ವಿಮಾನ ನಿಲ್ದಾಣದಲ್ಲಿ ಚಿನ್ನ ವಿಜೇತೆ ಮೌಮಾದಾಸ್‌ಗೆ ಸಂಕಷ್ಟ
Team Udayavani, Apr 19, 2018, 6:00 AM IST
ಹೊಸದಿಲ್ಲಿ: ಭಾರತೀಯ ಟೇಬಲ್ ಟೆನಿಸ್ ತಂಡದ ಆಟಗಾರ್ತಿ ಮೌಮಾ ದಾಸ್ ಕಾಮನ್‌ವೆಲ್ತ್ ಕೂಟ ಮುಗಿಸಿ ಭಾರತಕ್ಕೆ ಮರಳುವಾಗ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಚೆಕ್ ಇನ್ ಬ್ಯಾಗೇಜ್‌ನಲ್ಲಿ ಪವರ್ ಬ್ಯಾಂಕ್ ಇದೆ ಎಂಬ ಕಾರಣಕ್ಕೆ ದಿಲ್ಲಿಯ ಸೀಮಾಸುಂಕಾಧಿಕಾರಿಗಳು ಬ್ಯಾಗ್ ಕೊಡದೆ ತಡೆಹಿಡಿದಿದ್ದರು. ಇದನ್ನು ವಿಮಾನಯಾನ ಸಂಸ್ಥೆ ಮಾಡಿದ ಟ್ವೀಟ್ ಮೂಲಕ ಮೌಮಾ ದಾಸ್ ತಿಳಿದುಕೊಂಡರು. ಮಂಗಳವಾರ ರಾತ್ರಿ ಈ ಸಮಸ್ಯೆ ಇತ್ಯರ್ಥವಾಗಿದೆ.
ವಿಷಯ ತಿಳಿದ ತತ್‌ಕ್ಷಣ ಮೌಮಾ ಗೊಂದಲಕ್ಕೊಳಗಾಗಿದ್ದಾರೆ. ತಮ್ಮ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಇರಲಿಲ್ಲ ಎನ್ನುವುದು ಅವರ ಖಚಿತ ವಾದವಾಗಿತ್ತು. ಕಡೆಗೆ ಅವರು ಇತರ ಆ್ಯತ್ಲೀಟ್‌ಗಳೊಂದಿಗೆ ಚರ್ಚಿಸಿದಾಗ ಸಂಘಟಕರು ನೀಡಿದ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಇದ್ದಿದ್ದು ತಿಳಿದು ಬಂದಿದೆ. ಗೊತ್ತಾಗದೇ ನಡೆದ ಈ ತಪ್ಪಿಗೆ ಕ್ಷಮೆ ಕೇಳಿ ಮೌಮಾ ಲಗೇಜ್ ಬಿಡಿಸಿಕೊಂಡಿದ್ದಾರೆ. ಅಷ್ಟರ ನಡುವೆಯೇ ಕ್ರೀಡಾ ಸಚಿವ ರಾಥೋಡ್ ಮಧ್ಯಪ್ರವೇಶಿಸಿ, ವಿತ್ತ ಇಲಾಖೆಗೆ ಪರಿಸ್ಥಿತಿ ಸರಿಪಡಿಸುವಂತೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.