ಒಂದೇ ಬಾರಿ ಚುನಾವಣೆಗೆ 2 ತಿದ್ದುಪಡಿಬೇಕು

Team Udayavani, Apr 18, 2018, 10:40 AM IST

Election-Symbol-650.jpg

ಹೊಸದಿಲ್ಲಿ: ಸಂವಿಧಾನದ ಕನಿಷ್ಠ ಎರಡು ನಿಬಂಧನೆಗಳಿಗೆ ತಿದ್ದುಪಡಿ ತಂದು, ಅದಕ್ಕೆ ರಾಜ್ಯಗಳು ಸಮ್ಮತಿ ನೀಡಿದರೆ, 2019ರ ಆರಂಭದಲ್ಲೇ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಬಹುದು ಎಂದು ಕಾನೂನು ಆಯೋಗ ಹೇಳಿದೆ. ಜನಪ್ರತಿನಿಧಿ ಕಾಯ್ದೆಯ ಕೆಲವು ನಿಬಂಧನೆಗಳಿಗೂ ಸಂಸತ್‌ನಲ್ಲಿ ಸರಳ ಬಹುಮತದೊಂದಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದೂ ಆಯೋಗ ತಿಳಿಸಿದೆ.

ಈ ಕುರಿತು ತಯಾರಿಸಿದ ಟಿಪ್ಪಣಿಯನ್ನು ಮಂಗಳವಾರ ಸಾರ್ವಜನಿಕ ವೇದಿಕೆಯಲ್ಲಿಟ್ಟಿರುವ ಆಯೋಗ, ವರದಿಯನ್ನು ಅಂತಿಮಗೊಳಿಸುವ ಮುನ್ನ ಸಂವಿಧಾನ ತಜ್ಞರು, ರಾಜಕೀಯ ಪಕ್ಷಗಳು ಹಾಗೂ ಸಂಬಂಧಿಸಿದ ಇತರರ ಅಭಿಪ್ರಾಯವನ್ನು ಕೋರಿದೆ. ಮೇ 8ರೊಳಗೆ ಇವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಹೇಳಿದೆ. ಆಯೋಗದ ಟಿಪ್ಪಣಿಯಂತೆ, ಏಕಕಾಲದ ಚುನಾವಣೆ 2 ಹಂತಗಳಲ್ಲಿ ನಡೆಯಲಿದ್ದು, 2ನೇ ಹಂತ 2024ರಲ್ಲಿ ನಡೆಯಲಿದೆ.

ಎರಡು ತಿದ್ದುಪಡಿ: ಲೋಕಸಭೆ ಮತ್ತು ವಿಧಾನಸಭೆಗಳ ಅವಧಿಗೆ ಸಂಬಂಧಿಸಿದ ಸಂವಿಧಾನದ 83(2)ನೇ ವಿಧಿ ಮತ್ತು 172(1)ನೇ ವಿಧಿ ಹಾಗೂ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಕಾನೂನು ಆಯೋಗ ಇಟ್ಟಿದೆ. ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಉದ್ದೇಶವೂ ಇದರಲ್ಲಿ ಸೇರಿದೆ. ಒಂದು ವೇಳೆ ಸರಕಾರವು ಅವಧಿ ಮಧ್ಯೆಯೇ ಉರುಳಿದರೆ, ಅನಂತರ ಬರುವ ಹೊಸ ಸರಕಾರವು ಉಳಿದ ಅವಧಿಯವರೆಗಷ್ಟೇ ಕಾರ್ಯನಿರ್ವಹಿಸಬೇಕೇ ಹೊರತು, ಹೊಸದಾಗಿ 5 ವರ್ಷ ಆಡಳಿತ ನಡೆಸುವಂತಿಲ್ಲ ಎಂದೂ ಆಯೋಗದ ಟಿಪ್ಪಣಿಯಲ್ಲಿ ಹೇಳಲಾಗಿದೆ.

ಯಾವ ರಾಜ್ಯಗಳಿಗೆ ಯಾವಾಗ ಚುನಾವಣೆ?: ಮೊದಲ ಹಂತದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ, ಉತ್ತರಪ್ರದೇಶ, ಗುಜರಾತ್‌, ಕರ್ನಾಟಕ, ದಿಲ್ಲಿ ಮತ್ತು ಪಂಜಾಬ್‌ ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿವೆ. 2ನೇ ಹಂತದಲ್ಲಿ ಚುನಾವಣೆ ಎದುರಿಸುವ ರಾಜ್ಯಗಳ ವಿಧಾನಸಭೆ ಅವಧಿಯನ್ನು ವಿಸ್ತರಿಸಬೇಕಾಗುತ್ತದೆ ಎಂದೂ ಆಯೋಗದ ಟಿಪ್ಪಣಿ ಹೇಳಿದೆ.

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.