ಕೃಷಿಕರು, ಬಡವರಿಗೆ ಆದ್ಯತೆ ಕಡಿಮೆಯಾಗುತ್ತಿದೆ
Team Udayavani, Apr 18, 2018, 9:30 AM IST
1983ರ ತನಕ ಸಿಪಿಐಎಂ ಪ್ರಾಬಲ್ಯ ಇದ್ದ ಉಳ್ಳಾಲ ಕ್ಷೇತ್ರ ಬಳಿಕ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ 1994ರ ಚುನಾವಣೆ ಉಳ್ಳಾಲದ ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿತು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿಯ ಜಯರಾಮ ಶೆಟ್ಟಿ ಶಾಸಕರಾದರು. ಈ ಸಂದರ್ಭದಲ್ಲಿ ಅಂದು ಕಾಂಗ್ರೆಸ್ ಮುಖಂಡರಾಗಿದ್ದ ಚಂದಪ್ಪ ಉಳ್ಳಾಲ ಅವರ ಪುತ್ರ ದಿನಕರ ಉಳ್ಳಾಲ ಪಕ್ಷೇತರರಾಗಿ ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಿ ಸೋತು ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದರು. ಮಾತಿನ ಮತದಲ್ಲಿ ಅವರು…
ಅಂದು ಸೋಲಿಗೆ ಕಾರಣವೇನು?
– ಸೋಲು ನಿರೀಕ್ಷಿತವಾಗಿತ್ತು. ಆದರೆ ಪಕ್ಷೇತರನಾಗಿ ಅತ್ಯಧಿಕ ಮತ ಗಳಿಸಿದ್ದು ಬಳಿಕ ಯಾವುದೇ ಪಕ್ಷೇತರ ಅಭ್ಯರ್ಥಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಮತ ಗಳಿಸಿಲ್ಲ.
ಈ ಬಾರಿ ನಿಮ್ಮ ರಾಜಕೀಯ ಲೆಕ್ಕಾಚಾರ ಹೇಗೆ ?
– ಅಂದಿನ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಬಳಿಕ ಉಳ್ಳಾಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ , ಪುರಸಭೆಯ ಅಧ್ಯಕ್ಷನಾಗಿ ಪಕ್ಷದಲ್ಲಿ ಜಿಲ್ಲಾ ಮಟ್ಟದ ಜವಾಬ್ದಾರಿ ನಿರ್ವಹಿಸಿದ್ದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಸೌಹಾರ್ದ ವಾತಾವರಣ ಇಲ್ಲಿಲ್ಲ ಮತ್ತು ಕೃಷಿಕರಿಗೆ ಮತ್ತು ಬಡವರಿಗೆ ಹೆಚ್ಚಿನ ಆದ್ಯತೆ ಲಭಿಸದಿರುವುದರಿಂದ ಕಳೆದ ಐದು ವರ್ಷಗಳಿಂದ ರಾಜಕೀಯದಿಂದ ದೂರವಿದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
ಈ ಬಾರಿ ಸ್ಪರ್ಧಾಕಾಂಕ್ಷಿಯಾಗಿದ್ದಿರಾ ?
– ತಮ್ಮ ಪಕ್ಷ ಸೇರುವಂತೆ ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ ಈ ಬಾರಿ ಜಾತ್ಯತೀತ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೇನೆ.
ನಿಮ್ಮ ಪ್ರಕಾರ ರಾಜ್ಯ ಮತ್ತು ಕ್ಷೇತ್ರದಲ್ಲಿ ಈ ಬಾರಿಯ ಫಲಿತಾಂಶ ಹೇಗಿರಬಹುದು?
– ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯೇ ಹೆಚ್ಚು. ಕ್ಷೇತ್ರದಲ್ಲಿಯೂ ಈ ಬಾರಿ ಕಠಿನ ಸವಾಲುಗಳಿದ್ದು, ಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಯನ್ನು ಹೊಂದಿಕೊಂಡು ಫಲಿತಾಂಶದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಹಿಂದಿನ ಚುನಾವಣಾ ಪ್ರಚಾರಕ್ಕೂ ಈಗಿನ ಪ್ರಚಾರ ವೈಖರಿಗೂ ವ್ಯತ್ಯಾಸ ?
– ಹಿಂದೆ ಅಬ್ಬರದ ಪ್ರಚಾರವಿತ್ತು. ಹಣಕಾಸಿನ ವಿಚಾರ ಇರಲಿಲ್ಲ; ನೈಜ ಕಾರ್ಯಕರ್ತರಿದ್ದರು. ಈಗ ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ಚುನಾವಣೆ ಪ್ರಚಾರಗಳಾಗುತ್ತಿವೆ. ಚುನಾವಣಾ ನೀತಿಸಂಹಿತೆಯಿಂದ ಅಬ್ಬರಕ್ಕೆ ತೆರೆ ಬಿದ್ದಿದ್ದು, ಹಣಕ್ಕೆ ಪ್ರಾಮುಖ್ಯತೆ ಬಂದಿದೆ.
– ದಿನಕರ ಉಳ್ಳಾಲ, ಉಳ್ಳಾಲ ಕ್ಷೇತ್ರದಲ್ಲಿ 1994ರಲ್ಲಿ ಪಕ್ಷೇತರ ಪರಾಜಿತ ಅಭ್ಯರ್ಥಿ
— ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.