ನಿಮ್ಮ ವಾಟ್ಸ್ಯಾಪ್ ಗ್ರೂಪ್‌ನ ಅಡ್ಮಿನ್ ಹೀಗಿದ್ದಾನಾ?
Team Udayavani, Apr 17, 2018, 5:58 PM IST
ಜಗತ್ತಿನ ಕೆಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ವಾಟ್ಸ್ಯಾಪ್ ಅಡ್ಮಿನ್ ಕೂಡ ಒಂದು ಎನ್ನುವ ತಮಾಷೆಯನ್ನು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಅಡ್ಮಿನ್‌ನನ್ನು ಕಾಲೆಳೆಯಲು, ಗ್ರೂಪ್ ರಚಿಸಿ ಕಿರಿಕಿರಿ ಕೊಡುತ್ತಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಳ್ಳಲು ಅವನ ಮೇಲೆ ನೂರಾರು ಜೋಕುಗಳನ್ನು ಸಿಡಿಸಿ, ಮನರಂಜನೆಯನ್ನೂ ಪಡೆಯುತ್ತೇವೆ. ಆದರೆ, ಅವೆಲ್ಲ ಬಿಡಿ… ಅಡ್ಮಿನ್ ಆಗಿ ಎಲ್ಲರನ್ನೂ ಗ್ರೂಪ್‌ನಲ್ಲಿ ಇಟ್ಟುಕೊಳ್ಳೋದು ಒಂದು ಕಲೆ ಎನ್ನುವುದು ನಿಮಗೆ ಗೊತ್ತೇ?
ಹೌದು, ವಾಟ್ಸ್ಯಾಪ್ ಗ್ರೂಪ್ ಅನ್ನು ಯಾರೂ ರಚಿಸಬಹುದು. ಆದರೆ, ಆ ಗ್ರೂಪ್ ಅನ್ನು ಯಶಸ್ವಿಗೊಳಿಸೋ ಗುಟ್ಟು ಕೆಲವರಿಗಷ್ಟೇ ಗೊತ್ತಿರುತ್ತೆ. ಆತ ಬಹಳ ನಾಜೂಕಾಗಿ ತಾನು ರಚಿಸಿದ ಗ್ರೂಪ್‌ನ ಉದ್ದೇಶಗಳನ್ನು ಸಾಕಾರಗೊಳಿಸುತ್ತಿರುತ್ತಾನೆ. ಅಷ್ಟಕ್ಕೂ ಯಶಸ್ವಿ ಅಡ್ಮಿನ್‌ಗೂ ಒಂದಿಷ್ಟು ಲಕ್ಷಣಗಳು ಇವೆಯಂತೆ. ಅವೇನು ಗೊತ್ತೇ?
– ಅಡ್ಮಿನ್ ಒಬ್ಬ ಕೂಡು ಕುಟುಂಬದ ಯಜಮಾನ ಇದ್ದಂತೆ. ಅವನಿಗೆ ಯಾರನ್ನೂ ಹರ್ಟ್ ಮಾಡುವ ಉದ್ದೇಶವಿರುವುದಿಲ್ಲ. ಹಾಗೇನಾದರೂ ಮನ ನೋಯಿಸಿದರೆ, ಆತ ಯಶಸ್ವಿ ಅಡ್ಮಿನ್ ಆಗಲು ಅರ್ಹನಲ್ಲ.
– ಯಶಸ್ವಿ ಅಡ್ಮಿನ್ ಯಾವತ್ತೂ ಗುಡ್ ಮಾರ್ನಿಂಗ್, ಗುಡ್‌ನೈಟ್ ಮೆಸೇಜುಗಳನ್ನು ಕಳಿಸುವುದಿಲ್ಲ. ಅಶ್ಲೀಲವಾಗಿ ಸಂದೇಶಗಳನ್ನು ರವಾನಿಸುವುದಿಲ್ಲ.
– ಯಾವ ಉದ್ದೇಶಕ್ಕಾಗಿ ವಾಟ್ಸ್ಯಾಪ್ ಗ್ರೂಪ್ ರಚನೆಯಾಗಿದೆ ಎಂಬುದರ ಅರಿವು ಆತನೊಳಗೆ ಸದಾ ಇರುತ್ತೆ. ಹಾಗಾಗಿ, ಆತ ಅದಕ್ಕೆ ಪೂರಕವಾದಂಥ ಸಂದೇಶಗಳನ್ನೇ ತನ್ನ ಗ್ರೂಪ್‌ನಲ್ಲಿ ಹಾಕುತ್ತಿರುತ್ತಾನೆ.
– ನಾಲ್ಕು ಜನ ಇದ್ದಲ್ಲಿ ಜಗಳ, ಮನಸ್ತಾಪ ಇದ್ದಿದ್ದೇ. ಆ ಸತ್ಯ ಅಡ್ಮಿನ್‌ಗೂ ಗೊತ್ತಿರಬೇಕು. ಅವರನ್ನು ಸಮಾಧಾನಪಡಿಸಿ, ನ್ಯಾಯಯುತವಾಗಿ ಬುದ್ಧಿಹೇಳುವ ಕೆಲಸವನ್ನು ಆತ ಮಾಡುತ್ತಾನೆ.
– ಗ್ರೂಪ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ, ಬೇರೆ ವಿಚಾರವನ್ನು ಪ್ರಸ್ತಾಪಿಸಿ, ಚರ್ಚೆಯ ಹಳಿ ತಪ್ಪಿಸುವ ಕೆಲಸವನ್ನು ಯಶಸ್ವಿ ಅಡ್ಮಿನ್ ಎಂದೂ ಮಾಡುವುದಿಲ್ಲ.
– ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಅಡ್ಮಿನ್, ಗ್ರೂಪ್‌ಗೆ ಸಂಬಂಧಿಸಿದ ವಿಚಾರಗಳನ್ನು ಪೋಸ್ಟ್ ಮಾಡುತ್ತಾನೆ.
– ಚರ್ಚೆಯ ವೇಳೆ ಯಾರಾದರೂ ಕೋಪಗೊಂಡು ಗ್ರೂಪ್ ತ್ಯಜಿಸಿದರೆ (ಲೆಫ್ಟ್ ಆದರೆ) ಅವರ ಬಗ್ಗೆ ಆತ ಹಗುರವಾಗಿ ಮಾತಾಡುವುದಿಲ್ಲ. ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸಿ, ಪುನಃ ಗ್ರೂಪ್‌ಗೆ ಸೇರಿಸುವ ಕಲೆ ಆತನಿಗೆ ಗೊತ್ತಿರುತ್ತೆ.
– ಫೇಕ್‌ನ್ಯೂಸ್‌ಗಳನ್ನು ಪೋಷಿಸುವ ಕೆಲಸವನ್ನು ಆತ ಎಂದಿಗೂ ಮಾಡುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.