ಓಡಿ ಹೋಗುವ ಮುನ್ನ!

Team Udayavani, Apr 18, 2018, 5:06 PM IST

odi-hoguva.jpg

ದೇಹದ ತೂಕ ಇಳಿಸೋಕೆ, ಆರೋಗ್ಯವನ್ನು ಕಾಪಾಡಿಕೊಳ್ಳೋಕೆ ಎಲ್ಲರೂ ಪಾಲಿಸುವ ಸುಲಭ ವ್ಯಾಯಾಮವೆಂದರೆ ಜಾಗಿಂಗ್‌. ವೈದ್ಯರು ಕೂಡ, “ದಿನಾಲೂ ಅರ್ಧ ಗಂಟೆ ಬಿರುಸಾಗಿ ವಾಕ್‌ ಮಾಡಿ ಅಥವಾ ಜಾಗ್‌ ಮಾಡಿ. ಒಂದೇ ತಿಂಗಳಲ್ಲಿ ಸ್ಲಿಮ್‌ ಆಗ್ತಿàರ’ ಅಂತ ಹೇಳುತ್ತಾರೆ. ದಿನಾಲೂ ಅರ್ಧ ಗಂಟೆ ಓಡಿದ್ರೆ ಮೂವತ್ತೇ ದಿನದಲ್ಲಿ 3 ಕೆ.ಜಿ ಕಡಿಮೆಯಾಗಬಹುದು ಎಂಬ ಮಾತು ಕೇಳಿದ್ದೇ ತಡ, ಜಾಗಿಂಗ್‌ ಶೂ ಹಾಕಿ ಓಡೋಕೆ ತಯಾರಾಗಿ ಬಿಡ್ತೀರಿ. ಸ್ವಲ್ಪ ತಾಳಿ, ಓಡುವ ಮುನ್ನ ಈ ಒಂದಷ್ಟು ವಿಚಾರಗಳು ನಿಮಗೆ ಗೊತ್ತಿರಲಿ.

1. ವಾರ್ಮ್ ಅಪ್‌ ವ್ಯಾಯಾಮ ಮಾಡಿ
ಡಾಕ್ಟರ್‌ ಹೇಳಿದ್ದಾರೆ ಅಂತ ಸುಮ್ಮನೆ ಓಡಿದರೆ ಸಾಲದು! ಓಡುವುದಕ್ಕೂ ಮುನ್ನ ಒಂದಷ್ಟು ವಾರ್ಮ್ ಅಪ್‌ ವ್ಯಾಯಾಮಗಳನ್ನು ಮಾಡಬೇಕು. ಆಗ ದೇಹದ ಸ್ನಾಯುಗಳು ಸಡಿಲವಾಗಿ, ಓಡುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ಸ್ನಾಯುಗಳು ಇದ್ದಕ್ಕಿದ್ದಂತೆ ಹಿಡಿದುಕೊಳ್ಳುವ ಅಪಾಯವೂ ಇರುತ್ತದೆ. 

2. ಜಾಸ್ತಿ ತಿನ್ನೋದು ಒಳ್ಳೇದಲ್ಲ
ಅರ್ಧ ಗಂಟೆ ಓಡಿದರೆ ಸುಸ್ತಾಗುತ್ತೆ ಅಂತ ಯೋಚಿಸಿ, ಹೊಟ್ಟೆ ತುಂಬಾ ತಿಂದು ಆಮೇಲೆ ಜಾಗಿಂಗ್‌ ಹೋಗುವವರಿದ್ದಾರೆ. ಅದು ತಪ್ಪು. ಓಡುವಾಗ ನಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಷ್ಟೇ ಅಲ್ಲದೆ, ಜೀರ್ಣಾಂಗ ವ್ಯವಸ್ಥೆಗೆ ಪೂರೈಕೆಯಾಗುವ ರಕ್ತ ಸಂಚಲನದಲ್ಲಿಯೂ ಏರುಪೇರಾಗುತ್ತದೆ. ಹಾಗಾಗಿ ಓಡುವ ಮುನ್ನ ಹೊಟ್ಟೆ ಆದಷ್ಟು ಖಾಲಿಯಿರಲಿ.

3. ಲೀಟರ್‌ಗಟ್ಟಲೆ ನೀರು ಕುಡೀಬೇಡಿ
ಬೆಳಗ್ಗೆ ಎದ್ದು ನೀರು ಕುಡಿದು ನಂತರ ಜಾಗಿಂಗ್‌ ಮಾಡುವ ಅಭ್ಯಾಸ ಕೆಲವರಿಗಿದೆ. ಹಾಗೆ ಮಾಡುವುದೂ ದೇಹಕ್ಕೆ ಒಳ್ಳೆಯದಲ್ಲ. ಲೀಟರ್‌ಗಟ್ಟಲೆ ನೀರು ಕುಡಿದರೆ ಹೊಟ್ಟೆ ಭಾರವಾಗಿ ಜಾಗ್‌ ಮಾಡುವುದು ಕಷ್ಟ ಅನಿಸುತ್ತದೆ. ಜಾಗಿಂಗ್‌ಗೂ ಮುನ್ನ ಅರ್ಧ ಗಂಟೆ ಏನನ್ನೂ ಸೇವಿಸಬೇಡಿ. ಹಾಗೇ ಕಾಫಿ, ಟೀ ಅಥವಾ ಹೆಚ್ಚಿನ ಸಕ್ಕರೆ ಅಂಶವಿರುವ ಎನರ್ಜಿ ಡ್ರಿಂಕ್ಸ್‌ಗಳ ಸೇವನೆಯೂ ಹಿತವಲ್ಲ. 

4. ಹೊಟ್ಟೆ ಖಾಲಿ ಇರಲಿ
ಕೆಲವರು ಎದ್ದ ಕೂಡಲೇ ನೇರ ಗ್ರೌಂಡಿಗೇ ಇಳಿದುಬಿಡುತ್ತಾರೆ. ಉಹೂಂ, ಹಾಗೆ ಮಾಡೋದು ತಪ್ಪು. ನಿತ್ಯ ಕರ್ಮಗಳನ್ನು ಮುಗಿಸದೇ ಜಾಗ್‌ ಮಾಡುವುದರಿಂದ ಕಿಡ್ನಿಯ ಆರೋಗ್ಯಕ್ಕೆ ತೊಂದರೆ ಆಗುವ ಸಾಧ್ಯತೆಗಳಿವೆ.  

5.  ದೇಹದ ಮಾತು ಕೇಳಿಸಿಕೊಳ್ಳಿ
ನಮ್ಮ ದೇಹ ಕೂಡ ಮಾತಾಡುತ್ತದೆ. ಆದರೆ, ನಾವದನ್ನು ಕೇಳಿಸಿಕೊಳ್ಳಬೇಕು ಅಷ್ಟೆ. ಯಾವುದೋ ಹೊಸ ಆಹಾರ, ವ್ಯಾಯಾಮ ದೇಹಕ್ಕೆ ಒಗ್ಗದಿದ್ದರೆ ಅದು ನಮಗೆ ಸೂಚನೆಗಳನ್ನು ನೀಡುತ್ತದೆ. ಹಾಗೆಯೇ, ಜಾಗಿಂಗ್‌ ಮಾಡಿದ ನಂತರ ಕೈಕಾಲು ನೋವು, ಅತಿಯಾದ ಸುಸ್ತು ಕಾಣಿಸಿಕೊಂಡರೆ ಜಾಗಿಂಗ್‌ಅನ್ನು ನಿಲ್ಲಿಸಿಬಿಡಿ. ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ವಯಸ್ಸು, ತೂಕ, ಆರೋಗ್ಯ ಸ್ಥಿತಿಯನ್ನು ಆಧರಿಸಿ ಸೂಕ್ತವಾದ ವ್ಯಾಯಾಮ ಮಾಡಿ. 

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.