ರಂಗ ನಾಯಕಿಯ ಕತೆ


Team Udayavani, Apr 18, 2018, 5:06 PM IST

ranga-mandya.jpg

ಸರೋಜಾ ಹೆಗಡೆ! ರಂಗಾಸಕ್ತರಿಗೆ ಪರಿಚಿತ ಹೆಸರು. ಕಲಾವಿದೆ, ನಾಟಕ ನಿರ್ದೇಶಕಿ, ವಸ್ತ್ರವಿನ್ಯಾಸಕಿ. ರಂಗಭೂಮಿ ಕಲಾವಿದ, ಸಿನಿಮಾ ನಟ ಮಂಡ್ಯ ರಮೇಶ್‌ರ ಪತ್ನಿ. ನಟಿಯಾಗಿ, ಹಾಡುಗಾರ್ತಿಯಾಗಿ ಪ್ರಸಿದ್ಧರಾಗುತ್ತಿರುವ ದಿಶಾ ರಮೇಶ್‌, ಇವರ ಮಗಳು. ಶಿರಸಿ ಬಳಿಯ ಹಳೇ ಕಾಮಗೋಡು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ, ನಟನೆ ಗೀಳು ಹಿಡಿಸಿಕೊಂಡು ನೀನಾಸಂನಲ್ಲಿ ನಾಟಕ ತರಬೇತಿ ಪಡೆದವರು. 30 ವರ್ಷಗಳಿಂದ ಮೈಸೂರಿನ ರಂಗಾಯಣದಲ್ಲಿ ನಟಿ, ನಿರ್ದೇಶಕಿಯಾಗಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಮಂಡ್ಯ ರಮೇಶ್‌ ದಂಪತಿ ಬಡತನ ಗೆದ್ದ ಕತೆಯೇ ರೋಚಕ…

* ಪುಟ್ಟ ಹಳ್ಳಿಯವರಾದ ನೀವು ನಾಟಕ ಕಲಿಯುವ ಮನಸ್ಸು ಮಾಡಿದ್ದು ಹೇಗೆ?
ಬಾಲ್ಯದಿಂದಲೂ ನನಗೆ ಕಲೆಯಲ್ಲಿ ತುಂಬಾ ಆಸಕ್ತಿ. ಗೆಳತಿಯರ ಜೊತೆ ಮೂಕಾಭಿನಯ ಮಾಡುತ್ತಿದ್ದೆ, ಅಮ್ಮನ ಜೊತೆ ಯಕ್ಷಗಾನ ನೋಡುತ್ತಿದ್ದೆ. 9ನೇ ವಯಸ್ಸಿನಲ್ಲಿದ್ದಾಗ “ಅಮರಶಿಲ್ಪಿ ಜಕಣಾಚಾರಿ’ ಚಿತ್ರ ನೋಡಿದ್ದೆ. ಆಗ ನನಗೂ ಅಭಿನಯಿಸಬೇಕು ಅಂತ ಆಸಕ್ತಿ ಬಂತು. ಮನೆಯಲ್ಲಿ ಕೆಟ್ಟ ಬಡತನ. 10ನೇ ತರಗತಿಗೇ ಓದು ನಿಲ್ಲಿಸಬೇಕಾಯಿತು. ಹಿಂದೂಸ್ತಾನಿ ಸಂಗೀತ ಕಲಿಕೆಯಲ್ಲಿ ತೊಡಗಿದ್ದೆ. ಪತ್ರಿಕೆಯೊಂದರಲ್ಲಿ, ನೀನಾಸಂನಲ್ಲಿ 1 ವರ್ಷ ನಾಟಕ ತರಬೇತಿ ನೀಡುವ ಬಗ್ಗೆ ಜಾಹೀರಾತು ನೋಡಿದೆ. ಆಗ ಮತ್ತೆ, ಅಭಿನಯದ ಕಡೆ ಹೊರಳುವ ಆಸಕ್ತಿ ಹುಟ್ಟಿಕೊಂಡಿತು. ನೀನಾಸಂನಲ್ಲಿ ಪ್ರವೇಶ ಪಡೆದೆ. 

* ನಾಟಕ ಕಲಿಯುತ್ತೇನೆ ಅಂದಾಗ ಮನೆಯಲ್ಲಿ ಪ್ರೋತ್ಸಾಹ ಸಿಕ್ಕಿತಾ?
ಅಪ್ಪ ತೀರಿಕೊಂಡಿದ್ದರು. ಮನೆಯಲ್ಲಿ ನಾವು 10 ಜನ ಮಕ್ಕಳು. ಇಡೀ ದಿನ ಒಂದೇ ಹೊತ್ತು ಊಟ ಮಾಡುವಂಥ ಸ್ಥಿತಿ. ಪಾಪ, ಯಾವುದಾದರೂ ಗಂಡು ಸಿಕ್ಕರೆ, ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ತವಕ ಅಮ್ಮನಿಗೆ. ಮೊದಲಿಗೆ ಬೇಡವೆಂದೇ ಹಠ ಹಿಡಿದಿದ್ದಳು. ಆದರೆ ನನ್ನ 2ನೇ ಅಕ್ಕ ಸುಶೀಲ, ಅಮ್ಮನನ್ನು ಒಪ್ಪಿಸಿ ನೀನಾಸಂಗೆ ಅರ್ಜಿ ತುಂಬಿಸಿದಳು. 

* ಮಂಡ್ಯ ರಮೇಶ್‌ ಅವರ ಪರಿಚಯ ಆಗಿದ್ಹೇಗೆ?
ನೀನಾಸಂನಲ್ಲಿ ತರಬೇತಿ ಪಡೆಯುವಾಗ ರಮೇಶ್‌, ನೀನಾಸಂ ತಿರುಗಾಟದಲ್ಲಿ ಇದ್ದರು. ನಮಗೆ ಪ್ರತಿನಿತ್ಯ ಬೆಳಗ್ಗೆ ಯೋಗ ಕಲಿಕೆ ಇರುತ್ತಿತ್ತು. ರಮೇಶ್‌ ಯೋಗ ಕಲಿಸಲು ಬರುತ್ತಿದ್ದರು. ಅವರು ಆಗ ಭಾರೀ ನಾಚಿಕೆ ಸ್ವಭಾವದ ಹುಡುಗ. ಹುಡುಗಿಯರಿಗೆ ಹೇಳಿಕೊಡಬೇಕಾದರೆ ನಾಚಿಕೊಂಡು, ನಮ್ಮ ಸೀನಿಯರ್‌ ಒಬ್ಬರನ್ನು ಕರೆದು, “ಇವರಿಗೆ ಸ್ವಲ್ಪ ಹೇಳಿಕೊಡಮ್ಮಾ’ ಅನ್ನುತ್ತಿದ್ದರು. ನನಗೆ ಅವರನ್ನು ನೋಡಿ ನಗು ಬರ್ತಾ ಇತ್ತು. ನಾನು ನೀನಾಸಂನಲ್ಲಿ ಒಂದು ವರ್ಷ ತಿರುಗಾಟ ಮುಗಿಸಿ 1989ಕ್ಕೆ ರಂಗಾಯಣಕ್ಕೆ ಬಂದೆ. ರಮೇಶ್‌ ಕೂಡಾ ನೀನಾಸಂನಿಂದ ರಂಗಾಯಣಕ್ಕೆ ಬಂದಿದ್ದರು. ಆಗ ನಮ್ಮ ಮನೆಯಲ್ಲಿ ನನಗೆ ಮದುವೆಯ ಒತ್ತಡ ಹೆಚ್ಚಿತ್ತು. ನನಗೆ ನಟನಾ ವೃತ್ತಿಯಲ್ಲೇ ಮುಂದುವರಿಯುವ ಹುಚ್ಚು ಜೋರಿತ್ತು. ಅದಕ್ಕೇ ನಾನು ಇದೇ ಕ್ಷೇತ್ರದಲ್ಲಿರುವವರನ್ನೇ ಮದುವೆಯಾಗುವ ಯೋಚನೆ ಮಾಡಿದೆ. ಆಗ ನನಗೆ ನೆನಪಾದವರೇ ಮಂಡ್ಯ ರಮೇಶ್‌. ಪತ್ರ ಬರೆದು, ಪ್ರಪೋಸ್‌ ಮಾಡಿಯೇಬಿಟ್ಟೆ.

* ಅವರು ಹೇಗೆ ಪ್ರತಿಕ್ರಿಯಿಸಿದ್ರು?
ಮೊದಲು ತಿರಸ್ಕರಿಸಿದರು. ಅವರಿಗೆ ಹಿಂಜರಿಕೆ ಇತ್ತು. ಇನ್ನೂ ವೃತ್ತಿಯಲ್ಲಿ, ಬದುಕಿನಲ್ಲಿ ನೆಲೆ ನಿಲ್ಲದೇ ಮದುವೆಯಾಗುವುದು ಹೇಗೆ ಎಂದು. ಕಡೆಗೆ ಇಬ್ಬರೂ ಸರಳವಾಗಿ ಮದುವೆಯಾಗಿ, ಸರಳವಾಗಿ ಬದುಕುವುದೆಂದು ನಿರ್ಧರಿಸಿದೆವು. ರಂಗಾಯಣದಲ್ಲಿ ನಮಗೆ 4 ದಿನ ರಜೆ ಕೊಟ್ಟಿದ್ದರು. ಆಗ 1992 ಸೆ.10ರಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮದುವೆಯಾದೆವು. ಮದುವೆಯಾದ ಹೊಸತರಲ್ಲಿ ನಮಗೆ ಏನೇನೂ ಅನುಕೂಲಗಳಿರಲಿಲ್ಲ. ಚಾಪೆಯಲ್ಲಿ ಇದ್ದು ಬಂದವರು ನಾವು. ನಾವು ಸಾಗಿ ಬಂದ ಹಾದಿ ಬಗ್ಗೆ ಹೆಮ್ಮೆ ಇದೆ.

* ಮಂಡ್ಯ ರಮೇಶ್‌ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಿನಿಮಾ, ಟಿ.ವಿ. ನಟರಾಗಿ ಬ್ಯುಸಿ ಆದರು. ನೀವೇಕೆ ಸಿನಿಮಾದತ್ತ ಹೊರಳಲಿಲ್ಲ?
ರಂಗಾಯಣ ಸೇರಿದ ಮೊದಲ ವರ್ಷವೇ ನಿರ್ದೇಶಕ ಸುರೇಶ್‌ ಹೆಬ್ಳೀಕರ್‌ರಿಂದ ಸಿನಿಮಾವೊಂದಕ್ಕೆ ಕರೆ ಬಂತು. ಆಗ ರಂಗಾಯಣ ನಿರ್ದೇಶಕರಾದ ಬಿ.ವಿ. ಕಾರಂತರು, ಆಕೆ ಈಗಷ್ಟೇ ಅಭಿನಯ ಕಲಿಯುತ್ತಿದ್ದಾಳೆ. ನಾನು ಕಳಿಸುವುದಿಲ್ಲ ಎಂದರು. ಬಳಿಕ ನನಗೆ ಪ್ರೇಕ್ಷಕರ ಚಪ್ಪಾಳೆಯನ್ನು ಕಳೆದುಕೊಳ್ಳುವ ಮನಸ್ಸಾಗಲಿಲ್ಲ. ಹೀಗಾಗಿ ಯಾವ ಅವಕಾಶವನ್ನೂ ಒಪ್ಪಿಕೊಳ್ಳಲಿಲ್ಲ. ರಮೇಶ್‌ ಸಿನಿಮಾಗಳಲ್ಲಿ ಬ್ಯುಸಿ ಆದ ಮೇಲೆ ಅವನಿಗೆ ಸದಾ ಮೈಸೂರು-ಬೆಂಗಳೂರಿನ ಮಧ್ಯ ಓಡಾಡುವುದೇ ಆಗುತ್ತಿತ್ತು. ಆಗ ಮಗಳು ತುಂಬಾ ಸಣ್ಣವಳು. ಆಕೆಯ ಸಂಪೂರ್ಣ ಜವಾಬ್ದಾರಿಯೂ ನನ್ನ ಮೇಲಿತ್ತು.  

* ರಮೇಶ್‌ ಮೇಲೆ ಎಂದಾದರೂ ಕೋಪ ಬಂದಿತ್ತಾ?
ಯಾವುದೋ ಒಂದು ಧಾರಾವಾಹಿಯ ಪಾತ್ರಕ್ಕೆ ಅವರು ಮೀಸೆ ಬೋಳಿಸಿದ್ದರು. ಆಗ ಬಂದಿತ್ತು…! 

* ನಟನ ಎಂಬ ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಆ ಬಗ್ಗೆ ನಿಮಗೆ ಏನನ್ನಿಸುತ್ತದೆ?
“ನಟನ’ ನೋಡಿದಾಗಲೆಲ್ಲಾ ನನಗೆ ವಿಸ್ಮಯ ಅಗುತ್ತದೆ. ಅವರು ಸಂಸ್ಥೆ ಕಟ್ಟುತ್ತೇನೆ, ನಾಟಕ ಕಲಿಸುತ್ತೇನೆ, ತಂಡ ಕಟ್ಟುತ್ತೇನೆ ಎಂದೆಲ್ಲಾ ಹೇಳಿದಾಗ, ಇದೆಲ್ಲಾ ಸಾಧ್ಯವಾ ಎಂದು ನಾನು ಅನುಮಾನ ಪಡುತ್ತಿದ್ದೆ. ಆದರೆ ರಮೇಶ್‌ ಹಠವಾದಿ. ಮನಸ್ಸಿಗೆ ಏನಾದರೂ ಬಂದರೆ ಅದನ್ನು ಮಾಡಿ ಮುಗಿಸುವವರೆಗೆ ಬಿಡುವುದಿಲ್ಲ. ನಟನಕ್ಕಾಗಿ ಅವನು ಎಷ್ಟು ದಿನಗಳ ಕಾಲ ಊಟ, ನಿದ್ದೆ ಬಿಟ್ಟಿದ್ದಾನೋ ಲೆಕ್ಕ ಇಲ್ಲ. ಸಿನಿಮಾ, ಧಾರಾವಾಹಿಯಲ್ಲಿ ದುಡಿದ ಹಣವನ್ನೆಲ್ಲಾ “ನಟನ’ಕ್ಕೆ ಸುರಿದಿದ್ದಾನೆ. ನಟನ ಕಟ್ಟುವ ವೇಳೆ ನಮಗೇ ಸರಿಯಾದ ಒಂದು ಸೂರು ಇರಲಿಲ್ಲ. ನಾವು ಮನೆ ಕಟ್ಟಿಕೊಳ್ಳುವ ಮೊದಲೇ ರಮೇಶ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ನಟನ ಕಟ್ಟಿದ. 

* ಕಷ್ಟದ ದಿನಗಳು ಹೇಗಿದ್ದವು?
ರಮೇಶ ದಾನಶೂರ ಕರ್ಣ. ಜೊತೆಗೆ ಮಹಾನ್‌ ಸ್ವಾಭಿಮಾನಿ. ತನ್ನ ಬಳಿ ಹಣ ಇಲ್ಲ ಎಂದರೂ ಕಷ್ಟದಲ್ಲಿದ್ದವರಿಗೆ ಹೇಗಾದರೂ ಸಹಾಯ ಮಾಡುತ್ತಿದ್ದ. ಹಣಕ್ಕೆ ತುಂಬಾ ತಾಪತ್ರಯ ಪಡುತ್ತಿದ್ದ. ಆದರೂ ಒಮ್ಮೆಯೂ ನಮಗೆ ಯಾವುದಕ್ಕೂ ಕಡಿಮೆ ಮಾಡುತ್ತಿರಲಿಲ್ಲ. “ಜನುಮದ ಜೋಡಿ’ ಸಿನಿಮಾಕ್ಕೆ ಅವರಿಗೆ ಅಡ್ವಾನ್ಸ್‌ ಕೊಟ್ಟಿದ್ದರು. ಅಡ್ವಾನ್ಸ್‌ ಹಣವನ್ನು ಮನೆಗೆ ತಾರದೇ, ನನಗಾಗಿ ಚಿನ್ನ ತಂದಿದ್ದ. ಅದನ್ನು ನೋಡಿ ನನಗೆ ತುಂಬಾ ಸಿಟ್ಟು ಬಂದು, “ನಿನಗೆ ಸ್ವಲ್ಪವೂ ಜವಾಬ್ದಾರಿಯೇ ಇಲ್ವಾ? ಹಣ ಯಾಕೆ ಖರ್ಚು ಮಾಡಿ¨?’ ಅಂತ ಅವರನ್ನು ಬೈದಿದ್ದೆ’. ಈಗ ಬೈದದ್ದಕ್ಕೆ ಬೇಸರ ಆಗುತ್ತದೆ. 

* ಮನೆಯಲ್ಲೂ ಅವರು ತಮಾಷೆ ಮಾಡ್ತಾ ಇರ್ತಾರ?
ನಾನು ಕೋಪಿಸಿಕೊಳ್ಳಲು ರಮೇಶ ಬಿಡುವುದೇ ಇಲ್ಲ. ಎಂಥದ್ದಾದರೂ ಸನ್ನಿವೇಶ ಇರಲಿ ನನಗೆ ಬೇಗ ನಗು ಬರುತ್ತದೆ. ರಮೇಶನಿಗೆ ನನ್ನ ವೀಕ್‌ನೆಸ್‌ ಗೊತ್ತು. ನಾನು ಕೋಪಿಸಿಕೊಂಡರೆ ಒಂದು ಗಂಭೀರವಾದ ಜೋಕ್‌ ಹೇಳಿ ನನ್ನನ್ನು ನಗಿಸುತ್ತಾನೆ. ನಕ್ಕ ಕೂಡಲೇ ಕೋಪ ಜರ್ರಂತ ಇಳಿದುಹೋಗುತ್ತದೆ. 

* ಅವರಿಗಾಗಿ ನೀವು ತಯಾರಿಸುವ ವಿಶೇಷ ಅಡುಗೆ ಯಾವುದು? 
ರಮೇಶನಿಗೆ ನಾನು ಮಾಡುವ ಅಕ್ಕಿ ರೊಟ್ಟಿ ತುಂಬಾ ಇಷ್ಟ. ಪ್ರೀತಿಯಿಂದಲೇ ತಿನ್ನುತ್ತಾನೆ. ಆದರೆ, ತಿಂದಾದಮೇಲೆ. “ನೀ ಏನೇ ಹೇಳು, ನಮ್ಮಕ್ಕ ಇನ್ನೂ ಚೆನ್ನಾಗಿ ಅಕ್ಕಿ ರೊಟ್ಟಿ ಮಾಡ್ತಾಳೆ’ ಅಂತಾನೆ. ಅದು ನಿಜ ಕೂಡಾ! 

* ದಿಶಾ ಕಲಾವಿದೆಯಾಗುವುದು ನಿಮ್ಮ ಆಸೆಯೋ ಅಥವಾ ಅವರದ್ದೇ ನಿರ್ಧಾರವೊ? 
ಅವಳು ಪುಟ್ಟವಳಿದ್ದಾಗ ಅವಳ ಗಮನ ನಟನೆ ಕಡೆಗೆ ಬರಬಾರದು, ಅವಳು ಚೆನ್ನಾಗಿ ಓದಬೇಕು ಅಂತ ಅವಳಿಗೆ ಸದಾ ಬುದ್ಧಿ ಹೇಳುತ್ತಿದ್ದೆ. ಸ್ವಲ್ಪ ದೊಡ್ಡವಳಾದ ಬಳಿಕ ಅವಳೇ, “ಅಪ್ಪ, ಅಮ್ಮ ಇಬ್ಬರೂ ನಾಟಕದವರು. ಅದು ಹೇಗೆ ನನಗೆ ನಾಟಕದಲ್ಲಿ ಆಸಕ್ತಿ ಬಾರದೇ ಇರುತ್ತದೆ’ ಎಂದಳು. ಆಗ, ಹೌದಲ್ವಾ, ದಿಶಾ ಹೇಳ್ಳೋದೇ ಸರಿ ಅಂತನ್ನಿಸಿ ಅವಳಿಗಿಷ್ಟ ಬಂದಿದ್ದನ್ನು ಮಾಡಲು ಬಿಟ್ಟೆ. ನನ್ನ ಮಗಳು ಪರಿಪೂರ್ಣ ಕಲಾವಿದೆ. ಜೊತೆಗೆ ಕಾಲೇಜಿನಲ್ಲೂ ಟಾಪರ್‌. ನನಗೆ ಏನೆಲ್ಲಾ ಸಾಧಿಸಲು ಸಾಧ್ಯವಾಗಲಿಲ್ಲವೋ ಅವಳು ಅದೆಲ್ಲವನ್ನೂ ಸಾಧಿಸುತ್ತಿದ್ದಾಳೆ. 

* ನಟನಾ ಜೀವನದಲ್ಲಿ ನೀವು ಯಾರನ್ನಾದರೂ ಸ್ಮರಿಸುವುದಾದರೆ ಯಾರನ್ನು ಸ್ಮರಿಸುತ್ತೀರಾ? 
ಪ್ರತಿಬಾರಿ ರಂಗ ಹತ್ತುವಾಗ ತಪ್ಪದೇ ವೇದಿಕೆ ಮುಟ್ಟಿ ಬಿ.ವಿ. ಕಾರಂತರು ಮತ್ತು ಕೆ.ವಿ. ಸುಬ್ಬಣ್ಣ ಅವರನ್ನು ನಮಿಸುತ್ತೇನೆ. 

ಜಗಳ ಆಡೋಣ ಅಂದ್ರೂ ಮಗಳು ಸಿಗಲ್ಲ: ನಮ್ಮ ಮೂವರಲ್ಲಿ ಹೆಚ್ಚು ಬ್ಯುಸಿ ಎಂದರೆ ಮಗಳು ದಿಶಾ. ಕಾಲೇಜಿಗೆ ಹೋಗ್ತಾಳೆ, ಅಲ್ಲಿಂದ ಬಂದು ಮಕ್ಕಳಿಗೆ ರಂಗಗೀತೆ, ತರಬೇತಿ ನೀಡಲು “ನಟನ’ಗೆ ಹೋಗುತ್ತಾಳೆ, ನಾಟಕಗಳ ಅಭಿನಯ, ಅಭ್ಯಾಸ ಅಂತಲೂ ಬ್ಯುಸಿ ಇರ್ತಾಳೆ. ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನಗಳು ಇದ್ದರೆ ಎಲ್ಲರಿಗಿಂತ ಮೊದಲೇ ಗಂಟು ಮೂಟೆ ಕಟ್ಟುತ್ತಾಳೆ. ಇಷ್ಟೆಲ್ಲದರ ನಡುವೆಯೂ ಆಕೆ ಓದನ್ನು ನಿರ್ಲಕ್ಷಿಸುವುದಿಲ್ಲ. ಒಂದು ಕಡೆ ಕೂತು ಅಭ್ಯಾಸದಲ್ಲಿ ತೊಡಗಿದರೆ ಅದರಲ್ಲೇ ಮುಳುಗಿ ಹೋಗುತ್ತಾಳೆ. ಇವಳು ನನ್ನ ಜೊತೆ ಸಮಯ ಕಳೆಯುವುದೇ ಇಲ್ಲವಲ್ಲ ಅಂತ ಕೋಪ ಬರುತ್ತದೆ. ಅದೇ ಕಾರಣಕ್ಕೆ ಅವಳ ಜೊತೆ ಜಗಳವಾಡೋಣ ಅಂದ್ರೆ, ಅದಕ್ಕೂ ಅವಳು ಕೈಗೆ ಸಿಗುವುದಿಲ್ಲ. 

ರಮೇಶ್‌ ನನ್ನನ್ನು ನಟನ ಒಳಗೆ ಬಿಟ್ಟುಕೊಳ್ಳಲ್ಲ…: ರಮೇಶ್‌ ಪ್ರತಿಭೆ ಬಗ್ಗೆ ಜನರಿಗೆ ತಿಳಿದಿರುವಷ್ಟು ಅವರ ಶಿಸ್ತು, ಬದ್ಧತೆ ಬಗ್ಗೆ ತಿಳಿದಿಲ್ಲ. ನಟನ ಅವರೇ ಕಟ್ಟಿ ಬೆಳೆಸಿರುವ ಸಂಸ್ಥೆ. ಆದರೆ, ಆ ಸಂಸ್ಥೆಯ ಯಾವ ನಾಟಕದಲ್ಲೂ ನಾನು ಅಭಿನಯಿಸಿಲ್ಲ. ನನ್ನ ಗಂಡನ ಸಂಸ್ಥೆ ಅಂತ ನನಗೆ ಅಲ್ಲಿ ಯಾವ ವಿಶೇಷ ಸ್ಥಾನಮಾನಗಳೂ ಇಲ್ಲ. ರಮೇಶ್‌ ಅದಕ್ಕೆಲ್ಲಾ ಅವಕಾಶವನ್ನೇ ಕೊಡುವುದಿಲ್ಲ. “ನಟನ’ಕ್ಕೆ ನಾನು ಕೇವಲ ಪ್ರೇಕ್ಷಕಿಯಾಗಿ ಹೋಗುತ್ತೇನೆ ಅಷ್ಟೆ. ರಂಗಾಯಣ ಕಲಾವಿದೆಯಾಗಿದ್ದುಕೊಂಡು ನಟನದಲ್ಲಿ ತೊಡಗುವುದನ್ನು ರಮೇಶ್‌ ಒಪ್ಪುವುದಿಲ್ಲ. ನಾವು ಕೆಲಸ ಮಾಡುವ ಸಂಸ್ಥೆಗೆ ಬದ್ಧತೆ ತೋರಬೇಕು ಎಂಬುದು ಅವರ ವಾದ. 

ಬದುಕು ಕಲಿಸಿದ್ದೇ ನೀನಾಸಂ: ನಾನು ಒಳ್ಳೆಯ ಮಾತುಗಾರ್ತಿಯಾಗಿರಲಿಲ್ಲ. ಆದರೆ, ಭಾರೀ ಜಗಳಗಂಟಿಯಾಗಿದ್ದೆ. ತಾಳ್ಮೆ ಎಂದರೆ ಏನೆಂದೇ ಗೊತ್ತಿರಲಿಲ್ಲ. ಗೆಳತಿಯರ ಜೊತೆ ಸೇರಿ ಮಜಾ ಮಾಡುತ್ತಾ ಕಾಲ ಕಳೆಯುತ್ತಿದ್ದೆ. ತಾಳ್ಮೆ, ಸಹನೆ ಎಂದರೇನು ಎಂದು ಕಲಿಸಿದ್ದೇ ನೀನಾಸಂ. ಬಜಾರಿಯಾಗಿದ್ದವಳು ಅಲ್ಲಿಂದ ಸೌಮ್ಯ ಸ್ವಭಾವದವಳಾದೆ. ರಂಗಭೂಮಿ ಶಿಕ್ಷಣದ ಜೊತೆ ನೀನಾಸಂ ಜೀವನದಲ್ಲಿ ಶಿಸ್ತು, ಸಾಧನೆ ಮಾಡುವ ಛಲ ಎಲ್ಲವನ್ನೂ ಕಲಿಸಿಕೊಟ್ಟಿತು. ಕೆ.ವಿ. ಸುಬ್ಬಣ್ಣ, ಚಿದಂಬರ ರಾವ್‌ ಜಂಬೆ, ಕೆ.ವಿ. ಅಕ್ಷರರಂಥ ದೊಡ್ಡ ವ್ಯಕ್ತಿಗಳಿಂದ ಧಾರಾಳವಾಗಿ ಜೀವನ ಪಾಠವೂ ಸಿಕ್ಕಿತು. 

* ಮಂಡ್ಯ ರಮೇಶ್‌ ಬದುಕಿನ ಸ ”ರೋಜಾ’
* 4 ದಿನದ ರಜೆಯಲ್ಲೇ ಮದುವೆ ಆಯ್ತು…
* ಅವರು ಮೀಸೆ ಬೋಳಿಸಿದಾಗ ನಂಗೆ ಸಿಟ್ಟು ಬಂದಿತ್ತು…
 * ಬಡತನದಿಂದಲೇ ಮೇಲೆ ಬಂದವರು ನಾವು

* ಚೇತನ ಜೆ.ಕೆ. 

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.