ಬಾಲ್ಯವೆಂಬ ಬತ್ತಾಸು ಬಿಲ್ಲೆ…


Team Udayavani, Apr 17, 2018, 5:58 PM IST

balyave.jpg

ಕೇವಲ 25 ವರ್ಷಗಳ ಹಿಂದೆ ಬಾಲ್ಯವೆಂಬುದು ನೂರೆಂಟು ಬಗೆಯ ಬೆರಗು, ಸಂಭ್ರಮ ಮತ್ತು ಅಚ್ಚರಿಗಳಿಂದ ಕೂಡಿತ್ತು. ಆ ಸಡಗರಗಳನ್ನೆಲ್ಲ ಜೊತೆಗಿಟ್ಟುಕೊಂಡೇ ಲೇಖಕರು ನೆನಪಿನ ದೋಣಿಯಲ್ಲಿ ತೇಲಿ ಹೋಗಿದ್ದಾರೆ… 

ಬದುಕೆಂಬ ಸಾರೋಟು ಧಾವಂತದಿಂದ ಗೊತ್ತುಗುರಿಯಿಲ್ಲದೆ ಬಿದ್ದಂಬೀಳ ಎತ್ತಲೋ ಓಡುತ್ತಿದೆ. ಕಳೆದುಹೋದ ಹಳೆಯಪಳೆಯ ದಿನಗಳ ನೆನಪಿನ ಡಬ್ಬಿಯ ಮುಚ್ಚಳ ತೆಗೆದಾಗ ಎಷ್ಟೋ ನೋವುಗಳ ಜಂಜಾಟದ ನಡುವೆಯೂ ಬಾಲ್ಯವೆಂಬ ಬದುಕಿನ ಅಮೂಲ್ಯ ಕ್ಷಣಗಳ ಅಪರಂಜಿ ಗಟ್ಟಿ ಸಿಕ್ಕುತ್ತದೆ. ಬಾಲ್ಯದ ನೆನಪುಗಳ ಬೆನ್ನತ್ತಿದಾಗ, ಅಧ್ವಾನಗಳ ಜೊತೆಜೊತೆಗೆ ಅದ್ದೂರಿಯಾದ ಬೆರಗಿನ ಬದುಕು ಕಾಣಿಸುತ್ತದೆ.

ಅಂತಸ್ತು, ಜಾತಿ, ತಟವಟ ಗೊತ್ತಿಲ್ಲದ ಆ ಎಳೆಯ ವಯಸ್ಸಿನಲ್ಲೇ ತಟಸ್ಥವಾಗಿ ನಿಂತುಬಿಡಬೇಕಿತ್ತು ಅನ್ನಿಸಿಬಿಡುತ್ತದೆ. ಗುಮ್ಮಯ್ಯ ಬರುತ್ತಾನೆಂದು ಬೆದರಿಸಿ ತುತ್ತನ್ನು ಬಾಯಿಗೆ ತುರುಕುತ್ತಾ, ಹಠ ಹೆಚ್ಚಾದರೆ ನಾಲ್ಕು ತದುಕುತ್ತಾ ಮುತುವರ್ಜಿಯಿಂದ ಊಟ ಉಣ್ಣಿಸುತ್ತಿದ್ದ ಅವ್ವ, ಕಾಗಕ್ಕ-ಗೂಬಕ್ಕನ ಕಥೆ ಹೇಳಿ ಮಲಗಿಸುತ್ತಿದ್ದಳು. ತಲೆಯ ನೆತ್ತಿಗೆ ಪಚಪಚ ಅಂತ ಹರಳೆಣ್ಣೆಯನ್ನು ಮೆತ್ತಿಬಿಡುತ್ತಿದ್ದಳು. ಇದನ್ನೆಲ್ಲಾ ಈಗ ನೆನೆದರೆ ಮನಸ್ಸು ತಂಪಾಗದೆ ಇದ್ದೀತೆ?

ನಮ್ಮೂರ ಶಾಮಯ್ಯ ಮೇಷ್ಟ್ರು, ನಾನು ಕುಳ್ಳಗಿದ್ದೇನೆಂದು ಸ್ಕೂಲಿಗೆ ಸೇರಿಸಿಕೊಳ್ಳಲು ಮೀನಾಮೇಷ ಎಣಿಸಿ, ಕಡೆಗೊಮ್ಮೆ ನನ್ನ ಬಲಗೈಯನ್ನು  ತಲೆಯ ಮೇಲಿನಿಂದ ಬಳಸಿ ಕಿವಿಗೆ ಕೈಬೆರಳು ಎಟುಕಿಸಿ ಒಂದನೇ ತರಗತಿಗೆ ಸೇರಿಕೊಂಡ ನೆನಪು ಹಸಿಹಸಿಯಾಗಿದೆ. ಗೆಳೆಯನ ಚೋಟುದ್ದದ ಪೆನ್ಸಿಲ… ಕದ್ದಿದ್ದು, ಶಾಲೆಗೆ ಚಕ್ಕರ್‌ ಹಾಕಲು ಹೊಟ್ಟೆನೋವೆಂದು ಯಾಸ ತೆಗೆದಿದ್ದು, ಓರಗೆಯವರೆಲ್ಲಾ ಸೇರಿ ಮರಕೋತಿ ಆಟ ಆಡುವಾಗ ಜಾರಿಬಿದ್ದು ಮೊಣಕೈ ಮೇಲೆ ಆದ ಗಾಯದ ಗುರುತು ಈಗಲೂ ಇದೆ.

ಅಂಗಾಲನ್ನು ಮಣ್ಣಿನಿಂದ ಮುಚ್ಚಿ ಮಣ್ಣಿನಗೂಡು ಮಾಡಿದಾಗ ಹಕ್ಕಿಬಂದು ಕೂತು ಮೊಟ್ಟಯಿಡುತ್ತದೆಂಬ ನನ್ನ ನಂಬಿಕೆ ನಿಜವಾಗಲೇ ಇಲ್ಲ.ದೋಸ್ತಿಗಳೆಲ್ಲಾ ಒಂದೆಡೆ ಸೇರಿ ಅರೆಕಲ್ಲಿನ ಮೇಲೆ ಬೆಂಕಿಹಾಕಿ ಕಾಚಕ್ಕಿಯನ್ನು ಸುಟ್ಟುಕೊಂಡು ತಿಂದು ತೇಗುತ್ತಿದ್ದೆವು. ಹೊಳೆಯಲ್ಲಿ ಕಾಗದದ ದೋಣಿ ಮಾಡಿ ತೇಲಿಬಿಡುತ್ತಿದ್ದೆವು. ವಿಪರೀತ ಹುಳಿಯನ್ನೂ ಲೆಕ್ಕಿಸದೆ ಹುಣಸೆ ಹಣ್ಣನ್ನು ಚೀಪಿ, ರಾತ್ರಿ ಉಪ್ಸಾರಿನ ಅವರೆಕಾಳು ಅಗಿಯಲಾರದೆ ಹಲ್ಲುಗಳೆಲ್ಲಾ ಜುಮ್‌ ಜುಮ್ಮೆಂದು ಮರಗಟ್ಟಿಬಿಡುತ್ತಿದ್ದವು. ಅದೊಂದು ಹಿತಯಾತನೆಯೇ ಸರಿ!

ಗಣೇಶ ಹಬ್ಬದಲ್ಲಿ ರೋಡಿಗೆ ನಿಂತು ಚಂದಾ ವಸೂಲಿ ಮಾಡುತ್ತಿದ್ದ ಚಂದದ ದಿನಗಳವು. ಬಸವಣ್ಣನ ದೇವಸ್ಥಾನದ ಬಾಳೆಹಣ್ಣಿನ ರಸಾಯನವನ್ನು ನೂಕುನುಗ್ಗಲಿಗೆ ಅಂಜದೆ ಕನಿಷ್ಠ ಮೂರ್ನಾಲ್ಕು ಬಾರಿ ಯಾಮಾರಿಸಿ ಲಪಟಾಯಿಸಿತ್ತಿದ್ದದ್ದು, ಆಯುಧ ಪೂಜೆಯಲ್ಲಿ ಧೊಪ್ಪನೇ ಕುಕ್ಕುವ ಬೂದುಗುಂಬಳ ಕಾಯಿಯೊಳಗಿನ ಚಿಲ್ಲರೆ ಕಾಸಿಗೆ ಪೈಪೋಟಿ ಬೀಳುತ್ತಿದ್ದುದ್ದೆಲ್ಲಾ ಈಗ ಇತಿಹಾಸ.

ಚಿನ್ನಿದಾಂಡು, ಲಗೋರಿ, ಗೋಲಿ ಗೆಜ್ಜಗ ಆಡಿಕೊಂಡು ಅಪಾಪೋಲಿಯಂತೆ ಅಲೆದಾಡುತ್ತಾ ಕತ್ತಲಾದರೂ ಮನೆ ಸೇರದೆ ಇದ್ದಾಗ, ಊರನ್ನೆಲ್ಲಾ ಅಡ್ಡಬಳಸಿ ಅಟ್ಟಾಡಿಸಿಕೊಂಡು ಅಪ್ಪ ಕೊಟ್ಟ ರಪರಪ ಏಟಿನ ರುಚಿ ನನ್ನೊಬ್ಬನಿಗೆ ಮಾತ್ರ ಗೊತ್ತು. ಪುಸ್ತಕದಲ್ಲಿಟ್ಟ ನವಿಲುಗರಿ ಮರಿ ಹಾಕುತ್ತದೆಂದು ಪೆನ್ಸಿಲ್ ಒರೆದು ಅದಕ್ಕೆ ದಿನನಿತ್ಯ ಊಟ ಹಾಕುತ್ತಾ ಮರಿಗಾಗಿ ಕಾದು ಕಾದು ಬೆಪ್ಪನಾಗಿದ್ದೆ.

ಯಕ್ಕದಗಿಡದ ಮೊಗ್ಗುಗಳನ್ನು ಟಪ್‌ ಟಪ್‌ ಅನ್ನಿಸುತ್ತಾ ಪಾಸು ಫೇಲಿನ ರಿಸಲ್ಟಾಗಳನ್ನು ಪತ್ತೆಮಾಡುವ ಕಲೆಗಳೆಲ್ಲಾ ಗೊತ್ತಿತ್ತು. ಮಗ್ಗಿ ಹೇಳದಿದ್ದಾಗ ಕೋಣ ಬಗ್ಗಿಸಿ ಕುಂಡಿಗೆ ನಾಲ್ಕು ಬಿಗಿದು ಬದುಕ ತಿದ್ದಿ ಹದಗೊಳಿಸಿದ ದುಂಡು ಮಾದಯ್ಯ ಮಾಸ್ತರರು ಬಾಲ್ಯ ಅಂದಕೂಡಲೇ ನೆನಪಾಗದೆ ಇರಲಾರರು. “ಪೀಂ ಪೀಂ’ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಅರ್ಧಂಬರ್ಧ ಬರೆದಿದ್ದ ನೋಟುಬುಕ್ಕುಗಳೆಲ್ಲಾ ಐಸ್‌ಕ್ಯಾಂಡಿ ಆಸೆಗೆ ರದ್ದಿಯಾಗಿಬಿಡುತ್ತಿದ್ದವು.

ಊರಿಗಿದ್ದ ಒಂದೇ ಟಿ.ವಿಯ ಮುಂದೆ ಎಲ್ಲರ ಠಿಕಾಣಿ ಇರುತ್ತಿತ್ತು. ಚಲನಚಿತ್ರದಲ್ಲಿ ಫೈಟಿಂಗ್‌ ಸೀನುಗಳಿದ್ದರೆ ಲೋಕವನ್ನೇ ಮರೆತುಬಿಡುತ್ತಿದ್ದೆವು. ಶುಕ್ರವಾರದ ಚಿತ್ರಮಂಜರಿ, ಶನಿವಾರದಂದು ಬುಗುರಿಯಂತೆ ತಿರುಗಿ ಪುರ್ರನೇ ಹಾರುವ ಶಕ್ತಿಮಾನ್‌ನನ್ನು ಮಿಸ್‌ ಮಾಡುತ್ತಲೇ ಇರಲಿಲ್ಲ. ಕೊನೆಯ ಉಸಿರಿರೋವರೆಗೂ ಮನದಲ್ಲಿ ಪಿಸಪಿಸ ಸದ್ದು ಮಾಡುತ್ತಾ ಮುದಗೊಳಿಸುವ ಬೆಲೆಕಟ್ಟಲಾಗದ ಈ ಬಂಗಾರದ ಬಾಲ್ಯದ ನೆನಪುಗಳಿಗೆ ಸಾಷ್ಟಾಂಗ ನಮಸ್ಕಾರಗಳು..

* ಹೃದಯರವಿ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.