ಕನ್ನಡ ಕಲಿತ ಕೇರಳ ಚೆಲುವೆ!
Team Udayavani, Apr 18, 2018, 10:59 AM IST
ಕನ್ನಡದಲ್ಲಿ ನೀತು ಅಂದಾಕ್ಷಣ, ಎಲ್ಲರಿಗೂ “ಗಾಳಿಪಟ’ ಬೆಡಗಿ ನೀತು ನೆನಪಾಗದೇ ಇರದು. ಆದರೆ, ಈಗ ಕನ್ನಡಕ್ಕೆ ಮತ್ತೂಬ್ಬ ನೀತು ಎಂಬ ನಟಿಯ ಆಗಮನವಾಗಿದೆ. ಈಕೆ ಕೇರಳದ ಬೆಡಗಿ ಪೂರ್ಣ ಹೆಸರು ನೀತು ಬಾಲ. ಕನ್ನಡದಲ್ಲಿ ಈಗಾಗಲೇ “ಮೇಘ ಅಲಿಯಾಸ್ ಮ್ಯಾಗಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದಾಳೆ.
ಈಗ ಇನ್ನೂ ಹೆಸರಿಡದ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಇರುವ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಎರಡು ಚಿತ್ರದಲ್ಲಿ ನಟಿಸಿರುವ ಈ ನೀತು ಬಾಲ ಬಗ್ಗೆ ಇಷ್ಟೊಂದು ಪೀಠಿಕೆ ಬೇಕಾ? ಎಂಬ ಪ್ರಶ್ನೆ ಬರಬಹುದು. ಆದರೆ, ಕೇರಳದ ಹುಡುಗಿಯೊಬ್ಬಳು ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತಾಡುತ್ತಾಳೆ ಅಂದರೆ, ಸ್ವಲ್ಪ ಹೇಳಲೇಬೇಕು.
ಹೌದು, ನೀತು ಬಾಲ ಮೂಲತಃ ಕೇರಳದ ಹುಡುಗಿ. “ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನೀತು ಬಾಲ, ಮೊದ ಮೊದಲು ಕನ್ನಡ ಅಂದರೆ ಬೆಚ್ಚಿ ಬೀಳುತ್ತಿದ್ದಳು. ಆದರೆ, ಆ ಚಿತ್ರ ಮುಗಿಯುವ ಹೊತ್ತಿಗೆ ನಾನು ಕನ್ನಡ ಕಲಿಯಲೇಬೇಕು ಅಂತ ಛಲತೊಟ್ಟು, ಕನ್ನಡವನ್ನು ಕಲಿತೇ ಬಿಟ್ಟಳು.
ಅಷ್ಟೇ ಅಲ್ಲ, ಆ ಚಿತ್ರ ಬಿಡುಗಡೆಯೇ ಕಂಡಿಲ್ಲ. ಈಗ ನೀತು ಬಾಲ, ಕನ್ನಡ ಭಾಷೆಯನ್ನು ಕಲಿಯುವುದರ ಜತೆಗೆ ಒಂದಷ್ಟು ಬರೆಯುವುದನ್ನೂ ಕಲಿಯುತ್ತಿದ್ದಾರೆ. ಇತ್ತೀಚೆಗೆ ನಡೆದ ಹೊಸ ಚಿತ್ರದ ಮುಹೂರ್ತದಲ್ಲಿ ಸಿಕ್ಕ ನೀತು ಬಾಲ, “ನನಗೆ ಮಲಯಾಳಂ ಬಿಟ್ಟರೆ, ಇಂಗ್ಲೀಷ್ ಮತ್ತು ಹಿಂದಿ ಮಾತ್ರ ಬರುತ್ತಿತ್ತು. ಕನ್ನಡದಲ್ಲಿ ಅವಕಾಶ ಸಿಕ್ಕಾಗ, ಕನ್ನಡ ಭಾಷೆಯನ್ನೂ ಕಲಿಯಬೇಕು ಅಂತ ನಿರ್ಧರಿಸಿದೆ.
ಸೆಟ್‌ನಲ್ಲಿ ಕನ್ನಡ ಮಾತಾಡುವವರ ಜೊತೆ ಮಾತಾಡಲು ಮುಂದಾದೆ, ಪ್ರತಿ ಪದಕ್ಕೂ ಅರ್ಥ ಕೇಳುತ್ತಿದ್ದೆ. ಆ ಚಿತ್ರ ಮುಗಿಯುವ ಹೊತ್ತಿಗೆ ಕನ್ನಡವನ್ನು ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ರೆಡಿಯಾದೆ. ಆ ಬಳಿಕ, ಕನ್ನಡವನ್ನು ಸ್ಪಷ್ಟವಾಗಿ ಮಾತಾಡಬೇಕು ಅಂತ, ಕೆಲ ಅಕ್ಷರಗಳ ಅಭ್ಯಾಸ ಮಾಡುವ ಮೂಲಕ ಕನ್ನಡವನ್ನೂ ನನ್ನ ಶೈಲಿಯಲ್ಲೇ ಮಾತಾಡುತ್ತಿದ್ದೇನೆ.
ಇದು ನನಗೆ ಹೆಮ್ಮೆ’ ಎನ್ನುತ್ತಾಳೆ ನೀತು ಬಾಲ. ಅದೇನೆ ಇರಲಿ, ಕೆಲವು ಕನ್ನಡ ನಟಿಮಣಿಗಳೇ ಕನ್ನಡ ಬದಲು ಇಂಗ್ಲೀಷ್ ಬಳಸುತ್ತಿರುವಾಗ, ಕೇರಳದ ಹುಡುಗಿ ಒಂದೇ ವರ್ಷದಲ್ಲಿ ಕನ್ನಡ ಮಾತಾಡುವುದು ವಿಶೇಷವಲ್ಲದೆ ಮತ್ತೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.