ಶರಣ್ ಈಗ ಲೇಡೀಸ್ ಟೈಲರ್
Team Udayavani, Apr 18, 2018, 10:59 AM IST
ವಿಜಯಪ್ರಸಾದ್ ನಿರ್ದೇಶಿಸಬೇಕಿದ್ದ “ಲೇಡೀಸ್ ಟೈಲರ್’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್ ಟೈಲರ್’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್ ಗೌಡ ಮತ್ತು ಶ್ರುತಿ ಹರಿಹರನ್ ಅಭಿನಯದಲ್ಲಿ “ಲೇಡೀಸ್ ಟೈಲರ್’ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್ ಗೌಡ ಬದಲು ಶರಣ್ ಈ ಚಿತ್ರದಲ್ಲಿ “ಲೇಡೀಸ್ ಟೈಲರ್’ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರವಿಶಂಕರ್ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಶರಣ್ ಅಭಿನಯದಲ್ಲಿ ಚಿತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಹುಶಃ ಒಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.
ಏಕೆಂದರೆ, ಒಂದೇ ಚಿತ್ರದಿಂದ ನಾಯಕನನ್ನು ಎರಡೆರೆಡು ಬಾರಿ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, “ಲೇಡೀಸ್ ಟೈಲರ್’ ಎಂಬ ಚಿತ್ರವಾಗುತ್ತದೆ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್ ಗೌಡ. ಆದರೆ, ಕೆಲವು ದಿನಗಳ ನಂತರ ರವಿಶಂಕರ್ ಬದಲು ಸತೀಶ್ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು.
ಅದಾದ ಕೆಲವು ದಿನಗಳಿಗೆ, ಸತೀಶ್ ಜಾಗಕ್ಕೆ ಜಗ್ಗೇಶ್ ಬಂದಿದ್ದಾರೆ ಎಂದು ಸುದ್ದಿಯಾಯ್ತು. ಅದಾದ ಕೆಲವು ದಿನಗಳಿಗೆ ಚಿತ್ರ ನಿಂತು ಹೋದ ಸುದ್ದಿ ಬಂತು. ಇನ್ನು “ಲೇಡೀಸ್ ಟೈಲರ್’ ಚಿತ್ರ ಆಗುವುದಿಲ್ಲ ಎಂದು ಎಲ್ಲರೂ ನಂಬಿರುವಾಗಲೇ, ಮತ್ತೆ ರವಿಶಂಕರ್ ಅಭಿನಯದಲ್ಲಿ ಚಿತ್ರವನ್ನು ಶುರು ಮಾಡುತ್ತಿರುವ ಸುದ್ದಿಯಾಯ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬರದ ಕಾರಣ, ಯಾರೂ ಆ ಚಿತ್ರದ ಬಗ್ಗೆ ಗಮನಹರಿಸುವುದಕ್ಕೆ ಹೋಗಿರಲಿಲ್ಲ.
ಹೀಗಿರುವಾಗಲೇ, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಮತ್ತು ರವಿಶಂಕರ್ ಗೌಡ ಬದಲು ಶರಣ್ ಆ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ರವಿಶಂಕರ್ ಗೌಡ ಹೊರಹೋಗುತ್ತಿರುವುದಕ್ಕೆ ನಿಖರವಾದ ಕಾರಣವಿಲ್ಲದಿದ್ದರೂ, ಚಿತ್ರಕ್ಕೆ ಮೂರ್‍ನಾಲ್ಕು ಕೋಟಿ ಬಜೆಟ್ ಆಗುತ್ತಿರುವುದರಿಂದ, ಅವರ ಬದಲು ಸ್ವಲ್ಪ ಸ್ಟಾರ್‌ಗಿರಿ ಇರುವ ನಟರನ್ನು ಹಾಕಿಕೊಂಡರೆ ಅನುಕೂಲವಾಗುತ್ತದಂತೆ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿತಂತೆ.
ಅದೇ ಕಾರಣಕ್ಕೆ ರವಿಶಂಕರ್ ಗೌಡ ಬದಲು ಶರಣ್ ಚಿತ್ರಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಇದೆ. ಇನ್ನು ಚಿತ್ರ ಯಾವಾಗ ಶುರುವಾಗಲಿದೆ ಮತ್ತು ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.