ಇಂದು ಮಹಾಲಿಂಗೇಶ್ವರ ದೇವರಿಗೆ ಅವಭೃಥ ಸ್ನಾನ
Team Udayavani, Apr 18, 2018, 6:30 AM IST
ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಎ. 18ರಂದು ಸಂಜೆ ಶ್ರೀ ದೇವರ ಅವಭೃಥ ಸವಾರಿಯು 13 ಕಿ.ಮೀ. ದೂರವಿರುವ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ತೆರಳಲಿದೆ. ತುಳುವಿನಲ್ಲಿ ಪುತ್ತೂರ್ದ ಉಳ್ಳಾಯನ ಜಳಕದ ಸವಾರಿ ಎಂದು ಕರೆಸಿಕೊಳ್ಳುವ ಅವಭೃಥ ಸವಾರಿಯಲ್ಲಿ ದೇವರು ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ. 19ರಂದು ಮುಂಜಾನೆ 6 ಗಂಟೆಗೆ ವೀರಮಂಗಲ ನದಿ ತಟಕ್ಕೆ ತಲುಪುತ್ತಾರೆ. ಅಲ್ಲಿ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ಶ್ರೀ ದೇವರು ದೇವಾಲಯಕ್ಕೆ ತಲುಪಿ ಧ್ವಜಾವರೋಹಣ ನಡೆಯುತ್ತದೆ.
ಪುತ್ತೂರು ಮಹಾಲಿಂಗೇಶ್ವರ ದೇವರು ವಾರ್ಷಿಕ ಜಾತ್ರೆಯ ಅವಭೃಥ ಸ್ನಾನಕ್ಕಾಗಿ ಪೇಟೆ ಸವಾರಿಯ ಮೂಲಕ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಂಭ್ರಮದಿಂದ ತೆರಳುವುದು ಸಂಪ್ರದಾಯ. ಅವಭೃಥ ಸ್ನಾನದ ಬಳಿಕವೇ ನದಿಯ ನೀರು ತೀರ್ಥವಾಗುತ್ತದೆ. ಬಳಿಕ ಭಕ್ತರು ಸ್ನಾನ ಮಾಡಿದರೆ ಪಾಪನಾಶವಾಗಿ ಸತ್ಫಲ ಸಿಗುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಪುತ್ತೂರಿನಿಂದ ವೀರಮಂಗಲಕ್ಕೆ ಬರುವ ದೇವರು ನದಿ ತಟದ ಕಟ್ಟೆಯಲ್ಲಿ ಪೂಜೆ ಪಡೆದು ಜಳಕ ಸೇವೆಗೆ ಇಳಿಯುತ್ತಾರೆ. ಪೂಜಾ ವಿಧಿ ಮುಗಿಸಿ ನಿರ್ಗಮನ.
ಪ್ರಸಿದ್ಧಿ ಪಡೆದ ಕ್ಷೇತ್ರ ವೀರಮಂಗಲ
ಪುತ್ತೂರು ಪೇಟೆಯಿಂದ 15 ಕಿ.ಮೀ. ದೂರದಲ್ಲಿರುವ ವೀರಮಂಗಲ ಕ್ಷೇತ್ರ ಮಹಾಲಿಂಗೇಶ್ವರ ದೇವರಿಂದಾಗಿ ಲೋಕಮಾನ್ಯವಾಗಿದೆ. ಪ್ರತಿ ವರ್ಷ ಜಾತ್ರೆಯ ಕೊನೆಯಲ್ಲಿ ಎ. 18ರಂದು ಸಂಜೆ ದೇವಸ್ಥಾನದಿಂದ ಅವಭೃಥ ಸ್ನಾನಕ್ಕೆ ದೇವರ ಸವಾರಿ ಹೊರಡುತ್ತದೆ. ಸಾಲು ಸಾಲು ಕಟ್ಟೆಪೂಜೆ ಸ್ವೀಕರಿಸುತ್ತಾ ಮರುದಿನ ಮುಂಜಾನೆ 6 ಗಂಟೆಯ ಹೊತ್ತಿಗೆ ವೀರಮಂಗಲ ನದಿ ತಟ ತಲುಪುತ್ತಾರೆ. ಸಾವಿರಾರು ಭಕ್ತರೂ ಆಗಮಿಸುತ್ತಾರೆ. ದೇವರ ಜಳಕದ ಮಳಿಕ ತಾವೂ ಪುಣ್ಯಸ್ನಾನ ಮಾಡಲು ಮುಗಿ ಬೀಳುತ್ತಾರೆ.
ಮುಳುಗು ತಜ್ಞರ ನಿಯೋಜನೆ
ನದಿಯಲ್ಲಿ ನೀರು ಕಡಿಮೆಯಿದ್ದು, ಕೆಲವು ಕಡೆ ಹೊಂಡಗಳಲ್ಲಿ ಮಾತ್ರ ನೀರು ಇದೆ. ದೇವರ ಜಳಕದ ಗುಂಡಿಯಲ್ಲೂ ತಾತ್ಕಾಲಿಕವಾಗಿ ನೀರು ಸಂಗ್ರಹಿಸಲಾಗಿದೆ. ಮೇಲ್ಭಾಗದಲ್ಲಿ ಅಪಾಯಕಾರಿ ಸುಳಿ ಇರುವ ಹೊಂಡಗಳಿದ್ದು, ಇಲ್ಲಿ ಹೇರಳ ನೀರೂ ಇದೆ. ಇವಕ್ಕೆ ಇಳಿದರೆ ನುರಿತ ಈಜುಪಟುಗಳಿಗೂ ನಿಯಂತ್ರಣ ತಪ್ಪುತ್ತದೆ. ಇಲ್ಲಿ ಪೊಲೀಸರು ನಿರಂತರವಾಗಿ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ. 2014ರಲ್ಲಿ ದೇವರ ಅವಭೃಥ ಸ್ನಾನದ ಸಂದರ್ಭ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಈ ಸಲ ಅಲ್ಲಿ ಐವರು ಮುಳುಗು ತಜ್ಞರನ್ನೂ ನಿಯೋಜಿಸಲಾಗಿದೆ.
ಸಣ್ಣ ರಥೋತ್ಸವ, ಕೆರೆ ಉತ್ಸವ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆ ಪ್ರಯುಕ್ತ ಸೋಮವಾರ ಸಂಜೆ ದೇವಾಲಯದ ಒಳಾಂಗಣದಲ್ಲಿ ದೇವರ ದೀಪ ಬಲಿ ಉತ್ಸವ, ರಾತ್ರಿ ಉತ್ಸವ ಬಲಿ ನಡೆಯಿತು. ಪೂರ್ವ ಶಿಷ್ಟ ಸಂಪ್ರದಾಯದಂತೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ಶ್ರೀ ದೇವಳಕ್ಕೆ ಆಗಮಿಸಿದ ಬಳಿಕ ತಡರಾತ್ರಿ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವವು ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಮಲ್ಲಿಗೆ ಸಮರ್ಪಣೆ
ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸಿದ ಸಂದರ್ಭದಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಣೆ ಮಾಡಿದರು.
ಇಂದು ತುಲಾಭಾರ
ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಎ. 18ರಂದು ಬೆಳಗ್ಗೆ ಬಾಗಿಲು ತೆಗೆಯುವ ಮುಹೂರ್ತ, ತುಲಾಭಾರ ಸೇವೆ ನಡೆಯುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಭಕ್ತರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಹರಕೆಯ ತುಲಾಭಾರ ಸಲ್ಲಿಸಬಹುದು. ಬಾಳೆಕಾಯಿ, ಸಕ್ಕರೆ, ಬೆಲ್ಲ, ಅಕ್ಕಿ, ತೆಂಗಿನಕಾಯಿಯ ತುಲಾಭಾರ ಸೇವೆ ನಡೆಯುತ್ತದೆ.
ಇಂದು ‘ಬುಡ್ತು ಪಾಡೊಡಿc ‘ ಪ್ರದರ್ಶನ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಎ. 18ರಂದು ರಾತ್ರಿ ಗದ್ದೆಯಲ್ಲಿ ಸ್ನೇಹ ಕಲಾವಿದರು ಪುಣಚ ಅಭಿನಯಿಸುವ ‘ಬುಡ್ತು ಪಾಡೊಡಿc’ ನಾಟಕ ಪ್ರದರ್ಶನವಿದೆ. ನಾಟಕವನ್ನು ರವಿಶಂಕರ ಶಾಸ್ತ್ರಿ ಮಣಿಲ ಬರೆದು ನಿರ್ದೇಶಿಸಿದ್ದು, ಕಾರ್ತಿಕ್ ಸಿ. ಮಣಿಲ ಸಂಗೀತ, ಹರೀಶ್ ಪುಣಚ ಮತ್ತು ಯೋಗೀಶ್ ನೀರಮಜಲು ಧ್ವನಿ ಮತ್ತು ಬೆಳಕು, ಸ್ನೇಹ ಕಲಾ ಆರ್ಟ್ಸ್ನ ಲೋಹಿತ್ ಪುಣಚ ವರ್ಣಾಲಂಕಾರವಿದೆ. ಪುಣಚ ಸ್ನೇಹ ಕಲಾವಿದರು ಅಭಿನಯಿಸಲಿದ್ದಾರೆ ಎಂದು ನಿರ್ವಹಣೆ ನೋಡಿಕೊಳ್ಳುತ್ತಿರುವ ಹರ್ಷ ಎ.ಎಸ್. ಪುಣಚ ತಿಳಿಸಿದ್ದಾರೆ.
ಮ್ಯೂಸಿಕಲ್ ನೈಟ್
ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿಯ ಹಿನ್ನೆಲೆಯಲ್ಲಿ ಎ. 18ರಂದು ಸಂಜೆ ಆ್ಯಕ್ಷನ್ ಫ್ರೆಂಡ್ಸ್ ಪುತ್ತೂರು ವತಿಯಿಂದ ಮ್ಯೂಸಿಕಲ್ ನೈಟ್ ಪುತ್ತೂರು ಕಲೋತ್ಸವ ದರ್ಬೆಯಲ್ಲಿ ನಡೆಯಲಿದೆ ಎಂದು ಸಂಯೋಜಕ ಸಹಜ್ ರೈ ತಿಳಿಸಿದ್ದಾರೆ.
ಉತ್ತಮ ವ್ಯವಸ್ಥೆ
ದೇವರು ವೀರಮಂಗಲ ನದಿಗೆ ಅವಭೃಥಕ್ಕೆ ಬರುವ ಸಂದರ್ಭ ಯುವಕ ಮಂಡಲಗಳು ಹಾಗೂ ಸಮಿತಿಗಳು ಸೇರಿಕೊಂಡು ಉತ್ತಮ ವ್ಯವಸ್ಥೆ ಮಾಡುತ್ತಿದ್ದಾರೆ. ದೇವರ ಅವಭೃಥ ಸವಾರಿಯ ಜತೆ ವೀರಮಂಗಲಕ್ಕೆ ಬರುವ ಭಕ್ತರು ದೇವರ ಜಳಕವಾಗದೆ ನೀರಿಗೆ ಇಳಿಯಬಾರದು. ಕುಮಾರಧಾರಾ ನದಿಯ ಇತರ ಕಡೆಗಳಲ್ಲಿ ಸುಳಿಗಳು ಇರುವುದರಿಂದ ಜಳಕದ ಸ್ಥಳ ಹೊರತುಪಡಿಸಿ ಬೇರೆ ಕಡೆ ಸ್ನಾನಕ್ಕೆ ಇಳಿಯುವ ಸಾಹಸ ಮಾಡಬಾರದು.
– ಸುಧಾಕರ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಪೊಲೀಸರೊಂದಿಗೆ ಸಹಕರಿಸಿ
ದೇವರ ಜಳಕ ನಡೆಯುವ ವೀರಮಂಗಲದ ಕುಮಾರಧಾರಾ ನದಿ ಸಮೀಪ ಎ. 18ರ ರಾತ್ರಿಯಿಂದಲೇ ಪೊಲೀಸ್ ಸರ್ಪಗಾವಲು ಹಾಕಲಾಗುವುದು. ದೇವರು ಅಲ್ಲಿಗೆ ತಲುಪುವುದು ಮುಂಜಾನೆ. ಅಲ್ಲಲ್ಲಿ ಕಟ್ಟೆಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವ ಕಾರಣ ಜನ ಜಂಗುಳಿ ಇರುತ್ತದೆ. ಬೆಳಕಿನ ವ್ಯವಸ್ಥೆ ಕಲ್ಪಿಸಿ, ಅಗತ್ಯವೆನಿಸಿದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು. ಅಗ್ನಿಶಾಮಕ ದಳ, ಮುಳುಗು ತಜ್ಞರ ನಿಯೋಜನೆ ಆಗಿದೆ. ಭಕ್ತರು ಸಹಕರಿಸಬೇಕು.
– ಶರಣೇಗೌಡ, ನಗರ ಪೊಲೀಸ್ ಸಿಪಿಐ
ಎ. 16ರಂದು ರಾತ್ರಿ ಶ್ರೀ ದೇವರ ಸಣ್ಣರಥೋತ್ಸವವು ಚೆಂಡೆ ಮೇಳದ ಮೆರುಗಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಉತ್ಸವದೊಂದಿಗೆ ನಡೆಯಿತು.
ಶ್ರೀ ದೇವರ ಕೆರೆ ಅಯನ.
ಮಹಾಲಿಂಗೇಶ್ವರ ದೇವರ ಬಲಿ ಉತ್ಸವ ಮಂಗಳವಾರ ನಡೆಯಿತು.
ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು.
ರಾತ್ರಿ ದೇವಾಲಯದಲ್ಲಿ ಸೇರಿದ ಜನಸ್ತೋಮ.
ಸಣ್ಣ ರಥೋತ್ಸವ ಸೋಮವಾರ ರಾತ್ರಿ ನೆರವೇರಿತು.
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಅಂಗವಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಮಂಗಳವಾರ ದೇವಾಲಯಕ್ಕೆ ಆಗಮಿಸಿದರು.
ಶ್ರೀ ಮಹಾಲಿಂಗೇಶ್ವರ ದೇವರ ಪಲ್ಲಕಿ ಉತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ಪೂರ್ವಭಾವಿಯಾಗಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಮುಂಜಾನೆ ಬ್ರಹ್ಮರಥಕ್ಕೆ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.
—ಚಿತ್ರ: ಜೀತ್, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.