರ, ಅನಸೂಯಾ ಸಾದರಹಳ್ಳಿ, ರಾಮನಗೌಡ್ರ ಪಾಟೀಲ, ಜಿ.ಸಿ.ಹರ್ತಿ, ಶಶಿಧರ ಹರ್ತಿ ಸೇರಿದಂತೆ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.