ಅಘೋಷಿತ ಹರತಾಳ : ಕಂಗೆಟ್ಟ ಜನತೆ 


Team Udayavani, Apr 17, 2018, 6:15 AM IST

16ksde6.jpg

ಕಾಸರಗೋಡು: ಕೇರಳದಲ್ಲಿ ಸೋಮವಾರ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳು ಹರತಾಳಕ್ಕೆ ಕರೆ ನೀಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸಂದೇಶಗಳನ್ನು ಅನುಸರಿಸಿ ಜಿಲ್ಲೆಯಲ್ಲಿ ಹರತಾಳ ಪ್ರತೀತಿ ಕಂಡುಬಂದಿದೆ. ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿದ್ದು, ಬಸ್‌ ಸಂಚಾರ ಮೊಟಕುಗೊಂಡಿತು. 

ಜಮ್ಮು-ಕಾಶ್ಮೀರ ಕಥುವಾದಲ್ಲಿ 8ರ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಕೃತ್ಯ ವನ್ನು ಪ್ರತಿಭಟಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ಹರತಾಳ ನಡೆಸಲಾಗುವುದೆಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡಿಸಿದ್ದು, ಈ ಪ್ರಚಾರದ ಹೆಸರಿನಲ್ಲಿ ಕೇರಳದಲ್ಲಿ ಅಘೋಷಿತ ಹರತಾಳ ನಡೆಸಲಾಯಿತು. ಹರತಾಳದಿಂದಾಗಿ ಸೋಮವಾರ ಬೆಳಗ್ಗೆ ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ವಾಹನಗಳನ್ನು ತಡೆಯಲಾರಂಭಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸರಕಾರಿ, ಖಾಸಗಿ ಬಸ್‌ಗಳು ಬೆಳಗ್ಗೆ ಸೇವೆ ಆರಂಭಿಸಿದಾಗ ಹಲವೆಡೆಗಳಲ್ಲಿ ತಡೆಯೊಡ್ಡಲಾಯಿತು.
  
ಇದರಿಂದಾಗಿ ರಾಜ್ಯ ಸರಕಾರಿ ಬಸ್‌ಗಳ ಸೇವೆಯೂ ಅವ್ಯವಸ್ಥೆಗೊಂಡಿತು. ಕಾಸರಗೋಡಿನಿಂದ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿದ್ಯಾನಗರ, ಪಾಣಲಂ, ಚೆರ್ಕಳ ಮೊದಲಾದೆಡೆಗಳಲ್ಲಿ ಕೆಲವರು ತಡೆದರು. ಬಸ್ಸುಗಳನ್ನು ತಡೆದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. 

ಚೆಂಗಳ ಪಾಣಲಂನಲ್ಲಿ ಬೆಳಗ್ಗೆ ಟೋರಸ್‌ ಲಾರಿಯೊಂದು ಬರುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ತಂಡ ಲಾರಿಗೆ ಅಡ್ಡವಾಗಿ ಇರಿಸಿ ತಡೆಗಟ್ಟಿದ್ದು, ಈ ಸಂಬಂಧ ಸಲೀಂನನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಲಾರಿ ಶರವೇಗದಲ್ಲಿ ಸಾಗುತ್ತಿದ್ದ ವೇಳೆ ಬೈಕ್‌ ಅಡ್ಡ ನಿಲ್ಲಿಸಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯಿತ್ತೆಂದು ಪೊಲೀಸರು ತಿಳಿಸಿದ್ದಾರೆ. 

ಹೆಚ್ಚಿನ ಯಾವುದೇ ವ್ಯಾಪಾರ ಸಂಸ್ಥೆಗಳು ತೆರೆದಿಲ್ಲ. ಬಹುತೇಕ ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಿತ್ತು. ಯಾವುದೇ ಸೂಚನೆಯಿಲ್ಲದೆ ನಡೆಸಿದ ಅಘೋಷಿತ ಹರತಾಳದಿಂದ ಜನರು ಸಂಕಷ್ಟಕ್ಕೀಡಾದರು. ಖಾಸಗಿ ವಾಹನಗಳು ಮಾತ್ರವೇ ರಸ್ತೆಗಿಳಿದಿವೆ. 

ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಲಾಯಿತು. ಬಳಿಕ ಅಂತಹ ಅಡಚಣೆಗಳನ್ನು ಪೊಲೀಸರು ತೆರವುಗೊಳಿಸಿದರು. ಎದುರ್ತೋಡು, ಮೂಕಂಪಾರೆ, ಪೊವ್ವಲ್‌ ಮೊದಲಾದೆಡೆಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಪೊವ್ವಲ್‌ನಲ್ಲಿ ಗೂಡಂಗಡಿಯೊಂದನ್ನು ರಸ್ತೆಗೆ ಅಡ್ಡವಾಗಿ ಇರಿಸಲಾಯಿತು. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಯಾವುದೇ ಬಸ್‌ಗಳು ಸಂಚರಿಸಿಲ್ಲ.ಇದೇ ವೇಳೆ ಅಘೋಷಿತ ಹರತಾಳದ ಹೆಸರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲೆಡೆ ವ್ಯಾಪಕ ಗಸ್ತು ಏರ್ಪಡಿಸಿದ್ದರು. 

ಬಸ್ಸಿಗೆ ಕಲ್ಲೆಸೆತ, ಚಾಲಕರಿಬ್ಬರಿಗೆ ಗಾಯ : ಬೇವಿಂಜೆಯಲ್ಲಿ ಹರತಾಳ ಬೆಂಬಲಿಗರು ಕಲ್ಲೆಸೆದ ಪರಿಣಾಮವಾಗಿ ತಲಶೆÏàರಿಯಿಂದ ಕಾಸರಗೋಡಿಗೆ ಸೋಮವಾರ ಬೆಳಗ್ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಪೂರ್ಣವಾಗಿ ಪುಡಿಯಾಗಿದೆ. ಚಾಲಕ ತಲಶೆÏàರಿಯ ಸುಭಾಷ್‌(40) ಗಾಯಗೊಂಡಿದ್ದಾರೆ. ಅವರನ್ನು ಚೆಂಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. 

ರವಿವಾರ ರಾತ್ರಿ ಮಂಗಳೂರಿನಿಂದ ಕಾಸರಗೋಡಿಗೆ ಬಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಉಪ್ಪಳ ನಯಾಬಜಾರ್‌ ಕುಕ್ಕಾರು ಜನಪ್ರಿಯ ಬಸ್‌ ತಂಗುದಾಣದ ಪರಿಸರದಲ್ಲಿ ಕಲ್ಲೆಸೆದ ಪರಿಣಾಮವಾಗಿ ಬಸ್‌ ಚಾಲಕ ಜೋಮೋನ್‌ ಮ್ಯಾಥ್ಯೂ(46) ಅವರ ಕಣ್ಣಿಗೆ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಬಸ್‌ಗೆ ಕಲ್ಲೆಸೆದವರ ಸ್ಪಷ್ಟ ಮಾಹಿತಿ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಕೊಳ್ಳಲಾಗಿದೆ ಎಂದೂ, ಅವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಚಿತ್ರಗಳು:  ಶ್ರೀಕಾಂತ್‌ ಕಾಸರಗೋಡು/ಮಣಿರಾಜ್‌ ವಾಂತಿಚಾಲ್‌ 
 

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

8

Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

17

Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

courts

Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.