ಶಿವಣ್ಣ ರುಸ್ತುಂಗಾಗಿ ವಿಲನ್ ಹುಡುಕಾಟ
Team Udayavani, Apr 18, 2018, 10:59 AM IST
ಶಿವರಾಜಕುಮಾರ್ ಅವರ “ರುಸ್ತುಂ’ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಫೋಟೋಶೂಟ್ ನಡೆದಿರುವುದು ನಿಮಗೆ ಗೊತ್ತೇ ಇದೆ. ಚಿತ್ರದ ಮುಹೂರ್ತ ಏಪ್ರಿಲ್ 24ರಂದು ನಡೆಯಲಿದೆ. ಶಿವರಾಜಕುಮಾರ್ ಜೊತೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಮಯೂರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್‌ನ ಖ್ಯಾತ ನಟರೊಬ್ಬರನ್ನು ಕರೆತರುವ ಆಲೋಚನೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.
ಸಂಜಯ್ ದತ್, ಅನಿಲ್ ಕಪೂರ್, ಸುನೀಲ್ ಶೆಟ್ಟಿ ಹಾಗೂ ಮನೋಜ್ ಬಾಜ್‌ಪೇಯಿ ಅವರಲ್ಲಿ ಒಬ್ಬರನ್ನು “ರುಸ್ತುಂ’ಗೆ ಕರೆತರುವ ಯೋಚನೆ ಇದೆ ಎಂದಿತ್ತು ಚಿತ್ರತಂಡ. ಆದರೆ, ಯಾರು ಮಾಡುತ್ತಾರೆಂಬುದು ಇನ್ನೂ ಅಂತಿಮವಾಗಿಲ್ಲ. ಚಿತ್ರತಂಡ ಈಗ ಕೇವಲ ಬಾಲಿವುಡ್ ಅಷ್ಟೇ ಅಲ್ಲದೇ, ತಮಿಳು, ತೆಲುಗಿನ ಖ್ಯಾತ ನಟರುಗಳ ಬಗ್ಗೆಯೂ ಗಮನಹರಿಸಿದ್ದು, ಸದ್ಯದಲ್ಲೇ ಅಂತಿಮವಾಗಲಿದೆಯಂತೆ.
“ಚಿತ್ರದಲ್ಲಿ ಶಿವಣ್ಣ ಎದುರು ನಿಲ್ಲುವ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಅದಕ್ಕಾಗಿ ನಟರ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಹಿಂದಿ, ತೆಲುಗು ಹಾಗೂ ತಮಿಳಿನ ಕೆಲವು ಪ್ರಮುಖ ನಟರ ಜೊತೆ ಮಾತುಕತೆಯಾಗಿದೆ. ಅವರು ಈಗಾಗಲೇ ಬೇರೆ ಸಿನಿಮಾಗಳಲ್ಲಿ ತೊಡಗಿರುವುದರಿಂದ ಡೇಟ್ಸ್ ಹೊಂದಿಕೆಯಾಗುತ್ತಿಲ್ಲ. ಸದ್ಯದಲ್ಲೇ ಒಬ್ಬರು ಅಂತಿಮವಾಗಲಿದ್ದಾರೆ’ ಎನ್ನುವುದು ನಿರ್ದೇಶಕ ರವಿವರ್ಮ ಅವರ ಮಾತು.
ಅಂದಹಾಗೆ, ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರ “ರುಸ್ತುಂ’. “ಈ ಚಿತ್ರದಲ್ಲಿ ಶಿವಣ್ಣ ಪಾತ್ರ ತುಂಬಾ ಭಿನ್ನವಾಗಿದೆ. ಹೊಸ ಶೈಲಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು. ಚಿತ್ರದಲ್ಲಿ ತೆಲುಗು ನಟ ಶತ್ರು ಕೂಡಾ ವಿಲನ್ ಆಗಿ ನಟಿಸುತ್ತಿದ್ದಾರೆ. ಇನ್ನು, ಏಪ್ರಿಲ್ 24ರಂದು ಚಿತ್ರ ಸೆಟ್ಟೇರಲಿದ್ದು, ಮೇ 10 ರಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಬೆಂಗಳೂರು, ಬಿಹಾರ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣವಾಗಲಿದೆ.
“ರುಸ್ತುಂ’ ಚಿತ್ರವನ್ನು ಜಯಣ್ಣ ಕಂಬೈನ್ಸ್‌ನಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದು, ಈ ಸಂಸ್ಥೆಗೆ ಶಿವರಾಜಕುಮಾರ್ ಮಾಡುತ್ತಿರುವ ಮೂರನೆಯ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಜಯಣ್ಣ ಫಿಲಮ್ಸ್‌ನ “ಬಂಗಾರ – ಸನ್ ಆಫ್ ಬಂಗಾರದ ಮನುಷ್ಯ’ ಹಾಗೂ “ಮಫ್ತಿ’ ಚಿತ್ರಗಳಲ್ಲಿ ಶಿವರಾಜಕುಮಾರ್ ನಟಿಸಿದ್ದರು. ಈಗ ಇದೇ ಸಂಸ್ಥೆಯ “ರುಸ್ತುಂ ಚಿತ್ರದಲ್ಲೂ ಶಿವರಾಜಕುಮಾರ್ ನಟಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.