ಕಲ್ಲಂಗಡಿ ಬೆಳೆಗೆ ಆಧುನಿಕ ಕೃಷಿ ಪದ್ಧತಿ ಬಳಸಿ ಲಾಭ ಪಡೆದ ಕೃಷಿಕ
Team Udayavani, Apr 18, 2018, 6:00 AM IST
ಹೆಬ್ರಿ: ಬಿಸಿಲ ಬೇಗೆಗೆ ಮೊದಲ ಆಯ್ಕೆ ಕಲ್ಲಂಗಡಿ ಹಣ್ಣು. ಸಾಕಷ್ಟು ಬೇಡಿಕೆಯೂ ಇದೆ. ಕಲ್ಲಂಗಡಿಯನ್ನು ಆಧುನಿಕ ಕೃಷಿ ಪದ್ಧತಿಯಲ್ಲಿ ಬೆಳೆದು ಬಂಪರ್ ಬೆಳೆ ತೆಗೆದ ಸಾಧನೆ ಉಡುಪಿ ತಾಲೂಕಿನ ಹಿರಿಯಡಕದ ಬೊಮ್ಮರಬೆಟ್ಟಿನ ಕೃಷಿಕ ಸುರೇಶ್ ನಾಯಕ್‌ರದ್ದು.
ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಸುರೇಶ್ ಹಿರಿಯಡಕದಿಂದ ಹರಿಖಂಡಿಗೆಗೆ ಹೋಗುವ ರಸ್ತೆಯ ಸಮೀಪ ಮಾಣೈ ಎಂಬಲ್ಲಿ ಸುಮಾರು 5 ಎಕ್ರೆ ಗದ್ದೆಯಲ್ಲಿ ಕಳೆದ 6ವರ್ಷಗಳಿಂದ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದಾರೆ. ಈ ಬಾರಿ ಆಧುನಿಕ ಪದ್ಧತಿ ಮೂಲಕ ಫಸಲು ಪಡೆದಿದ್ದಾರೆ.
ಇಸ್ರೇಲ್‌ನ ತಂತ್ರಜ್ಞಾನ
ಜನವರಿಯಲ್ಲಿ ಚಿಕ್ಕಮಗಳೂರಿನ ಕಡೂರಿನಿಂದ ಕಲ್ಲಂಗಡಿ ಬೀಜ ತಂದು ಬಿತ್ತನೆ ಮಾಡಿದ್ದರು. ಬಳಿಕ ಗದ್ದೆಯಲ್ಲಿ ಇರುವ ಕ್ರಿಮಿ ಕೀಟಗಳು, ನವಿಲುಗಳಿಂದ, ಸೂರ್ಯನ ಶಾಖದಿಂದ ತೊಂದರೆ ಆಗದಂತೆ ಇಸ್ರೇಲ್‌ನ ಗ್ರೋ ಕವರ್ ತಂತ್ರಜ್ಞಾನ ಬಳಸಿ ಯಶಸ್ಸನ್ನು ಕಂಡಿದ್ದಾರೆ. ಇದರಿಂದ ಹಣ್ಣುಗಳಿಗೆ ಹಾನಿಯಾಗಿಲ್ಲ. ಕಲ್ಲಂಗಡಿ ಹಣ್ಣಿನ ಗಿಡಗಳಿಗೆ ಕಾಲ ಕಾಲಕ್ಕೆ ಕ್ರಿಮಿನಾಶಕಗಳನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಿದ್ದು ಅಗತ್ಯಕ್ಕೆ ತಕ್ಕಷ್ಟು ನೀರನ್ನೂ ಆಧುನಿಕ ಪದ್ಧತಿಯಲ್ಲೇ ನೀಡಿದ್ದಾರೆ.
ಆಧುನಿಕ ಯಂತ್ರ ಬಳಕೆ
ಕೂಲಿಯಾಳುಗಳ ಸಮಸ್ಯೆಯನ್ನು ಸುರೇಶ್ ಅವರೂ ವ್ಯಾಪಕವಾಗಿ ಎದುರಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಅವರು ಹಿಂದಿನಿಂದಲೂ ಆಧುನಿಕ ಯಂತ್ರಗಳನ್ನು ಕೃಷಿಗೆ ಬಳಸುತ್ತಾರೆ. ಕಳೆದ ಬಾರಿ ಭತ್ತದ ನಾಟಿಯನ್ನು ಟ್ರೇ ವಿಧಾನದಲ್ಲಿ ಮಾಡಿದ್ದು ಕೃಷಿಕರ ಗಮನ ಸೆಳೆದಿದ್ದರು. ಈಗಲೂ ಅವರು ಯಂತ್ರೋಪಕರಣಗಳು, ಆಧುನಿಕ ಕೃಷಿ ವಿಧಾನಗಳನ್ನು ನೆಚ್ಚಿಕೊಂಡಿದ್ದು, ಹೆಚ್ಚಿನ ಲಾಭ ಪಡೆಯಲು ಕಾರಣವಾಗಿದೆ.
ಎಕರೆಗೆ 40 ಸಾವಿರ ರೂ. ಲಾಭ
ಕಟಾವಿಗೆ ಬಂದ ಕೆಲವೊಂದು ಹಣ್ಣುಗಳು 15 ಕೆ.ಜಿ ಗೂ ಅಧಿಕ ತೂಕ ಹೊಂದಿದೆ. ಸುಮಾರು 5 ಎಕ್ರೆ ಜಾಗದಲ್ಲಿ ಬೆಳೆ ಬೆಳೆದಿದ್ದು, ಎಕ್ರೆ ಒಂದಕ್ಕೆ ಸುಮಾರು 40 ಸಾವಿರ ರೂ.ವರೆಗೆ ಲಾಭ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಕೆ.ಜಿಗೆ ಸುಮಾರು 20 ರೂ ಇದ್ದು, ಮಧ್ಯವರ್ತಿಗಳ ಮೂಲಕ ಜಿಲ್ಲೆಯ ವಿವಿಧ ಮಾರುಕಟ್ಟೆಗೆ ಹಾಗೂ ದೂರದ ಕೇರಳ ಹಾಗೂ ಮುಂಬೈ ನಗರಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಲ್ಲಂಗಡಿಯೊಂದಿಗೆ ಮುಳ್ಳುಸೌತೆ ಹಾಗೂ ಇತರ ತರಕಾರಿಗಳನ್ನೂ ಬೆಳೆದಿದ್ದು, ಉತ್ತಮ ಫಸಲು ಬಂದಿದೆ.
ಉತ್ತಮ ಲಾಭ ಬಂದಿದೆ
ಪ್ರತಿಯೊಬ್ಬರು ಕೂಡ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಾವುದೇ ನಷ್ಟವಾಗದಂತೆ ಕಲ್ಲಂಗಡಿ ಹಣ್ಣನ್ನು ಬೆಳೆಯಬಹುದು. ಈ ಬಾರಿ ಹೊಸ ಮಾದರಿಯ ತಂತ್ರಜ್ಞಾನದಿಂದ ನನಗೆ ಉತ್ತಮ ಫಸಲಿನೊಂದಿಗೆ ಹೆಚ್ಚಿನ ಲಾಭಬಂದಿದೆ.
– ಸುರೇಶ್ ನಾಯಕ್,
ಕೃಷಿಕರು, ಬೊಮ್ಮರಬೆಟ್ಟು
– ಉದಯ ಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.