850 ಕೆ.ಜಿ. ಗೋಮಾಂಸ ಸಹಿತ ಐವರು ಪೊಲೀಸರ ವಶಕ್ಕೆ

Team Udayavani, Apr 17, 2018, 9:48 AM IST

vasha.jpg

ಬೆಳ್ತಂಗಡಿ: ಜಿಲ್ಲಾ ಅಪರಾಧ ಪತ್ತೆ ದಳದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಎ.16ರಂದು ಬೆಳಗ್ಗೆ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅಕ್ರಮ ಗೋಮಾಂಸ ಸಾಗಾಟವನ್ನು ಪತ್ತೆ ಹಚ್ಚಲಾಗಿದೆ. 

ಸುಮಾರು 850 ಕೆ.ಜಿ. ಗೋಮಾಂಸವನ್ನು ಸಾಗಿಸುತ್ತಿದ್ದ ಐವರನ್ನು ವಾಹನ ಸಹಿತ ವಶಕ್ಕೆ ಪಡೆಯಲಾಗಿದೆ. ಬಂಧಿತರು ಮತ್ತು ಸುಮಾರು 14.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ.

ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇಗೌಡ ಮಾರ್ಗ ದರ್ಶನದಲ್ಲಿ ಡಿಸಿಐಬಿ ಪೊಲೀಸ್‌ ನಿರೀಕ್ಷಕ ಸುನೀಲ್‌ ವೈ. ನಾಯ್ಕ ನೇತೃತ್ವÌದ ತಂಡ ಕಾರ್ಯಾಚರಣೆ ನಡೆಸಿ ಮಹಿಂದ್ರ ಝೈಲೋ, ಮಹಿಂದ್ರ ಬೊಲೇರೊ ವಾಹನ ಮತ್ತು ಸುಮಾರು 850 ಕೆ.ಜಿ. ದನದ ಮಾಂಸ ಹಾಗೂ ಐದು ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

ವಿವರ
ಡಿಸಿಐಬಿ ಸಿಬಂದಿ ಎ.16ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಗಸ್ತುನಿರತ ವೇಳೆ ಗುರುವಾಯನಕೆರೆ ಜಂಕ್ಷನ್‌ ಬಳಿ  ಮಹಿಂದ್ರ  ಘೈಲೋ ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ ಮೂವರು ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಮಂಗಳೂರು ಕುದ್ರೋಳಿ ಕರ್ಬಳ ರೋಡ್‌ ನಿವಾಸಿ ಮುಸ್ತಾಕ್‌ (50), ಬಂಟ್ವಾಳ ತಾಲೂಕು ಗೋಳ್ತಮಜಲು ನಿವಾಸಿ ಮಹಮದ್‌ ಕಬೀರ್‌ (38), ಬಂಟ್ವಾಳ ತಾಲೂಕು ತುಂಬೆ ವಾಟರ್‌ ಟ್ಯಾಂಕ್‌ ಬಳಿಯ ನಿವಾಸಿ ಅಬ್ದುಲ್‌ ಜಬ್ಟಾರ್‌ (45) ಅವರನ್ನು ಬಂಧಿಸಿ, 450 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ.

ಮತ್ತೂಂದು ಕಾರ್ಯಾಚರಣೆಯಲ್ಲಿ ಗುರುವಾಯನಕೆರೆ- ವೇಣೂರು ರಸ್ತೆಯ ಕುಕ್ಕೇಡಿ ಬಳಿ ಮಹೀಂದ್ರ ಬೊಲೇರೊ ವಾಹನವನ್ನು ತಡೆದು ಪರಿಶೀಲಿಸಿದಾಗ ಇಬ್ಬರು ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿರುವುದು ಪತ್ತೆಯಾಯಿತು. ವಾಹನದಲ್ಲಿದ್ದ ಬಂಟ್ವಾಳ ತಾಲೂಕು ಕಾರಿಂಜ ಬಳಿಯ ನಿವಾಸಿ ಎಂ.ಅಶ್ರಫ್‌ (39), ಮಂಗಳೂರು ಬಂದರು ಬಳಿಯ ರಝೀಮ್‌ (25) ಹಾಗೂ 400 ಕೆ.ಜಿ. ದನದ ಮಾಂಸವನ್ನು ವೇಣೂರು ಠಾಣೆಗೆ ಹಸ್ತಾಂತರಿಸಲಾಗಿದೆ. ಮಾಂಸವನ್ನು ಬೇಲೂರು ಕಡೆಯಿಂದ ಮಂಗಳೂರು ಕಡೆಗೆ ತರಲಾಗುತ್ತಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮಾಂಸವನ್ನು ನ್ಯಾಯಾಲಯದ ಅನುಮತಿ ಪಡೆದು ದಫನ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್‌ ನಿರೀಕ್ಷಕರಾದ ಸುನಿಲ್‌ ವೈ. ನಾಯಕ್‌, ಸಿಬಂದಿ ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಉದಯ ರೈ, ಪ್ರವೀಣ ಕೆ., ಇಕ್ಬಾಲ್‌ ಎ.ಇ., ತಾರಾನಾಥ ಎಸ್‌., ಪಳನಿವೇಲು ಮತ್ತು ಚಾಲಕರಾದ ವಿಜಯ ಗೌಡ ಮೊದಲಾದವರಿದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.